ಆದಿತ್ಯ ಎಲ್​-1 ಉಡಾವಣೆ ಕುರಿತು ಮಾಹಿತಿ ಹಂಚಿಕೊಂಡ ಇಸ್ರೋ ವಿಜ್ಞಾನಿ, ಏನಿದರ ಉದ್ದೇಶ?

| Updated By: Rakesh Nayak Manchi

Updated on: Aug 28, 2023 | 5:18 PM

ಚಂದ್ರಯಾನ-3 ಯಶಸ್ವಿಯಾದ ಖುಷಿಯಲ್ಲಿರುವ ಇಸ್ರೋ ಇದೀಗ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದೆ. ಆದಿತ್ಯ ಎಲ್​-1 ಉಡಾವಣೆ ಕುರಿತು ಇಸ್ರೋ ವಿಜ್ಞಾನಿ ಹೆಚ್.ಎನ್.ಸುರೇಶ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದು, ಈ ಮಿಷನ್​ನ ಉದ್ದೇಶ ಸೂರ್ಯನ ವಿಸ್ತ್ರತವಾದ ಅಧ್ಯಯನ ಮಾಡುವುದಾಗಿದ್ದು, ಸೆ.2ರಂದು ಉಡ್ಡಯನವಾಗಲಿದೆ ಎಂದಿದ್ದಾರೆ.

ಆದಿತ್ಯ ಎಲ್​-1 ಉಡಾವಣೆ ಕುರಿತು ಮಾಹಿತಿ ಹಂಚಿಕೊಂಡ ಇಸ್ರೋ ವಿಜ್ಞಾನಿ, ಏನಿದರ ಉದ್ದೇಶ?
ಆದಿತ್ಯ ಎಲ್-1
Image Credit source: iLearn CANA
Follow us on

ಆನೇಕಲ್, ಆಗಸ್ಟ್ 28: ಚಂದ್ರಯಾನ-3 ಯಶಸ್ವಿಯಾದ ಖುಷಿಯಲ್ಲಿರುವ ಇಸ್ರೋ (ISRO) ಇದೀಗ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದೆ. ಆದಿತ್ಯ ಎಲ್​-1 (Aditya L-1) ಉಡಾವಣೆ ಕುರಿತು ಇಸ್ರೋ ವಿಜ್ಞಾನಿ ಹೆಚ್.ಎನ್.ಸುರೇಶ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದು, ಈ ಮಿಷನ್​ನ ಉದ್ದೇಶ ಸೂರ್ಯನ ವಿಸ್ತ್ರತವಾದ ಅಧ್ಯಯನ ಮಾಡುವುದಾಗಿದ್ದು, ಸೆ.2ರಂದು ಉಡ್ಡಯನವಾಗಲಿದೆ ಎಂದಿದ್ದಾರೆ.

ಆನೇಕಲ್ ತಾಲ್ಲೂಕಿನ ಜಿಗಣಿಯ ಆಜ್ರೀ ಇಂಜಿನಿಯರಿಂಗ್ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿದ ಸುರೇಶ್ ಕುಮಾರ್, ಸೆ.2ರಂದು ಆದಿತ್ಯ ಎಲ್​-1 ಉಡಾವಣೆ ಆಗಲಿದೆ. ಈ ಮಿಷನ್​ನ ಉದ್ದೇಶ ಸೂರ್ಯನ ಬಗ್ಗೆ ಅಧ್ಯಯನ ನಡೆಸುವುದಾಗಿದೆ ಎಂದಿದ್ದಾರೆ. “ಆದಿತ್ಯ ಎಲ್​-1 ಸೂರ್ಯನ ಕರೋನಾಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತದೆ. ಸೂರ್ಯನ ಸುತ್ತ ಎಷ್ಟು ಲೇಯರ್ ಇದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಟಚ್‌ಡೌನ್ ಸ್ಪಾಟ್​​​ಗೆ ಶಿವಶಕ್ತಿ ಪಾಯಿಂಟ್ ಎಂದು ಹೆಸರಿಟ್ಟಿದ್ದರಲ್ಲಿ ತಪ್ಪೇನಿಲ್ಲ: ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್

ಆದಿತ್ಯ ಎಲ್​-1 ಭೂಮಿಯಿಂದ 15 ಲಕ್ಷ ಕಿ.ಮೀ. ದೂರ ಸಾಗಲಿದೆ. ಅಲ್ಲಿಂದ ಸೂರ್ಯನಿಂದ ಎಷ್ಟು ದೂರ ಇದೇ ಅಂತಾ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ ಸುರೇಶ್ ಕುಮಾರ್, ಆದಿತ್ಯ ಎಲ್​-1 ಉಡಾವಣೆ ಬಳಿಕ ಲಾಗ್ರೇಂಜ್ ಪಾಯಿಂಟ್ ತಲುಪುತ್ತದೆ. ಭೂಮಿಯಿಂದ ಲಾಗ್ರೇಂಜ್ ಪಾಯಿಂಟ್ ತಲುಪಲು 4 ತಿಂಗಳು ಬೇಕು ಎಂದರು.

ಮಂಗಳಯಾನ ಹಾಗೂ ಚಂದ್ರಯಾನ-4ರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಹೀಟ್ ಪೈಪ್ ಎಂಬುವುದು ಪ್ರತಿಯೊಂದು ಉಪಗ್ರಹಕ್ಕೂ ಅವಶ್ಯಕತೆ ಇದೆ. ಉಷ್ಣಾಂಶವನ್ನು ಹೆಚ್ಚಿಸಲು ಹೀಟ್ ಪೈಪ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಸ್ರೋ ವಿಜ್ಞಾನಿ ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ