ಬೆಂಗಳೂರು, ನವೆಂಬರ್ 22: ಜಾತಿಗಣತಿ ವರದಿಯಲ್ಲಿ ಏನಿದೆ ಅಂತಾ ನಾನು ನೋಡಿಲ್ಲ. ವರದಿಯ ಮೂಲ ಪ್ರತಿ ಕಾಣೆಯಾದ ಬಗ್ಗೆ ನನಗೆ ಗೊತ್ತಿಲ್ಲ. ಜಾತಿಗಣತಿ ವರದಿ ನೋಡಿ ಪರಿಶೀಲನೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆ ಅವಧಿ ಈ ತಿಂಗಳು ಮುಗಿಯುತ್ತದೆ. ಜಾತಿಗಣತಿ ವರದಿ ಕೊಡುವವರೆಗೆ ಮುಂದುವರಿಯಲು ಹೇಳಿದ್ದೇನೆ ಎಂದರು.
ಜಾತಿಗಣತಿ ವರದಿಗೆ ಒಕ್ಕಲಿಗ ಸಮುದಾಯ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಜಾತಿಗಣತಿ ವರದಿಯಲ್ಲಿ ಏನಿದೆ ಅಂತಾ ನೋಡಬೇಕಲ್ವಾ. ಡಿಸೆಂಬರ್ ಅಥವಾ ಜನವರಿಯೊಳಗೆ ವರದಿ ಸಲ್ಲಿಕೆಗೆ ಹೇಳಿದ್ದೇನೆ. ಒಕ್ಕಲಿಗರ ಸಂಘದವರು ಕೂಡ ನಿನ್ನೆ ಬಂದು ಮನವಿ ಕೊಟ್ಟಿದ್ದಾರೆ. ವರದಿ ಕೊಟ್ಟ ಮೇಲೆ ಒಕ್ಕಲಿಗರ ಮನವಿ ಪರಿಶೀಲನೆ ಮಾಡುತ್ತೇವೆ. ವರದಿಯನ್ನು ನಾನೇ ನೋಡಿಲ್ಲ, ಬೇರೆಯವರು ಹೇಗೆ ನೋಡುತ್ತಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ಫುಡ್ ಸೆಕ್ಯೂರಿಟಿ ಆ್ಯಕ್ಟ್ ತಂದಿದ್ದು ಡಾ.ಮನಮೋಹನ್ ಸಿಂಗ್. ಪ್ರಧಾನಿ ನರೇಂದ್ರ ಮೋದಿ ನಾನೇ ವಿಶ್ವಗುರು ಅಂತಾ ಹೇಳುತ್ತಾರೆ. ನ್ಯಾಷನಲ್ ಫ್ಯಾಮಿಲಿ ಹೆಲ್ತ್ ರಿಪೋರ್ಟ್ ಇದೆ. ಸಮಾಜದಲ್ಲಿ ಎಲ್ಲರೂ ಕೂಡ ಆರೋಗ್ಯವಂತರಾಗಿ ಬದುಕಬೇಕು. ಕೆಲವು ರೋಗ ನಮ್ಮ ಪ್ರಯತ್ನದಿಂದ ತಡೆಗಟ್ಟಲು ಸಾಧ್ಯತೆ ಇದೆ. ನಾವು ಪ್ರತಿಯೊಬ್ಬರೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು
ನಮ್ಮ ಸಮಾಜದಲ್ಲಿ ಬಡತನ ಹಾಗೂ ಅನಕ್ಷರತೆ ಇದೆ ಎಂದರು.
ಇದನ್ನೂ ಓದಿ: ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ: ಸಿದ್ದರಾಮಯ್ಯ
ಹಳ್ಳಿಗಳಲ್ಲಿ ಬಡವರು ರೊಟ್ಟಿ, ಖಾರ ತಿಂದು ಜೀವನ ಮಾಡ್ತಾರೆ. ಹಸಿವುಮುಕ್ತ ರಾಜ್ಯ ಮಾಡಬೇಕೆಂದು ಅನ್ನಭಾಗ್ಯ ಜಾರಿ ಮಾಡಿದೆವು. ಶಾಲೆಗಳಲ್ಲಿ ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ವಿತರಿಸಲಾಗಿದೆ. ಮೊಟ್ಟೆ ತಿನ್ನುವವರಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡ್ತೀವಿ ಎಂದು ತಿಳಿಸಿದರು.
ಇದನ್ನೂ ಓದಿ: ಜಾತಿ ಗಣತಿಯ ವರದಿ ಕಾಣೆ, ಜಯಪ್ರಕಾಶ್ ಹೆಗ್ಡೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ; ತಡವಾಗಿ ಬೆಳಕಿಗೆ
185 ಕೋಟಿ 75 ಲಕ್ಷ ರೂ. ಹಣ ಅನೀಮೀಯ ಮುಕ್ತ ಕರ್ನಾಟಕ ಮಾಡುತ್ತೇವೆ. ಮೊಟ್ಟೆ ತಿನ್ನೋರಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುತ್ತೇವೆ. ಅನೀಮಿಯ ಬರೋದು ಕಬ್ಬಿಣದ ಅಂಶ ಕಡಿಮೆ ಇದ್ದಾಗ ಮಾತ್ರ ಕಬ್ಬಿಣ ಅಂಶ ತರಕಾರಿ, ಮೊಟ್ಟೆ ಬೇರೆ ಬೇರೆ ಆಹಾರದಲ್ಲಿ ಜಾಸ್ತಿ ಸಿಗುತ್ತೆ. ಇವೆಲ್ಲ ಹೆಚ್ಚು ಬಳಸುವ ಕೆಲಸ ಆಗಬೇಕಿದೆ.
ಸುಮ್ಮನೇ ಕಾರ್ಯಕ್ರಮ ಮಾಡಿದರೆ ಆಗಲ್ಲ. ಅನೀಮಿಯ ಮುಕ್ತ ಆಗೋದ್ರಲ್ಲಿ ಕೆಲಸ ಮಾಡಿ. ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.