ಹನುಮಂತಪುರದ ಮಂಜೇಗೌಡರ ಕ್ವಾರಿ ಮೇಲೆ ದಾಳಿ: ಅಕ್ರಮವಾಗಿ ಸಂಗ್ರಹಿಸಿದ್ದ1,200 ಜಿಲೆಟಿನ್ ಕಡ್ಡಿ, ಡಿಟೋನೇಟರ್ ಜಪ್ತಿ

ಜಿಲ್ಲೆಯ ಇಂದ್ರಾಪುರ ಬಳಿಯ ಕ್ವಾರಿ ಮೇಲೆ ಆಂತರಿಕ ಭದ್ರತಾದಳ ಮತ್ತು ಗೊರೂರು ಪೊಲೀಸರಿಂದ ದಾಳಿ ನಡೆಯಿತು. ದಾಳೆ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಭಾರಿ ಪ್ರಮಾಣದ ಸ್ಫೋಟಕವನ್ನು ಜಪ್ತಿ ಮಾಡಲಾಗಿದೆ.

ಹನುಮಂತಪುರದ ಮಂಜೇಗೌಡರ ಕ್ವಾರಿ ಮೇಲೆ ದಾಳಿ: ಅಕ್ರಮವಾಗಿ ಸಂಗ್ರಹಿಸಿದ್ದ1,200 ಜಿಲೆಟಿನ್ ಕಡ್ಡಿ, ಡಿಟೋನೇಟರ್ ಜಪ್ತಿ
ಅಕ್ರಮವಾಗಿ ಸಂಗ್ರಹಿಸಿದ್ದ1,200 ಜಿಲೆಟಿನ್ ಕಡ್ಡಿ, ಡಿಟೋನೇಟರ್ ಜಪ್ತಿ

Updated on: Jan 26, 2021 | 10:48 PM

ಹಾಸನ: ಜಿಲ್ಲೆಯ ಇಂದ್ರಾಪುರ ಬಳಿಯ ಕ್ವಾರಿ ಮೇಲೆ ಆಂತರಿಕ ಭದ್ರತಾದಳ ಮತ್ತು ಗೊರೂರು ಪೊಲೀಸರಿಂದ ದಾಳಿ ನಡೆಯಿತು. ದಾಳೆ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಭಾರಿ ಪ್ರಮಾಣದ ಸ್ಫೋಟಕವನ್ನು ಜಪ್ತಿ ಮಾಡಲಾಗಿದೆ.

ಹನುಮಂತಪುರದ ಮಂಜೇಗೌಡ ಎಂಬುವವರ ಕ್ವಾರಿ ಮೇಲೆ ದಾಳಿ ನಡೆದಿದೆ. ಈ ವೇಳೆ, ಅಕ್ರಮವಾಗಿ ಸಂಗ್ರಹ ಮಾಡಿದ್ದ 1,200 ಜಿಲೆಟಿನ್ ಕಡ್ಡಿಗಳು, 2 ಡಿಟೋನೇಟರ್ ಮತ್ತು 10 ಕೆ.ಜಿ ಅಮೋನಿಯಂ ನೈಟ್ರೇಟ್​ ಜಪ್ತಿ ಮಾಡಲಾಗಿದೆ.

ISD ಮೈಸೂರು DySP ಪ್ರಭಾಕರ್​ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ, ಹುಂಡೈ ಕಾರುಗಳು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು, ಯಾವೂರಲ್ಲಿ?

Published On - 10:46 pm, Tue, 26 January 21