
ಚಿಕ್ಕಬಳ್ಳಾಪುರ: ಮಾಜಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಆಟ ಇಲ್ಲಿ ನಡೆಯುವುದಿಲ್ಲ. ಮೊದಲು ಅವರು ತಮ್ಮ ಕ್ಷೇತ್ರ ಕಾಪಾಡಿಕೊಳ್ಳಲಿ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಶಿವಶಂಕರರೆಡ್ಡಿ ನಂಬಿಕೆ ದ್ರೋಹಿ. ನಾನು ಅವರಂತೆ ಕುತಂತ್ರ ರಾಜಕಾರಣ ಮಾಡುವುದಿಲ್ಲ. ನಾನು ನೇರಾನೇರ ರಾಜಕಾರಣಿ ಎಂದು ಸುಧಾಕರ್ ಟಾಂಗ್ ನೀಡಿದ್ದಾರೆ.
ಕೆಟ್ಟ ಸಂಸ್ಕೃತಿಯ ವ್ಯಕ್ತಿ ಸುಧಾಕರ್ ಕಾಂಗ್ರೆಸ್ನಿಂದ ತೊಲಗಿದ್ದು ಪಕ್ಷಕ್ಕೆ ಒಳ್ಳೆಯದಾಯಿತು ಎಂದು ಎನ್.ಹೆಚ್.ಶಿವಶಂಕರ್ ರೆಡ್ಡಿ ಮೊನ್ನೆಯಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದರು.
Published On - 9:34 am, Sun, 17 November 19