ಕಣ್ಣು ಆಪರೇಷನ್ಗೆ ಕರೆದು ಎಡವಟ್ಟು: ಲೆನ್ಸ್ ಇಲ್ಲದಿದ್ರೂ ಅನಸ್ತೇಷಿಯಾ ಕೊಟ್ರು
ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ ಎನ್ನುವ ನಾಣ್ಣುಡಿಯಂತೆ ಲೆನ್ಸ್ ಇಲ್ಲದೇ ವ್ಯಕ್ತಿಗೆ ಕಣ್ಣಿನ ಆಪರೇಶನ್ ಮಾಡಲು ಅನಸ್ತೇಶಿಯಾ ಇಂಜೆಕ್ಷನ್ ನೀಡಿರುವ ಘಟನೆ ಶಿವಮೊಗ್ಗದ ಖಾಸಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಡೆದಿದೆ. ವ್ಯಕ್ತಿಯೋರ್ವನಿಗೆ ಕಣ್ಣಿನ ಆಪರೇಷನ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದು, ಕೊನೆ ಕ್ಷಣದಲ್ಲಿ ಲೆನ್ಸ್ ಇಲ್ಲದೆ ಕೈಬಿಡಲಾಗಿದೆ.
ಶಿವಮೊಗ್ಗ, (ಅಕ್ಟೋಬರ್ 23): ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ ಎನ್ನುವ ನಾಣ್ಣುಡಿಯಂತೆ ಲೆನ್ಸ್ ಇಲ್ಲದೇ ವ್ಯಕ್ತಿಗೆ ಕಣ್ಣಿನ ಆಪರೇಶನ್ ಮಾಡಲು ಅನಸ್ತೇಶಿಯಾ ಇಂಜೆಕ್ಷನ್ ನೀಡಿರುವ ಘಟನೆ ಶಿವಮೊಗ್ಗದ ಖಾಸಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಡೆದಿದೆ. ವ್ಯಕ್ತಿಯೋರ್ವನಿಗೆ ಕಣ್ಣಿನ ಆಪರೇಷನ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದು, ಕೊನೆ ಕ್ಷಣದಲ್ಲಿ ಲೆನ್ಸ್ ಇಲ್ಲದೆ ಕೈಬಿಡಲಾಗಿದೆ. ಹೌದು…. ಇನ್ನೇನು ಆಪರೇಷನ್ ಮಾಡಬೇಕು ಎಂದು ವ್ಯಕ್ತಿಯ ಅನಸ್ತೇಶಿಯಾ ಇಂಜೆಕ್ಷನ್ ಸಹ ನೀಡಲಾಗಿದೆ. ಆದ್ರೆ, ಲೆನ್ಸ್ ಲಭ್ಯ ಇಲ್ಲದ ಕಾರಣ ಆಪರೇಷನ್ ಕ್ಯಾನ್ಸಲ್ ಮಾಡಿದ್ದಾರೆ. ವೈದ್ಯರು ಮಾಡಿದ ಎಡವಟ್ಟಿಗೆ ಆಪರೇಷನ್ ಆಗದೇ ವ್ಯಕ್ತಿ ಕಣ್ಣಿಗೆ ಬ್ಯಾಂಡೇಜ್ ಹಾಕಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಈ ಘಟನೆಯಿಂದ ರೋಗಿ ಕುಟುಂಬಸ್ಥರು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ. ಕೊನೆಗೆ ಎರಡು ದಿನ ಬಿಟ್ಟು ಆಪರೇಷನ್ ಮಾಡುವುದಾಗಿ ವೈದ್ಯರು ಸಮಜಾಯಿಷಿ ನೀಡಿದ್ದಾರೆ.
