ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ನೀರಾವರಿ ನಿಗಮದಲ್ಲಿ 20 ಸಾವಿರ ಕೋಟಿ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಅನ್ನೋ ಆರೋಪವನ್ನ ಪ್ರಮುಖವಾಗಿ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಸೇರಿದಂತೆ ವಿ ಪಕ್ಷಗಳು ಮಾಡಿದ್ವು. ಏತು ನೀರಾವರಿ ಹಾಗೂ ನಾಲೆಯ ಆಧುನೀಕರಣ ಯೋಜನೆ ಇದಾಗಿತ್ತು.
ಇಂದು ನಡೆದಿರುವ ಆದಾಯ ತೆರಿಗೆ ದಾಳಿ ಬೆನ್ನು ಹತ್ತಿದಾಗ ಅದು ಕೊಪ್ಪಳಕ್ಕೆ ತಳುಕು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಿಎಸ್ ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ವೇಳೆ ಕೊಪ್ಪಳದ ನಂಟು ಪತ್ತೆಯಾಗಿದೆ. ಉಮೇಶ್ ಮನೆಯ ಬಳಿ ಪತ್ತೆಯಾಯಿತು ಕೊಪ್ಪಳದ ಪಾಸಿಂಗ್ ಹೊಂದಿರುವ ಇನ್ನೋವಾ ಕ್ರಿಸ್ಟಾ ಕಾರ್ ಪತ್ತೆಯಾಗಿದೆ. KA 37 G 0523 ನಂಬರ್ ನ ಈ ಕಾರು ಕೊಪ್ಪಳ ಆರ್ ಟಿ ಓ ಕಚೇರಿಯಲ್ಲಿ ರಿಜಿಸ್ಟರ್ ಆಗಿದೆ.
ಕುತೂಹಲಕಾರಿ ಸಂಗತಿಯೆಂದರೆ ಮುನಿರಾಬಾದನ ತುಂಗಭದ್ರಾ ನೀರಾವರಿ ವಲಯ ಕಚೇರಿಗೆ ಸೇರಿದ ಕಾರು ಇದಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾದ ಕಾರು ಇಇ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಕೊಪ್ಪಳದ ಕಾರು ಬೆಂಗಳೂರಿಗೆ ಹೇಗೆ ಹೋಯಿತು ಎನ್ನುವ ಅನುಮಾನ ಇದೀಗ ಗಾಢವಾಗತೊಡಗಿದೆ.
BSY ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದಾಗ ಉಮೇಶ್ ಜಲಸಂಪನ್ಮೂಲ ಇಲಾಖೆಯ ಕಾರು ಬಳಸುತ್ತಿರುವುದು ದೃಢಪಟ್ಟಿದೆ. ನೀರಾವರಿ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ಲಕ್ಷ್ಮಣರಾವ್ ಪೇಶ್ವೆ ಎಂಬುವವರು ಉಮೇಶ್‌ಗೆ ಸರ್ಕಾರಿ ಕಾರು ನೀಡಿದ್ದರು. ಪೇಶ್ವೆ ಪ್ರಸ್ತುತ ಕೃಷ್ಣಾ ಜಲಭಾಗ್ಯ ನಿಗಮದ ಎಂಡಿ ಆಗಿದ್ದಾರೆ. ಅಗಸ್ಟ್ 1ರಂದು ಕೃಷ್ಣಾ ಜಲಭಾಗ್ಯ ನಿಗಮದ ಎಂಡಿ ಆಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ:
IT raid: ಬಿ.ಎಸ್. ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ; ಬಿಎಂಟಿಸಿ ಕಂಡಕ್ಟರ್ ಆಗಿದ್ದ ಆಪ್ತ ಉಮೇಶ್ ಹಿನ್ನೆಲೆ ಏನು?
ಇದನ್ನೂ ಓದಿ:
IT raid: ಬಿ.ಎಸ್. ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ; ಬಿಎಂಟಿಸಿ ಕಂಡಕ್ಟರ್ ಆಗಿದ್ದ ಆಪ್ತ ಉಮೇಶ್ ಹಿನ್ನೆಲೆ ಏನು?
IT Raid : BSY PA ಉಮೇಶ್ ಮನೆ ಮೇಲೆ ಐಟಿ ದಾಳಿ, ಸರ್ಕಾರಿ ಕಾರು ಬಳಸುತ್ತಿದ್ದ | Tv9kannada