AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿ ಕನಸಿನ ಭೂ ಗ್ಯಾರಂಟಿಗೆ ಭರ್ಜರಿ ರೆಸ್ಪಾನ್ಸ್: 6ನೇ ಸುತ್ತಿನ ನನ್ನ ಖಾತೆ ನನ್ನ ಹಕ್ಕು ಅಭಿಯಾನ ಯಶಸ್ವಿ

ರಾಜ್ಯ ಸರ್ಕಾರದ 'ನನ್ನ ಖಾತೆ ನನ್ನ ಹಕ್ಕು' ಅಭಿಯಾನದ ಆರನೇ ಸುತ್ತು ಯಶಸ್ವಿಯಾಗಿದೆ. ಸರ್ಕಾರದ ಭೂ ಗ್ಯಾರಂಟಿಗೆ ಉತ್ತಮ ಸ್ಪಂದನೆ ದೊರೆತಿದೆ. 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಗರಿಕರಿಗೆ ಖಾತಾ ಸಂಬಂಧಿತ ಸಮಸ್ಯೆಗಳಿಗೆ, ವಿಶೇಷವಾಗಿ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ಒಂದೇ ವೇದಿಕೆಯಲ್ಲಿ ಪರಿಹಾರ ದೊರೆಯುತ್ತಿರುವುದು ಜನರಿಗೆ ಸಹಕಾರಿಯಾಗಿದೆ.

ಡಿಕೆಶಿ ಕನಸಿನ ಭೂ ಗ್ಯಾರಂಟಿಗೆ ಭರ್ಜರಿ ರೆಸ್ಪಾನ್ಸ್: 6ನೇ ಸುತ್ತಿನ ನನ್ನ ಖಾತೆ ನನ್ನ ಹಕ್ಕು ಅಭಿಯಾನ ಯಶಸ್ವಿ
ನನ್ನ ಖಾತೆ ನನ್ನ ಹಕ್ಕು ಅಭಿಯಾನ Image Credit source: tv9 kannada
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Jun 20, 2026 | 7:19 PM

Share

ಬೆಂಗಳೂರು, ಜೂನ್​ 20: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮಹತ್ವಾಕಾಂಕ್ಷೆಯ ‘ನನ್ನ ಖಾತೆ ನನ್ನ ಹಕ್ಕು’ ಅಭಿಯಾನ (Nanna Khata, Nanna Hakku Campaign) ಇಂದು ಕೂಡ ಯಶಸ್ವಿಯಾಗಿ ಮುಂದುವರೆದಿದೆ. ನಗರದ ಆಸ್ತಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಈ ‘ಭೂ ಗ್ಯಾರಂಟಿ’ (Property guarantee) ಯೋಜನೆ ನಾಗರಿಕರಿಗೆ ವರದಾನವಾಗಿದೆ. ಬೆಂಗಳೂರಿನಲ್ಲಿ ನಡೆದ 6ನೇ ಸುತ್ತಿನ ಈ ಅಭಿಯಾನಕ್ಕೆ ಜನಸಾಮಾನ್ಯರ ಉತ್ತಮ ಸ್ಪಂದನೆ ದೊರೆತಿದೆ.

ಮುಖ್ಯಾಂಶಗಳು

  • ನನ್ನ ಖಾತೆ ನನ್ನ ಹಕ್ಕು ಅಭಿಯಾನದ ಆರನೇ ಸುತ್ತು ಯಶಸ್ಸು
  • ಬಿ ಟು ಎ ಖಾತಾ ಪರಿವರ್ತನೆ ಮತ್ತು ಇ-ಖಾತಾ ಸೇವೆಗಳ ಅನುಕೂಲ
  • ಭೂ ಗ್ಯಾರಂಟಿಯ ಪ್ರಯೋಜನಗಳು ಮತ್ತು ನಾಗರಿಕರ ಉತ್ಸಾಹಭರಿತ ಸ್ಪಂದನೆ

50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜರುಗಿದ ಅಭಿಯಾನ

ನಗರದಲ್ಲಿ ಇಂದು ಆರನೇ ಸುತ್ತಿನ ‘ನನ್ನ ಖಾತೆ ನನ್ನ ಹಕ್ಕು’ ಅಭಿಯಾನವು 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜರುಗಿದ್ದು, ಸರ್ಕಾರ ಘೋಷಿಸಿರುವ ಆರನೇ ಗ್ಯಾರಂಟಿಯ ಭಾಗವಾಗಿ ನಾಗರಿಕರಿಗೆ ಖಾತಾ ಸಂಬಂಧಿತ ಸಮಸ್ಯೆಗಳ ಪರಿಹಾರ ಒದಗಿಸುತ್ತಿದೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ಮೂಲಕ ಜನರಿಗೆ ಸುಲಭವಾಗಿ ಸೇವೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿ ಸೇರಿದಂತೆ ಹಲವು ಪ್ರದೇಶಗಳ ನಾಗರಿಕರು ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಸಲ್ಲಿಸಿದರು.

ಇದನ್ನೂ ಓದಿ: 6ನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್, ಬೆಂಗಳೂರಿಗರಿಗೆ ಬಂಪರ್ ಗಿಫ್ಟ್!

ಬಿ ಟು ಎ ಖಾತಾ ಪರಿವರ್ತನೆಗೆ ಸರ್ಕಾರ ಈಗಾಗಲೇ ವಿನಾಯಿತಿ ಘೋಷಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿ ಮೌಲ್ಯದ ಶೇ. 5 ರಷ್ಟು ಶುಲ್ಕವನ್ನು ಶೇ.2ಕ್ಕೆ ಇಳಿಕೆ ಮಾಡಿದೆ. ಕೇಂದ್ರಗಳಲ್ಲಿ ಇ-ಖಾತಾ, ಹೊಸ ಇ-ಖಾತಾ ನೋಂದಣಿ, ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ, ತಿದ್ದುಪಡಿಗಳು ಹಾಗೂ ವಿವಿಧ ಅಹವಾಲುಗಳ ತ್ವರಿತ ಪರಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಮುಂದಿನ 2 ತಿಂಗಳ ಕಾಲ ಪ್ರತಿ ಶನಿವಾರ ಅಭಿಯಾನ ನಡೆಯಲಿದೆ.

ಇದನ್ನೂ ಓದಿ: ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ; 50 ಲಕ್ಷ ಅನಿವಾಸಿ ಭಾರತೀಯರ ನೆರವಿಗೆ ನಿಂತ ರಾಜ್ಯ ಸರ್ಕಾರ

ಸದ್ಯ ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕಳೆದ 5 ಸುತ್ತಿನ ಅಭಿಯಾನದಲ್ಲಿ 12,629 ಜನರು ಭೇಟಿ ನೀಡಿದ್ದರೆ, 5,351 ಅರ್ಜಿಗಳ ವಿಲೇವಾರಿ ಯಶಸ್ವಿಯಾಗಿ ನಡೆದಿದೆ. ಬಾಕಿ ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು, ನಾಗರಿಕರ ಅನುಕೂಲತೆಯನ್ನು ಹೆಚ್ಚಿಸುವುದು, ಆಡಳಿತದಲ್ಲಿ ಪಾರದರ್ಶಕತೆಯನ್ನು ಬಲಪಡಿಸುವುದು ಹಾಗೂ ಸುಲಭ, ಪರಿಣಾಮಕಾರಿ ಮತ್ತು ನಾಗರಿಕ ಸ್ನೇಹಿ ಇ-ಖಾತಾ ಸೇವೆಗಳನ್ನು ಒದಗಿಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us