‘ನಮ್ಮ ಆಸ್ತಿ ಹಾಳು ಮಾಡಿದ್ರೆ ಸುಮ್ಮನೆ ಕೂರಬೇಕಾ, ನಮ್ಮಲ್ಲೂ ರಿವಾಲ್ವರ್ ಇವೆ’

ಬೆಳಗಾವಿ: ನಮ್ಮ ಆಸ್ತಿ ಹಾಳು ಮಾಡಿದ್ರೆ ನಾವು ಸುಮ್ಮನೆ ಕೂರಬೇಕಾ? ನಮ್ಮಲ್ಲಿ ರಿವಾಲ್ವರ್ ಇವೆ, ಅವನ್ನ ಪೂಜೆ ಮಾಡಬೇಕಾ? ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರಶ್ನಿಸಿದ್ದಾರೆ. ನಿನ್ನೆ ಮಂಗಳೂರಿನಲ್ಲಿ ಪೊಲೀಸರ ಫೈರಿಂಗ್​ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿಗೆ ವಿರೋಧ ಪಕ್ಷಗಳೇ ಹೊಣೆ. ಆಸ್ತಿ ಹಾಳು ಮಾಡುವವರನ್ನ ಗುಂಡಿಕ್ಕಿ ಕೊಲ್ಲಿ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಪುನರುಚ್ಚರಿಸಿದರು. ಪೌರತ್ವ ಕಾನೂನು ತಂದಿದ್ದು ಕಾಂಗ್ರೆಸ್ ಅವಧಿಯಲ್ಲಿ, ಆದರೆ ಆಗ ಜಾರಿಯಾಗಲಿಲ್ಲ. ಕಾಂಗ್ರೆಸ್ ಮತ್ತು ಕೆಲವು […]

‘ನಮ್ಮ ಆಸ್ತಿ ಹಾಳು ಮಾಡಿದ್ರೆ ಸುಮ್ಮನೆ ಕೂರಬೇಕಾ, ನಮ್ಮಲ್ಲೂ ರಿವಾಲ್ವರ್ ಇವೆ’
Follow us
ಸಾಧು ಶ್ರೀನಾಥ್​
|

Updated on:Dec 20, 2019 | 4:04 PM

ಬೆಳಗಾವಿ: ನಮ್ಮ ಆಸ್ತಿ ಹಾಳು ಮಾಡಿದ್ರೆ ನಾವು ಸುಮ್ಮನೆ ಕೂರಬೇಕಾ? ನಮ್ಮಲ್ಲಿ ರಿವಾಲ್ವರ್ ಇವೆ, ಅವನ್ನ ಪೂಜೆ ಮಾಡಬೇಕಾ? ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರಶ್ನಿಸಿದ್ದಾರೆ. ನಿನ್ನೆ ಮಂಗಳೂರಿನಲ್ಲಿ ಪೊಲೀಸರ ಫೈರಿಂಗ್​ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿಗೆ ವಿರೋಧ ಪಕ್ಷಗಳೇ ಹೊಣೆ. ಆಸ್ತಿ ಹಾಳು ಮಾಡುವವರನ್ನ ಗುಂಡಿಕ್ಕಿ ಕೊಲ್ಲಿ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಪುನರುಚ್ಚರಿಸಿದರು.

ಪೌರತ್ವ ಕಾನೂನು ತಂದಿದ್ದು ಕಾಂಗ್ರೆಸ್ ಅವಧಿಯಲ್ಲಿ, ಆದರೆ ಆಗ ಜಾರಿಯಾಗಲಿಲ್ಲ. ಕಾಂಗ್ರೆಸ್ ಮತ್ತು ಕೆಲವು ಪಕ್ಷಗಳು ಪ್ರಧಾನಿ ಮತ್ತು ಗೃಹಮಂತ್ರಿ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರವೇ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸ ಮಾಡಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

Published On - 4:04 pm, Fri, 20 December 19