AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯನ್ನೇ ಕೊಂದ ಕಟುಕ ಮಗ: ಬಳಿಕ ಹೆತ್ತಕರುಳಿಗೆ ಕೊಳ್ಳಿ ಇಟ್ಟು ಎಸ್ಕೇಪ್ ಆಗಿದ್ದವ ಉಡುಪಿಯಲ್ಲಿ ಸಿಕ್ಕ

ಅಮ್ಮ ಅರ್ಥಾತ್ ತಾಯಿ ಅಂದರೆ ಮಕ್ಕಳಿಗಾಗಿ ಜೀವವನ್ನೇ ಮೀಸಲಿಡೋ ತ್ಯಾಗಮಯಿ..ತಾಯಿಯನ್ನ ಎಷ್ಟು ಹೊಗಳಿದರೂ ಸಾಲುವುದಿಲ್ಲ..ಅಂತಹ ಜೀವವನ್ನೇ ಪಾಪಿ ಮಗ ಕೊಂದಿದ್ದಾನೆ. ಮಾರಕಾಸ್ತ್ರಗಳಿಂದ ಹೊಡೆದು ಬಳಿಕ ಬಳಿಕ ಮನೆಯಿಂದಿನ ಕಾಡಿಗೆ ಎಸೆದಿದ್ದಾನೆ. ನಂತರ ಬಳಿಕ ಪೆಟ್ರೋಲ್ ಹಾಕಿ ಹೆತ್ತಕರುಳಿಗೆ ಕೊಳ್ಳಿ ಇಟ್ಟಿದ್ದಾನೆ. ಮಂಜೇಶ್ವರದಲ್ಲಿ ರಕ್ತ ಹರಿಸಿದ ಕ್ರಿಮಿ ಕೊನೆಗೂ ಉಡುಪಿಯಲ್ಲಿ ಲಾಕ್ ಆಗಿದ್ದಾನೆ.

ತಾಯಿಯನ್ನೇ ಕೊಂದ ಕಟುಕ ಮಗ: ಬಳಿಕ ಹೆತ್ತಕರುಳಿಗೆ ಕೊಳ್ಳಿ ಇಟ್ಟು ಎಸ್ಕೇಪ್ ಆಗಿದ್ದವ ಉಡುಪಿಯಲ್ಲಿ ಸಿಕ್ಕ
Son Kills Mother
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jun 26, 2025 | 10:06 PM

Share

ಮಂಗಳೂರು/ಉಡುಪಿ, (ಜೂನ್ 26): ಕಟುಕ ಪುತ್ರನೊಬ್ಬ (Son) ತನ್ನ ಹೆತ್ತ ತಾಯಿಯನ್ನೇ (Mother) ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಜೂನ್(ಜೂನ್ 25) ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ್ದ ತಾಯಿಯನ್ನು ಮಾರಕಾಸ್ರ್ರಗಳಿಂದ ಹೊಡೆದು ಬಳಿಕ ಕಾಡಿನೊಳಗೆ ಎಳೆದೊಯ್ದು ಬೆಂಕಿ ಹಚ್ಚಿ ಸುಟ್ಟಾಕ್ಕಿದ್ದಾನೆ. ಈ ಭಯಾನಕ ಘಟನೆ ಮಂಗಳೂರು-ಕಾಸರಗೋಡು ಮದ್ಯೆ ಇರೋ ಮಂಜೇಶ್ವರದ (Manjeshwar) ವರ್ಕಾಡಿಯಲ್ಲಿ ನಡೆದಿದೆ. ತಾಯಿಯನ್ನು ಕೊಂದು ಎಸ್ಕೇಪ್ ಆಗಿದ್ದ ಪಾಪಿ ಮಗ ಮೆಲ್ವಿನ್ ಮೊಂತೇರೊ ಉಡುಪಿಯಲ್ಲಿ ಸಿಕ್ಕಿಬಿದ್ದಿದ್ದಾನೆ.  ತಾಯಿಯನ್ನ ಹತ್ಯೆ ಮಾಡಿದ ಬಳಿಕ ಈ ಪಾಪಿ ಪಕ್ಕದ ಮನೆಯಲ್ಲಿದ್ದ ಅತ್ತೆ ಕರೆದು ಕೊಲೆ ಮಾಡಲು ಮುಂದಾಗಿದ್ದಾನೆ.

ಮಂಗಳೂರು-ಕಾಸರಗೋಡು ಮದ್ಯೆ ಇರೋ ಮಂಜೇಶ್ವರದ ವರ್ಕಾಡಿ ನಿವಾಸಿ ಮೆಲ್ವಿನ್ ಮೊಂತೇರೊ ತಾಯಿಯನ್ನ ಕೊಂದ ಮಗ. ಕೇರಳದ ಕಾಸರಗೋಡು ಜಿಲ್ಲೆಯ ವರ್ಕಾಡಿಯಲ್ಲಿ ಈತ ತನ್ನ ತಾಯಿ 60 ವರ್ಷದ ಹಿಲ್ಡಾ ಜೊತೆ ಈ ಮನೆಯಲ್ಲಿ ವಾಸವಿದ್ದ. ತಂದೆ ಲೂಯಿಸ್ ಮೊಂತೇರೋ ತೀರಿಹೋಗಿದ್ದಾರೆ. ಇನ್ನು ಹಿಲ್ಡಾಗೆ ಮತ್ತೊಬ್ಬ ಅಲ್ವಿನ್ ಮೊಂತೇರೋ ಎಂಬ ಮಗ ಗಲ್ಫ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನು ನಿನ್ನೆ (ಜೂನ್ 25) ಮದ್ಯರಾತ್ರಿ ಒಂದು ಗಂಟೆಗೆ ತಾಯಿ ಹಿಲ್ಡಾಳ ತಲೆಗೆ ಮಗ ಮೆಲ್ವಿನ್ ಮಾರಕಾಸ್ತ್ರದಿಂದ ಹೊಡೆದಿದ್ದಾನೆ. ಬಳಿಕ ಅಲ್ಲಿಂದ ಎಳೆದುಕೊಂಡು ಮನೆಯ ಹಿಂಭಾಗಕ್ಕೆ ಹೋಗಿ ಕಾಡಿನಂತಹ ಜಾಗದಲ್ಲಿ ಎಸೆದಿದ್ದಾನೆ. ಬಳಿಕ ಪೆಟ್ರೋಲ್ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದ.

ಇದನ್ನೂ ಓದಿ: ಮಹಿಳೆ ಶಪಥಕ್ಕಾಗಿ ಬಿತ್ತು‌ ಮೂರು ಹೆಣ: ತನಿಖೆಯಲ್ಲಿ ಕಿಲ್ಲರ್‌ ಲೇಡಿಯ ಅಸಲಿ ಬಣ್ಣ ಬಯಲು…!

ಅತ್ತೆಯನ್ನೂ ಹತ್ಯೆಗೆ ಯತ್ನಿಸಿದ್ದ

ಇನ್ನು ತಾಯಿ ಹಿಲ್ಡಾಳ ಪಕ್ಕದ ಮನೆಯಲ್ಲಿ ಹಿಲ್ಡಾಳ ತಮ್ಮ ವಿಕ್ಟರ್ ಮನೆ ಇತ್ತು. ವಿಕ್ಟರ್ ವಿದೇಶದಲ್ಲಿ ಕೆಲಸದಲ್ಲಿದ್ದು, ಆತನ ಪತ್ನಿ 30 ವರ್ಷದ ಲೊಲಿಟಾ ತನ್ನ 5 ವರ್ಷದ ಮಗುವಿನೊಂದಿಗೆ ವಾಸವಿದ್ದಳು. ತಾಯಿಯನ್ನು ಕೊಂದ ನಂತರ ಮೆಲ್ವಿನ್ ತನ್ನ ಅತ್ತೆ ಲೊಲಿಟಾ ಮನೆಯ ಬಾಗಿಲು ಬಡಿದಿದ್ದಾನೆ. ಲೊಲಿಟಾಳಿಗೆ ತನ್ನ ತಾಯಿಗೆ ಹುಷಾರಿಲ್ಲ. ಸೀರಿಯಸ್ ಆಗಿದ್ದಾಳೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಲೊಲಿಟಾ ಮಗಲಿದ್ದ ಮಗುವನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಓಡೋಡಿ ಬಂದಿದ್ದಾಳೆ. ಮನೆಗೆ ಬಂದ ಲೊಲಿಟಾಳಿಗೆ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಆಗ ಅಲ್ಲಿಂದಲೊಲಿಟಾ ತಪ್ಪಿಸಿಕೊಂಡು ಕಾಡಿಗೆ ಓಡಿದ್ದಾಳೆ. ಮುಂಜಾನೆ 5 ಗಂಟೆಗೆ ಒಂದು ಮನೆ ಬಳಿ ಹೋದಾಗ ಅಲ್ಲಿಯವರು ನೋಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಸಿದ್ದಾರೆ. ಸದ್ಯ ಲೊಲಿಟಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಎಸ್ಕೇಪ್ ಆಗಿದ್ದವ ಉಡುಪಿಯಲ್ಲಿ ಲಾಕ್

ಇನ್ನು ತಾಯಿಯನ್ನು ಕೊಂದು ಅತ್ತೆಯನ್ನು ಕೊಲ್ಲಲು ಯತ್ನಿಸಿದ ಪಾಪಿ ಮೆಲ್ವಿನ್ ರಾತ್ರಿ ಇಡೀ ಮನೆಯಲ್ಲಿ ಕಾಲ ಕಳೆದಿದ್ದಾನೆ. ಬಳಿಕ ಬೆಳಗ್ಗೆ ವಿಚಾರ ಊರಿನವರಿಗೆ ತಿಳಿಯುತ್ತಲೆ ಒಬ್ಬೊಬ್ಬರೆ ಅಲ್ಲಿಗೆ ಬಂದಿದ್ದಾರೆ. ಅಲ್ಲಿಂದ ಮೆಲ್ವಿನ್ 2 ಕಿಲೋಮೀಟರ್ ಓಡಿ ಹೋಗಿ ಆಟೋ ಹಿಡಿದು ಹೊಸಂಗಡಿಗೆ ತಲುಪಿದ್ದಾನೆ. ಬಳಿಕ ಮಂಗಳೂರು ಬಸ್ ಹತ್ತಿ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ನಲ್ಲಿ ಇಳಿದಿದ್ದಾನೆ. ಅಲ್ಲಿಂದ ಕುಂದಾಪುರ ಬಸ್ ಹತ್ತಿ ಬೈಂದೂರು ತಲುಪಿದ್ದಾನೆ.

ಮೆಲ್ವಿನ್ ಅರ್ಥ್ ಮೂವರ್ಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಬೈಂದೂರು ಸುತ್ತಾಮುತ್ತಾ ಕಲ್ಲಿನಕೋರೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ. ಆದ್ರಿಂದ ಆ ಜಾಗಕ್ಕೆ ಹೋಗಲು ಆತನ ಇಲ್ಲಿಗೆ ಬಂದಿದ್ದ. ಇನ್ನು ಒಂದು ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ಬೈಂದೂರು ಪೊಲೀಸರ ಸಹಕಾರದಿಂದ ಕೇರಳ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿ ಮೆಲ್ವಿನ್ ಮೊಂತೇರೋ ಏನು ಬಾಯಿ ಬಿಡುತ್ತಿಲ್ಲ. ನನಗಿನ್ನು ಮದುವೆ ಆಗಿಲ್ಲ ಅಂತಷ್ಟೆ ಪೊಲೀಸರಿಗೆ ಹೇಳಿದ್ದಾನೆ ಎನ್ನುವುದು ತಿಳಿದು ಬಂದಿದೆ. ಇನ್ನು ಅಲ್ವಿನ್ ವಿದೇಶದಿಂದ ಬಂದ ಬಳಿಕ ಹಿಲ್ಡಾ ಅವರ ಅಂತ್ರಸಂಸ್ಕಾರ ನಡೆಯಲಿದೆ. ಇನ್ನು ಪೊಲೀಸರ ವಿಚಾರಣೆಯಲ್ಲಿ ಅಸಲಿ ಕಾರಣ ತಿಳಿದು ಬರಲಿದೆ.

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ