ಮಹಾತ್ಮ ಗಾಂಧಿ ಮಾತಿಗೂ ಬೆಲೆ ನೀಡದೆ ದೇಶವನ್ನು ಇಬ್ಭಾಗ ಮಾಡಲಾಯ್ತು: ಸಚಿವ ಆರಗ ಜ್ಞಾನೇಂದ್ರ

ಸ್ವಾತಂತ್ರ್ಯ ವೀರ್ ಸಾವರ್ಕರ್ ಹೋರಾಟದ ಬಗ್ಗೆ ಟೀಕೆ ಮಾಡುತ್ತಾರೆ, ಆದರೆ ಸಾವರ್ಕರ್​ 13 ವರ್ಷ ಅಂಡಮಾನ್​ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು ಎಂದು ತುಮಕೂರಿನಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮಹಾತ್ಮ ಗಾಂಧಿ ಮಾತಿಗೂ ಬೆಲೆ ನೀಡದೆ ದೇಶವನ್ನು ಇಬ್ಭಾಗ ಮಾಡಲಾಯ್ತು: ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
TV9kannada Web Team

| Edited By: Vivek Biradar

Aug 15, 2022 | 3:01 PM

ತುಮಕೂರು: ಸ್ವಾತಂತ್ರ್ಯ ವೀರ್ ಸಾವರ್ಕರ್ (Savarkar) ಹೋರಾಟದ ಬಗ್ಗೆ ಟೀಕೆ ಮಾಡುತ್ತಾರೆ, ಆದರೆ ಸಾವರ್ಕರ್​ 13 ವರ್ಷ ಅಂಡಮಾನ್​ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು ಎಂದು ತುಮಕೂರಿನಲ್ಲಿ (Tumakuru) ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ. ಅಂತಹ ಅನೇಕರ ತ್ಯಾಗಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮ ನಡೆಯಿಂದ ಅವರ ಆತ್ಮಗಳು ಕಣ್ಣೀರು ಹಾಕಬಾರದು. ಅಖಂಡ ಭಾರತವನ್ನು 2 ಭಾಗವಾಗಿ ಮಾಡಲಾಯ್ತು ಎಂದರು.

ನಮ್ಮ ದೇಶ ಭಾರತ, ಪಾಕಿಸ್ತಾನ ಅಂತ 2 ಹೋಳಾಯ್ತು. ಆಗ ಗಾಂಧಿ ಮಾತಿಗೂ ಬೆಲೆ ನೀಡದೆ ದೇಶವನ್ನು ಇಬ್ಭಾಗವಾಯ್ತು. ಸ್ವತಃ ಮಹಾತ್ಮಗಾಂಧಿ ನಿಂತ್ರು..ನನ್ನ ದೇಹ ವನ್ನು ತುಂಡು ಮಾಡಿ ಆದರೆ ನನ್ನ ರಾಷ್ಟ್ರ ವನ್ನು ತುಂಡು ಮಾಡಬೇಡಿ ಎಂದು ಆಗ ಗಾಂಧಿ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ಈಗ ಯುವಕರ ಸಂಪತನ್ನು ನಿಷ್ಕ್ರಿಯ ಗೊಳಿಸುವ ಕೆಲಸ ಕುತಂತ್ರ ನಡೀತಿದೆ. ಇದರಿಂದ ಯುವಕರನ್ನು ಹೊರ ತರುವ ಕೆಲಸ ಆಗಬೇಕಿದೆ ಎಂದು ಹೇಳಿದರು.

Follow us on

Related Stories

Most Read Stories

Click on your DTH Provider to Add TV9 Kannada