ಬೆಂಗಳೂರು, ಅಕ್ಟೋಬರ್ 26: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿ ಸುಮಾರು 14 ವರ್ಷಗಳ ನಂತರ ಇದೀಗ ತೀರ್ಪು ಹೊರಬಿದ್ದಿದೆ. ಆರು ಪ್ರಕರಣಗಳಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail) ಸೇರಿದಂತೆ ಉಳಿದ ಆರೋಪಿಗಳಿಗೆ ಒಟ್ಟು 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಆದೇಶ ಹೊರಡಿಸಿದೆ. ಹಾಗಾದರೆ ಯಾವ ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ ಎಂದು ಸಂಪೂರ್ಣ ಇಲ್ಲಿದೆ.
2010 ರ ಮಾರ್ಚ್ 20ರಲ್ಲಿ ಸೀಜ್ ಆಗಿದ್ದ 8ಲಕ್ಷ ಮೆಟ್ರಿಕ್ ಟನ್ ಅದಿರಿನ ಪೈಕಿ, ಕೇವಲ 80 ದಿನಗಳಲ್ಲಿ 6 ಲಕ್ಷ ಮೆಟ್ರಿಕ್ ಟನ್ ನಾಪತ್ತೆಯಾಗಿತ್ತು. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತನಿಖೆ ಆರಂಭಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್ನ ಸತೀಶ್ ಸೈಲ್ಗೆ 7 ವರ್ಷ ಜೈಲು: ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಮಹತ್ವದ ತೀರ್ಪು
ಶಾಸಕ ಸತೀಶ್ ಸೈಲ್, ಮಹೇಶ್ ಬಿಳಿಯೆ, ಕಾರಾಪುಡಿ ಮಹೇಶ್, ಸ್ವಸ್ತಿಕ್ ನಾಗರಾಜು ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸತೀಶ್ ಸೈಲ್ ಸೇರಿದಂತೆ 7 ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
1ನೇ ಅಪರಾಧಿ ಮಹೇಶ್ ಬಿಳಿಯೆ, 2ನೇ ಅಪರಾಧಿ ಮಲ್ಲಿಕಾರ್ಜುನ ಶಿಪ್ಪಿಂಗ್, 3ನೇ ಅಪರಾಧಿ ಸತೀಶ್ ಸೈಲ್, 4ನೇ ಅಪರಾಧಿ ಪಿಜೆಎಸ್ ಓವರ್ ಸೀಸ್ ವಿರುದ್ಧದ ಪ್ರಕರಣದಲ್ಲಿ, 11312 ಮೆಟ್ರಿಕ್ ಟನ್ ಅದಿರು ಕಳ್ಳತನ, ಷಡ್ಯಂತ್ರ, ವಂಚನೆ, ಆರೋಪವಿತ್ತು. ಈ ಪ್ರಕರಣದಲ್ಲಿ ಕೋರ್ಟ್ ಗರಿಷ್ಟ ಶಿಕ್ಷೆಯಾಗಿ 7 ವರ್ಷ ಕಠಿಣ ಕಾರಾಗೃಹವಾಸದ ಶಿಕ್ಷೆ ವಿಧಿಸಿ, ಅಪರಾಧಿಗಳಿಗೆ ಒಟ್ಟು 6 ಕೋಟಿ ದಂಡ ವಿಧಿಸಿದೆ.
1ನೇ ಅಪರಾಧಿ ಮಹೇಶ್ ಬಿಳಿಯೆ, 2ನೇ ಅಪರಾಧಿ ಆಶಾಪುರ ಮೈನ್‌ಚೆಮ್ ಲಿಮಿಟೆಡ್, 3ನೇ ಅಪರಾಧಿ ಚೇತನ್ ಶಾ, 4 ನೇ ಅಪರಾಧಿ ಮಲ್ಲಿಕಾರ್ಜುನ ಶಿಪ್ಪಿಂಗ್, 5ನೇ ಅಪರಾಧಿ ಸತೀಶ್ ಸೈಲ್ ವಿರುದ್ಧದ ಪ್ರಕರಣದಲ್ಲಿ, 27995 ಮೆ.ಟನ್ ಕಬ್ಬಿಣದ ಅದಿರಿನ ಕಳ್ಳತನ, ಷಡ್ಯಂತ್ರ, ವಂಚನೆ ಆರೋಪವಿತ್ತು. ಈ ಪ್ರಕರಣದಲ್ಲಿ ಕೋರ್ಟ್ ಗರಿಷ್ಟ ಶಿಕ್ಷೆಯಾಗಿ 7 ವರ್ಷ ಕಠಿಣ ಕಾರಾಗೃಹವಾಸದ ಶಿಕ್ಷೆ ವಿಧಿಸಿ, ಅಪರಾಧಿಗಳಿಗೆ 9 ಕೋಟಿ 6 ಲಕ್ಷ ದಂಡ ವಿಧಿಸಿದೆ.
1ನೇ ಅಪರಾಧಿ ಮಹೇಶ್ ಬಿಳಿಯೆ, 2ನೇ ಅಪರಾಧಿ ಐಎಲ್‌ಸಿ ಇಂಡಸ್ಟ್ರೀಸ್, 4 ನೇ ಅಪರಾಧಿ ಮಲ್ಲಿಕಾರ್ಜುನ ಶಿಪ್ಪಿಂಗ್, 5ನೇ ಅಪರಾಧಿ ಸತೀಶ್ ಸೈಲ್ ವಿರುದ್ಧ 19297 ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಕಳ್ಳತನ, ವಂಚನೆ, ಒಳಸಂಚಿನ ಆರೋಪಗಳು ಸಾಬೀತಾಗಿದ್ದು ಅಪರಾಧಿಗಳಿಗೆ ಕೋರ್ಟ್ 9 ಕೋಟಿ 36 ಲಕ್ಷ ದಂಡ ವಿಧಿಸಿದೆ.
1 ನೇ ಅಪರಾಧಿ ಮಹೇಶ್ ಬಿಳಿಯೆ, 2 ನೇ ಅಪರಾಧಿ ಸ್ವಸ್ತಿಕ್ ಸ್ಟೀಲ್ಸ್, 3ನೇ ಅಪರಾಧಿ ಸ್ವಸ್ತಿಕ್ ನಾಗರಾಜ್, 4ನೇ ಅಪರಾಧಿ ಕೆ.ವಿ.ಎನ್. ಗೋವಿಂದರಾಜ್, 5ನೇ ಅಪರಾಧಿ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಲಿಮಿಟೆಡ್, ವಿರುದ್ಧ 27000 ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಕಳ್ಳತನ, ವಂಚನೆ, ಒಳಸಂಚಿನ ಆರೋಪಗಳು ಸಾಬೀತಾಗಿದ್ದು ಅಪರಾಧಿಗಳಿಗೆ ಕೋರ್ಟ್ 9 ಕೋಟಿ 52 ಲಕ್ಷ ದಂಡ ವಿಧಿಸಿದೆ.
5ನೇ ಕೇಸ್ ನಲ್ಲಿ 1ನೇ ಅಪರಾಧಿ ಮಹೇಶ್ ಬಿಳಿಯೆ, 2ನೇ ಅಪರಾಧಿ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್, 3ನೇ ಅಪರಾಧಿ ಕಾರಾಪುಡಿ ಮಹೇಶ್, 4ನೇ ಆಪರಾಧಿ ಮಲ್ಲಿಕಾರ್ಜುನ ಶಿಪ್ಪಿಂಗ್ ಲಿಮಿಟೆಡ್, 5 ನೇ ಅಪರಾಧಿ ಸತೀಶ್ ಸೈಲ್ ವಿರುದ್ಧ 35369 ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಕಳ್ಳತನ, ಷಡ್ಯಂತ್ರ, ವಂಚನೆ ಆರೋಪವಿತ್ತು. ಈ ಪ್ರಕರಣದಲ್ಲಿ ಕೋರ್ಟ್ ಗರಿಷ್ಟ ಶಿಕ್ಷೆಯಾಗಿ 7 ವರ್ಷ ಕಠಿಣ ಕಾರಾಗೃಹವಾಸದ ಶಿಕ್ಷೆ ವಿಧಿಸಿ, ಅಪರಾಧಿಗಳಿಗೆ 9 ಕೋಟಿ 25 ಲಕ್ಷ ದಂಡ ವಿಧಿಸಿದೆ.
6 ನೇ ಕೇಸ್ ನಲ್ಲಿ 1ನೇ ಅಪರಾಧಿ ಮಹೇಶ್ ಬಿಳಿಯೆ, 2ನೇ ಅಪರಾಧಿ ಲಾಲ್ ಮಹಲ್ ಲಿಮಿಟೆಡ್, 3ನೇ ಅಪರಾಧಿ ಪ್ರೇಮ್ ಚಂದ್ ಗರ್ಗ್, 5 ನೇ ಅಪರಾಧಿ ಮಲ್ಲಿಕಾರ್ಜುನ ಶಿಪ್ಪಿಂಗ್, 6 ನೇ ಅಪರಾಧಿ ಸತೀಶ್ ಸೈಲ್ ವಿರುದ್ಧ 24442 ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಳ್ಳತನ, ಷಡ್ಯಂತ್ರ, ವಂಚನೆ ಆರೋಪವಿತ್ತು. ಈ ಪ್ರಕರಣದಲ್ಲಿ ಕೋರ್ಟ್ ಗರಿಷ್ಟ ಶಿಕ್ಷೆಯಾಗಿ 7 ವರ್ಷ ಕಠಿಣ ಕಾರಾಗೃಹವಾಸದ ಶಿಕ್ಷೆ ವಿಧಿಸಿ, ಅಪರಾಧಿಗಳಿಗೆ 90 ಲಕ್ಷ ದಂಡ ವಿಧಿಸಿದೆ.
ಶಾಸಕ ಸತೀಶ್ ಸೈಲ್ಗೆ ಅನರ್ಹತೆಯ ಭೀತಿ ಎದುರಾಗಿದೆ. 7 ವರ್ಷ ಶಿಕ್ಷೆಯಾಗಿರುವ ಹಿನ್ನೆಲೆ, ಶಾಸಕ ಸ್ಥಾನ ವಜಾವಾಗುವ ಸಾಧ್ಯತೆಯಿದೆ. ಹೈಕೋರ್ಟ್‌ನಲ್ಲಿ ಶಿಕ್ಷೆಗೆ ತಡೆ ಸಿಕ್ಕರೆ ಮಾತ್ರ ಅನರ್ಹತೆಯಿಂದ ಬಚಾವಾಗಬಹುದು ಎನ್ನಲಾಗಿದೆ.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:51 pm, Sat, 26 October 24