ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟಿದ್ದ ಮಕರಬ್ಬಿ ಗ್ರಾಮಕ್ಕೆ ಮನೀಶ್ ಮೌದ್ಗೀಲ್ ಭೇಟಿ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 07, 2021 | 5:00 PM

ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿ ಗ್ರಾಮಕ್ಕೆ ಹಿರಿಯ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ನೇತೃತ್ವದ ಉನ್ನತ ಅಧಿಕಾರಿಗಳ ತನಿಖಾ ತಂಡ ಗುರುವಾರ (ಅ.7) ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟಿದ್ದ ಮಕರಬ್ಬಿ ಗ್ರಾಮಕ್ಕೆ ಮನೀಶ್ ಮೌದ್ಗೀಲ್ ಭೇಟಿ
ಐಎಎಸ್​ ಮನೀಶ್ ಮೌದ್ಗಿಲ್​
Follow us

ಬಳ್ಳಾರಿ: ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿ ಗ್ರಾಮಕ್ಕೆ ಹಿರಿಯ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ನೇತೃತ್ವದ ಉನ್ನತ ಅಧಿಕಾರಿಗಳ ತನಿಖಾ ತಂಡ ಗುರುವಾರ (ಅ.7) ಭೇಟಿ ನೀಡಿ ಪರಿಶೀಲನೆ ನಡೆಸಿತು.

ಘಟನೆಗೆ ಕಾರಣವೇನು ಎಂದು ತಂಡವು ಪರಿಶೀಲನೆ ನಡೆಸುತ್ತಿದೆ. ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಅರುಣ್, ಜಿಪಂ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಮಕರಬ್ಬಿ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ಸಭೆಯಲ್ಲಿ ಕಲುಷಿತ ನೀರಿನ ಬಗ್ಗೆ ಮನೀಶ್ ಮೌದ್ಗಿಲ್ ಮಾಹಿತಿ ಸಂಗ್ರಹಿಸಿದರು. ಸಭೆ ಬಳಿಕ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದೆ. ಪೈಪ್​ಲೈನ್ ವೀಕ್ಷಣೆ ಮಾಡಲಿದೆ. ಸಾವಿನ ಕುರಿತು ಟಿವಿ9 ನಿರಂತರ ವರದಿ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ ಮನೀಶ್ ಮೌದ್ಗಿಲ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ತನಿಖಾ ತಂಡ ರಚಿಸಿತ್ತು.

ಮಕರಬ್ಬಿಯಲ್ಲಿ ಏನಾಗಿತ್ತು? ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಒಟ್ಟು ಆರು ಮಂದಿ ಸಾವನ್ನಪ್ಪಿದ್ದರು. ಬೋರ್​ವೆಲ್​ನಿಂದ ನೀರು ಸರಬರಾಜಿಗೆ ಹೊಸ ಪೈಪ್​ಲೈನ್ ಅಳವಡಿಸುವ ಕಾಮಗಾರಿ ವೇಳೆ ಹಳೆಯ ಪೈಪ್​ಲೈನ್​ಗಳಿಗೆ ಧಕ್ಕೆಯಾಗಿತ್ತು. ಹಾಳಾದ ಪೈಪ್​ಗಳಲ್ಲಿ ಚರಂಡಿ ನೀರು ಮಿಶ್ರಣವಾಗಿದ್ದು, ಇದೇ ನೀರನ್ನು ಮಕರಬ್ಬಿ ಗ್ರಾಮಸ್ಥರು ಸೇವಿಸಿದ್ದರು. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಮಕರಬ್ಬಿ ಗ್ರಾಮದಲ್ಲಿ 200ಕ್ಕೂ ಹೆಚ್ಚು ಜನರು ವಾಂತಿಭೇದಿಯಿಂದ ಬಳಲಿದ್ದರು. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಯಲ್ಲಿ ಈ ಪೈಕಿ ಹಲವರು ಚಿಕಿತ್ಸೆ ಪಡೆದಿದ್ದರು.

ಇದನ್ನೂ ಓದಿ: ವಿಜಯನಗರ: ಕಲುಷಿತ ನೀರು ಸೇವಿಸಿ 6 ಜನರ ಸಾವು ಪ್ರಕರಣ, ಇಬ್ಬರು ಅಧಿಕಾರಿಗಳು ಅಮಾನತು ಇದನ್ನೂ ಓದಿ: ವಿಜಯನಗರ: ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಗಳಿಗೆ ತಲಾ 3 ಲಕ್ಷ ಪರಿಹಾರ ಘೋಷಣೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada