Shivamogga Blast: JDS ಮುಖಂಡ ನರಸಿಂಹ, ಗುತ್ತಿಗೆದಾರ ಸುಧಾಕರ್ ಅರೆಸ್ಟ್
ಕಲ್ಲು ಗಣಿಗಾರಿಕೆ ಪಾಲುದಾರಿಕೆಯಲ್ಲಿ ನಡೀತಿತ್ತು. ಕ್ರಷರ್ಗೆ ಸುಧಾಕರ್, ಮುಮ್ತಾಜ್, ಅವಿನಾಶ್ ಪಾರ್ಟ್ನರ್ಸ್ಗಳಾಗಿದ್ರು. ಅನಿಲ್ ಎಂಬುವವರ ಅಜ್ಜಿ ಜಮೀನಿನಲ್ಲೇ ಈ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.
ಶಿವಮೊಗ್ಗ: ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟಗೊಂಡು ದುರಂತಕ್ಕೆ ಸಂಬಂಧಿಸಿ ಅಕ್ರಮ ಕಲ್ಲುಗಣಿಗಾರಿಕೆ ಆರೋಪದಡಿ ಜೆಡಿಎಸ್ ಮುಖಂಡ ನರಸಿಂಹನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಇದೇ ಪ್ರಕರಣ ಸಂಬಂಧ ಕಲ್ಲು ಗಣಿ ಪ್ರದೇಶದ ಗುತ್ತಿಗೆದಾರ ಸುಧಾಕರ್ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನರಸಿಂಹ ಅಕ್ರಮ ಕಲ್ಲುಗಣಿಗಾರಿಕೆಗೆ ಜಿಲೆಟಿನ್ ಪೂರೈಸುತ್ತಿದ್ದ. ಹಾಗೂ ಸುಧಾಕರ್ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ. ನರಸಿಂಹ ಕಲ್ಲು ಕೊಟ್ಟರೆ ಸುಧಾಕರ್ ಕಲ್ಲು ಪುಡಿ ಮಾಡ್ತಿದ್ದ. ಇನ್ನು ಕಲ್ಲು ಗಣಿಗಾರಿಕೆ ಪಾಲುದಾರಿಕೆಯಲ್ಲಿ ನಡೀತಿತ್ತು. ಕ್ರಷರ್ಗೆ ಸುಧಾಕರ್, ಮುಮ್ತಾಜ್, ಅವಿನಾಶ್ ಪಾರ್ಟ್ನರ್ಸ್ಗಳಾಗಿದ್ರು. ಅನಿಲ್ ಎಂಬುವವರ ಅಜ್ಜಿ ಜಮೀನಿನಲ್ಲೇ ಈ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.
ಈ ಮೂವರು ಮೂರು ಪಕ್ಷಗಳ ರಾಜಕೀಯ ಮುಖಂಡರ ಆಪ್ತರಾಗಿದ್ದರು. ರಾಜಕೀಯ ನಾಯಕರ ಬೆಂಬಲದಿಂದಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಯಾರು ಪ್ರಶ್ನಿಸುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆಂದು.. ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಮೈಟ್ ಸ್ಫೋಟ
Published On - 8:55 am, Fri, 22 January 21