ನಾನು ಕಾಂಗ್ರೆಸ್ ಸೇರುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲ, ಅವರೂ ಸಹ ಆಹ್ವಾನ ನೀಡಿಲ್ಲ: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ
ರಾಜಕೀಯವೇ ಬೇರೆ, ಪರಸ್ಪರ ವಿಶ್ವಾಸವೇ ಬೇರೆ. ಅವರೂ ಕೂಡ ನನ್ನನ್ನು ಪಕ್ಷ ಸೇರ್ಪಡೆ ಆಗುವಂತೆ ಆಹ್ವಾನ ನೀಡಿಲ್ಲ. ನಾನು ಕೂಡ ಕಾಂಗ್ರೆಸ್ ಸೇರುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಬಿಜೆಪಿ ಮಾಜಿ ಶಾಸಕ M.P.ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 25: ರಾಜಕೀಯವೇ ಬೇರೆ, ಪರಸ್ಪರ ವಿಶ್ವಾಸವೇ ಬೇರೆ. ಅವರೂ ಕೂಡ ನನ್ನನ್ನು ಪಕ್ಷ ಸೇರ್ಪಡೆ ಆಗುವಂತೆ ಆಹ್ವಾನ ನೀಡಿಲ್ಲ. ನಾನು ಕೂಡ ಕಾಂಗ್ರೆಸ್ ಸೇರುತ್ತೇನೆ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಬಿಜೆಪಿ ಮಾಜಿ ಶಾಸಕ M.P.ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ. ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಭೇಟಿ ವೇಳೆ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ರಾಜಕೀಯೇತರ ಹಲವು ವಿಚಾರಗಳನ್ನು ಜೊತೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ಗೆ ಪ್ರಬಲ ಆಕಾಂಕ್ಷಿ. ದಾವಣಗೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಮೊದಲೇ ಹೇಳಿದ್ದೇನೆ ಎಂದರು.
ಬರದ ವಿಚಾರವಾಗಿ ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿದ ರೇಣುಕಾಚಾರ್ಯ
ಬರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಬಂದಿದ್ದೇನೆ. ಡಿಕೆ ಶಿವಕುಮಾರ್ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಭೇಟಿಯಾಗಿದ್ದೆ. ಹೀಗಾಗಿ ಇಂದು ಭೇಟಿಯಾಗಿ ಮಾತನಾಡಿದ್ದೇನೆ ಎಂದು ಹೇಳಿದರು. ಅದೇ ರೀತಿಯಾಗಿ ಇಂದು ವರಮಹಾಲಕ್ಷ್ಮಿ ಪೂಜೆ ಹಿನ್ನೆಲೆ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಮತ್ತು ಕೃಷ್ಣ ಬೈರೇಗೌಡರನ್ನೂ ಭೇಟಿಯಾಗಿರುವೆ. ಹೊನ್ನಾಳಿ ಕ್ಷೇತ್ರವನ್ನ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಮನವಿ ಮಾಡಿರುವೆ. ಭೇಟಿ ಮಾಡಬಾರದಂತ ಏನಿಲ್ಲ ಎಂದು ತಿಳಿಸಿದರು.
ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳನ್ನು ಪ್ರಧಾನಮಂತ್ರಿ ಮೋದಿ ಅಭಿನಂದಿಸಲಿದ್ದಾರೆ. ಬಿಜೆಪಿ-ಕಾಂಗ್ರೆಸ್ ಕ್ರೆಡಿಟ್ ಫೈಟ್ ಬಗ್ಗೆ ನಾನು ಮಾತನಾಡುವುದಿಲ್ಲ.
ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ಕಿಡಿ
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿದೆ. ಬರ ಎಂದು ಘೋಷಣೆಗೆ ಕೇಂದ್ರದ ಕೆಲ ನಿಯಮಗಳು ಅಡ್ಡಿಯಾಗಿವೆ. ರಾಜ್ಯದಲ್ಲಿ ಬರ ಘೋಷಿಸಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರದ ಬಳಿ ಹೋಗಲಿ ಎಂದರು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ; ಶಾಸಕ ಭೈರತಿ ಬಸವರಾಜ ಸ್ಪಷ್ಟನೆ
ಪ್ರಧಾನಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಒತ್ತಾಯಿಸಲಿ. ಬರ ಘೋಷಣೆಗೆ ಕೇಂದ್ರ ಸರ್ಕಾರದಿಂದ ಕೆಲ ಮಾನದಂಡಗಳು ಇವೆ. ಬರ ಘೋಷಣೆ ವಿಚಾರವಾಗಿ ಸಿಎಂ, ಕಂದಾಯ ಸಚಿವರು ಮಾತಾಡಿದ್ದಾರೆ. ಎನ್ಡಿಆರ್ಎಫ್ ನಿಯಮದ ಪ್ರಕಾರ ಕೇಂದ್ರ ಸಹಾಯಕ್ಕೆ ಬರಬೇಕಿದೆ. ಬೊಮ್ಮಾಯಿ ರಾಜಕೀಯ ಮಾಡೋದನ್ನು ಬಿಟ್ಟು ರೈತರಿಗೆ ಸಹಾಯ ಮಾಡಲಿ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.