RSSನವರು ಗೋವುಗಳ ಬಗ್ಗೆ ಮಾತಾಡ್ತಾರಲ್ಲಾ.. ಯಾವತ್ತಾದ್ರೂ ಅವರು ಸಗಣಿ, ಗಂಜಲ ಎತ್ತಿದ್ದಾರಾ? -ಸಿದ್ದರಾಮಯ್ಯ ಪ್ರಶ್ನೆ
RSSನವರು ಗೋವುಗಳ ಬಗ್ಗೆ ಮಾತಾಡುತ್ತಾರಲ್ಲಾ.. ಯಾವತ್ತಾದ್ರೂ ಅವರು ಸಗಣಿ, ಗಂಜಲ ಎತ್ತಿದ್ದಾರಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೀದರ್: ಸಿಎಂ ಬಿ.ಎಸ್.ಯಡಿಯೂರಪ್ಪ ತರಾತುರಿಯಲ್ಲಿ ಅನುಭವ ಮಂಟಪಕ್ಕೆ ಅಡಿಗಲ್ಲು ಹಾಕಿದ್ದಾರೆ. ಒಂದು ವೇಳೆ, ಉಪಚುನಾವಣೆ ಇಲ್ಲದಿದ್ದರೆ ಸಿಎಂ ಅಡಿಗಲ್ಲು ಹಾಕುತ್ತಿರಲಿಲ್ಲ ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸಂವಿಧಾನ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ದಿವಂಗತ ಬಿ.ನಾರಾಯಣ ರಾವ್ರನ್ನು ನೆನೆದರು. ಸರ್ಕಾರದಲ್ಲಿ ಹಣ ಇಲ್ಲ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಖಜಾನೆ ಖಾಲಿಯಾಗಿದೆ ಎಂದು ಸಿಎಂ ಬಿಎಸ್ವೈ ಹೇಳ್ತಾರೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲಿಂದ ತರುತ್ತಾರೆ 600 ಕೋಟಿ? ಎಂದು ಪ್ರಶ್ನಿಸಿದರು.
‘ನೀನು ಯಾರಯ್ಯ ಅದನ್ನೆಲ್ಲ ಕೇಳೋದಕ್ಕೆ?’ RSSನವರು ಗೋವುಗಳ ಬಗ್ಗೆ ಮಾತಾಡುತ್ತಾರಲ್ಲಾ.. ಯಾವತ್ತಾದ್ರೂ ಅವರು ಸಗಣಿ, ಗಂಜಲ ಎತ್ತಿದ್ದಾರಾ? ಎಂದು ಪ್ರಶ್ನಿಸಿದರು. ಜೊತೆಗೆ, ನಾನು ಬೀಫ್ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ? ನೀನು ಯಾರಯ್ಯ ಅದನ್ನೆಲ್ಲ ಕೇಳೋದಕ್ಕೆ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ನನಗೆ ಬೇಕಾಗಿರುವುದನ್ನು ತಿನ್ನುವುದು ನನ್ನ ಆಹಾರದ ಹಕ್ಕು ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುಂಚೆ, ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ವಚನ ಸಾಹಿತ್ಯ ಸಂವಿಧಾನ ಜನಜಾಗೃತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದರು. ವಚನ ಹೇಳುವ ಮೂಲಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ .ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ ಎಂದು ಬಸವಣ್ಣನವರ ವಚನ ಹೇಳುವ ಮೂಲಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ?; ಮೋದಿಗೆ ಅಧಿಕಾರ ನೆತ್ತಿಗೇರಿದೆ -ಸಿದ್ದರಾಮಯ್ಯ