ರಾಜಾರೋಷವಾಗಿ ಆನೆಗಳ ಸುತ್ತಾಟ, ಆತಂಕದಲ್ಲಿ ಜನರು
ಕೊಡಗು: ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಬಳಿಯ ಕಟ್ಟೆಪುರದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. 9 ಆನೆಗಳ ಒಂದು ಗುಂಪು, 7 ಆನೆಯ ಮತ್ತೊಂದು ಗುಂಪಿನ ಜೊತೆ ಒಂಟಿ ಆನೆ ಜನವಸತಿ ಪ್ರದೇಶಗಳಲ್ಲಿ ರಾಜಾರೋಷವಾಗಿ ಸುತ್ತಾಡುತ್ತಿವೆ. ಹೇಮಾವತಿ ಹಿನ್ನೀರು ಪ್ರದೇಶದ ಹಾಡ್ಲಿ ಅರಣ್ಯದಿಂದ ನಾಡಿಗೆ ಬಂದಿರುವ ಕಾಡಾನೆಗಳು, ರೈತರ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಬೆಳೆ ನಾಶವಾಗುವ ಆತಂಕದಲ್ಲಿ ಜನರಿದ್ದಾರೆ. ಗ್ರಾಮಸ್ಥರಿಗೆ ಆನೆ ದಾಳಿ ಭೀತಿ ಎದುರಾಗಿದ್ದು, ತಕ್ಷಣ ಆನೆಗಳನ್ನು ಕಾಡಿಗಟ್ಟುವಂತೆ ಕಟ್ಟೆಪುರ ಸುತ್ತಮುತ್ತಲ ಗ್ರಾಮದ ಜನರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೊಡಗು: ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಬಳಿಯ ಕಟ್ಟೆಪುರದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. 9 ಆನೆಗಳ ಒಂದು ಗುಂಪು, 7 ಆನೆಯ ಮತ್ತೊಂದು ಗುಂಪಿನ ಜೊತೆ ಒಂಟಿ ಆನೆ ಜನವಸತಿ ಪ್ರದೇಶಗಳಲ್ಲಿ ರಾಜಾರೋಷವಾಗಿ ಸುತ್ತಾಡುತ್ತಿವೆ.
ಹೇಮಾವತಿ ಹಿನ್ನೀರು ಪ್ರದೇಶದ ಹಾಡ್ಲಿ ಅರಣ್ಯದಿಂದ ನಾಡಿಗೆ ಬಂದಿರುವ ಕಾಡಾನೆಗಳು, ರೈತರ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಬೆಳೆ ನಾಶವಾಗುವ ಆತಂಕದಲ್ಲಿ ಜನರಿದ್ದಾರೆ. ಗ್ರಾಮಸ್ಥರಿಗೆ ಆನೆ ದಾಳಿ ಭೀತಿ ಎದುರಾಗಿದ್ದು, ತಕ್ಷಣ ಆನೆಗಳನ್ನು ಕಾಡಿಗಟ್ಟುವಂತೆ ಕಟ್ಟೆಪುರ ಸುತ್ತಮುತ್ತಲ ಗ್ರಾಮದ ಜನರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.




