ಜೈಲಿಂದ ಹೊರಬಂದು ತಲೆಮರೆಸಿಕೊಂಡಿದ್ದ ಯುವರಾಜ್! ಕೆದಕಿದಷ್ಟೂ ಬಯಲಾಗ್ತಿದೆ ವಂಚಕ ಯುವರಾಜ್ ಸ್ವಾಮಿಯ ಕಹಾನಿಗಳು
Yuvraj | ಕೆದಕಿದಷ್ಟು ಬಯಲಾಗ್ತಿದೆ ವಂಚಕ ಯುವರಾಜ್ನ ಕಹಾನಿ. ಸ್ವಾಮೀಜಿ ಆಗಿದ್ದವನು ದುಡ್ಡು ಮಾಡೋಕೆ ಶುರು ಮಾಡಿದ್ದೇಗೆ? ಈ ಹಿಂದೆಯೂ ಕಂಬಿ ಎಣಿಸಿದ್ದ ಕಿಲಾಡಿ ರಿಲೀಸ್ ಆದ್ಮೇಲೆ ಎಲ್ಲಿದ್ದ? ತನಿಖೆ ವೇಳೆ ಪೊಲೀಸರೇ ಬೆಚ್ಚಿ ಬಿದ್ದ ವಿಷಯಗಳು ಯಾವುವು? ವಂಚಕ ಯುವರಾಜ ಅಸಲಿ ಇತಿಹಾಸವೇನು? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಬೆಂಗಳೂರು: ಯುವರಾಜ್ ಅಲಿಯಾಸ್ ಸ್ವಾಮಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಮಾಹಿತಿಗಳು ಬಹಿರಂಗಗೊಂಡಿವೆ. ಯುವರಾಜ್ ಅಸಲಿ ಹೆಸರು ಸೇವಾಲಾಲ್ ಸಂಗನ ಬಸವ ಸ್ವಾಮೀಜಿ ಅಂತಾ. ಇವನು 2003ರಲ್ಲಿ ಚಿತ್ರದುರ್ಗದ ಸೇವಾಲಾಲ್ ಮಠದ ಸ್ವಾಮೀಜಿಯಾಗಿದ್ದ. ಈ ವೇಳೆ ಡೆಂಟಲ್ ಕಾಲೇಜು ತೆರೆದ ಬಗ್ಗೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದ. ಅಲ್ಲದೆ ಬೆಂಗಳೂರಿನ ಕೆ.ಆರ್ ಪುರಂ ಹತ್ರ ಕಾಲೇಜು ತೆರೆದ ಬಗ್ಗೆಯೂ ಜಾಹೀರಾತು ನೀಡಿದ್ದ. ಆಗಲೇ ಈತ ಬರೋಬ್ಬರಿ ಒಂದೂವರೆ ಕೋಟಿ ವಂಚಿಸಿದ್ದ.
ವಂಚಕ ಯುವರಾಜ್ ವಿರುದ್ಧ ದಾಖಲಾಗಿದ್ವು 8 ಕೇಸ್ ಅಂದಿನ ಕಾಲಕ್ಕೆ ಈ ಚಾಲಾಕಿ ಸ್ವಾಮಿ ಬರೋಬ್ಬರಿ ಒಂದೂವರೆ ಕೋಟಿ ವಂಚನೆ ಮಾಡಿದ್ದ. ಈತನ ಹೆಸರಲ್ಲಿ ಎಂಟು ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸರು ಸ್ವಾಮಿಯನ್ನ ಅರೆಸ್ಟ್ ಮಾಡಿದ್ದರು. ಅಂದು ಉಪ್ಪಾರಪೇಟೆ ಪಿಎಸ್ಐ ಆಗಿದ್ದ ಯುಡಿ ಕೃಷ್ಣಕುಮಾರ್ ಅರೆಸ್ಟ್ ಮಾಡಿದ್ದರು. ಸದ್ಯ ಈಗ ಯುಡಿ ಕೃಷ್ಣಕುಮಾರ್ ಕೆಂಗೇರಿ ಗೇಟ್ ಎಸಿಪಿಯಾಗಿದ್ದಾರೆ. ಯುವರಾಜ್, ಸ್ವಾಮೀಜಿಯಂತೆ ಕಾವಿ ಧರಿಸಿದ್ದಾಗಲೇ ಪೊಲೀಸರು ಅರೆಸ್ಟ್ ಮಾಡಲು ಬಂದಿದ್ದರು. ಈ ವೇಳೆ ಯುವರಾಜ್, ತನ್ನನ್ನ ಮುಟ್ಟಿದ್ರೆ ನಿಮ್ಮ ಬಟ್ಟೆ ಬಿಚ್ಚಿಸುತ್ತೇನೆ ಎಂದು ಆವಾಜ್ ಹಾಕಿದ್ದ. ಆದ್ರೆ ಜೈಲಿಗೆ ಹೋದ ಬಳಿಕ ಕಾವಿ ಬಿಚ್ಚಿಟ್ಟು ಬಿಳಿ ಬಟ್ಟೆ ಧರಿಸಿದ್ದ.
ಜೈಲಿನಿಂದ ಬಂದ ಬಳಿಕ ತಲೆಮರೆಸಿಕೊಂಡಿದ್ದ ಯುವರಾಜ್ ಇನ್ನು ಜೈಲಿನಿಂದ ಬಂದ ಬಳಿಕ ಯುವರಾಜ್ ತಲೆಮರೆಸಿಕೊಂಡಿದ್ದ. ಕೆಲವು ವರ್ಷಗಳ ಎಲ್ಲಿದ್ದಾನೆ ಅನ್ನೋದೇ ಪತ್ತೆಯಾಗಿರಲಿಲ್ಲ. ಪೊಲೀಸರ ಪ್ರಕಾರ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಎಂಬ ಮಾಹಿತಿ ಇತ್ತು. ಬಳಿಕ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. 2004ರ ಬಳಿಕವೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಸದ್ಯ ಸಿಸಿಬಿ ಅರೆಸ್ಟ್ ಮಾಡಿದಾಗ ಯುವರಾಜ್ ಬಗ್ಗೆ ಹೊರಜಗತ್ತಿಗೆ ಮಾಹಿತಿ ಸಿಕ್ಕಿತು.
ಸದ್ಯಕ್ಕಿಲ್ಲ ಯುವರಾಜ್ ಅಲಿಯಾಸ್ ಸ್ವಾಮಿಗೆ ರಿಲೀಫ್ ಸದ್ಯ ಹೊಸದಾಗಿ ದಾಖಲಾದ ಕೇಸ್ಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ಈಗಿನ ಹೊಸ ಕೇಸ್ಗಳಲ್ಲಿ ಮಾತ್ರವಲ್ಲ ಹಳೆಯ ಕೇಸ್ನಲ್ಲೂ ಬಾಡಿ ವಾರಂಟ್ ನೀಡಿದೆ. ಕೋರ್ಟ್ಗೆ ಹಾಜರಾಗದ ಸ್ವಾಮಿ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿತ್ತು. ಹೀಗಾಗಿ ಉಪ್ಪಾರಪೇಟೆಯ ಹಳೆಯ 8 ಕೇಸ್ಗಳಲ್ಲಿ ಬಾಡಿ ವಾರಂಟ್ ಜಾರಿಯಾಗಿದೆ. ಮುಂದಿನ ದಿನಗಳಲ್ಲಿ 8 ಕೇಸ್ಗಳಲ್ಲೂ ಬೇಲ್ ಪಡೆದು ಯುವರಾಜ್ ಜೈಲಿನಿಂದ ಹೊರ ಬರಬೇಕಿದೆ. ವಂಚಕ ಸ್ವಾಮೀಜಿಯ ವಿರುದ್ಧ ಮತ್ತಷ್ಟು ಕೇಸ್ ದಾಖಲಾಗೋ ಸಾಧ್ಯತೆ ಇದೆ. ಯುವರಾಜ್ ವಿರುದ್ಧ ಸಿಸಿಬಿ ಮುಂದೆ ಹಲವು ದೂರುಗಳು ಇವೆ. ಹೀಗಾಗಿ ದೂರುಗಳನ್ನ ಪರಿಶೀಲಿಸಿ ಕೇಸ್ ದಾಖಲಿಸೋ ಸಾಧ್ಯತೆಯಿದೆ.
ಭಾರಿ ಮೊತ್ತದ ವಂಚನೆ ಪ್ರಕರಣದಲ್ಲಿ ಯುವರಾಜ್ ಸ್ವಾಮಿಯನ್ನು ಮತ್ತೆ ವಶಕ್ಕೆ ಪಡೆದ CCB..!
ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ