ಸ್ವಾತಂತ್ರ್ಯ ದಿನಕ್ಕೆ ಶುಭಾಶಯಗಳನ್ನು ತಿಳಿಸಲು ಐಪಿಎಸ್ ಅಧಿಕಾರಿ ಡಿ. ರೂಪಾ (D Roopa IPS) ಅವರು ರಾಷ್ಟ್ರೀಯ ಗೀತೆಯನ್ನು ಅದ್ಭುತವಾಗಿ ಹಾಡಿದ್ದಾರೆ. ಮಧುರ ಕಂಠದಲ್ಲಿ ಹಾಡಿರುವ ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು, ಶೇರ್ ಮಾಡಿದ ಕೆಲವೇ ಸಮಯದಲ್ಲಿ ಸಾವಿರಾರು ಜನ ವೀಕ್ಷಣೆ ಮಾಡಿದ್ದಾರೆ. ಇವರು ಹಾಡಿರುವ ಹಾಡಿನ ವಿಡಿಯೋವನ್ನು ಪಿಕೆ ಶಾನ್ ಅವರು ಎಡಿಟ್ ಮಾಡಿದ್ದು ಇದಕ್ಕೆ ಹಿನ್ನಲೆ ಸಂಗೀತವನ್ನು ಕೂಡ ಜೋಡಿಸಿದ್ದಾರೆ. ಈ ಮೂಲಕ ಡಿ. ರೂಪಾ ಅವರು 75ನೇ ಸ್ವಾತಂತ್ರ್ಯ ದಿನದ ಹಾಡಿಗೆ ಮೆರಗು ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, ಬಂಕಿಮ್ ಚಂದ್ರ ಚಟರ್ಜಿಯವರು ಸಂಯೋಜಿಸಿದ ರಾಷ್ಟ್ರೀಯ ಗೀತೆಯನ್ನು ಹಾಡಲು ಯಾವಾಗಲೂ ಉಲ್ಲಾಸದಾಯಕವಾಗಿರುತ್ತದೆ. ಮಾತೃಭೂಮಿಗೆ ನಮನಗಳು, ಇದರ ಜೊತೆಗೆ ಈ ವಿಡಿಯೋವನ್ನು ಎಡಿಟ್ ಮಾಡಿದ ಪಿಕೆ ಶಾನ್ ಅವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
Happy Independence Day#IndiaAt75 #AzadiKaAmritMahotsav
It's always exhilarating to sing the National song, composed by Bankim Chandra Chatterjee. Salutations to Motherland…
Thanks @pkshan12 for putting my raw singing in shareable format. pic.twitter.com/LHgAAQUjaZ— D Roopa IPS (@D_Roopa_IPS) August 14, 2022
ಸ್ವಾತಂತ್ರ್ಯ ದಿನದಂದು ಎಲ್ಲ ಕಡೆಯಲ್ಲೂ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನದ ಆಚರಣೆ ಮಾಡುತ್ತಿದ್ದಾರೆ. ರಾಷ್ಟ್ರದೆಲ್ಲೆಡೆ 75ನೇ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯಿಂದ ಗಣ್ಯ ವ್ಯಕ್ತಿಗಳ ವರೆಗೂ ಅದ್ಧೂರಿಯಾಗಿ ಸ್ವಾತಂತ್ರ್ಯವನ್ನು ಆಚರಣೆ ಮಾಡುತ್ತಿದ್ದಾರೆ. ದೇಶದ ಪ್ರಧಾನಿಗಳು ಇಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನದ್ದೇಶಿ ಮಾತನಾಡಿದರೂ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ತ್ರಿವರ್ಣ ಧ್ವಜವನ್ನು ಹಾರಿಸಿ ಅನೇಕ ಯೋಜನೆಗಳಿ ಚಾಲನೆ ನೀಡಿದ್ದಾರೆ.
Published On - 3:02 pm, Mon, 15 August 22