ಸ್ಪಾ ಮಾಲೀಕರ ಬಳಿ ಲಂಚಕ್ಕೆ ಕೈಯೊಡ್ಡಿದ್ದ ಕದ್ರಿ ಠಾಣೆ ಪೇದೆ ಸಸ್ಪೆಂಡ್

|

Updated on: Nov 02, 2019 | 2:30 PM

ದಕ್ಷಿಣ ಕನ್ನಡ: ಮಾಮೂಲಿ ಕೊಡದಿದ್ದಕ್ಕೆ ಸ್ಪಾ ಮೇಲೆ ಪೊಲೀಸರು ದಾಳಿ ಮಾಡಿದ ಪ್ರಕರಣ ಸಂಬಂಧ ಕದ್ರಿ ಪೊಲೀಸ್ ಠಾಣೆಯ ಐಬಿ ವಿಭಾಗದ ಪೇದೆ ಪ್ರಶಾಂತ್ ಶೆಟ್ಟಿ ಅಮಾನತಾಗಿದ್ದಾರೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಸ್ಪಾ ಮೇಲೆ ಬೇರೆ ತಂಡ ದಾಳಿ ಮಾಡಲಾಗಿದೆ. ಆದ್ರೆ, ಸ್ಪಾಗಳ ಮೇಲೆ ದಾಳಿ ಇದೇ ಮೊದಲಲ್ಲ. ಪೊಲೀಸರ ದಾಳಿ ವೇಳೆ ದಾಖಲೆ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅಲ್ಲದೆ, ಪೇದೆ ಪ್ರಶಾಂತ್ ಮೇಲೆ ಆರೋಪ ಬಂದ ತಕ್ಷಣ ಮಾಡಿದ ತಪ್ಪಿಗೆ ಅಮಾನತು ಮಾಡಿದ್ದೇವೆ ಎಂದು […]

ಸ್ಪಾ ಮಾಲೀಕರ ಬಳಿ ಲಂಚಕ್ಕೆ ಕೈಯೊಡ್ಡಿದ್ದ ಕದ್ರಿ ಠಾಣೆ ಪೇದೆ ಸಸ್ಪೆಂಡ್
Follow us on

ದಕ್ಷಿಣ ಕನ್ನಡ: ಮಾಮೂಲಿ ಕೊಡದಿದ್ದಕ್ಕೆ ಸ್ಪಾ ಮೇಲೆ ಪೊಲೀಸರು ದಾಳಿ ಮಾಡಿದ ಪ್ರಕರಣ ಸಂಬಂಧ ಕದ್ರಿ ಪೊಲೀಸ್ ಠಾಣೆಯ ಐಬಿ ವಿಭಾಗದ ಪೇದೆ ಪ್ರಶಾಂತ್ ಶೆಟ್ಟಿ ಅಮಾನತಾಗಿದ್ದಾರೆ.

ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಸ್ಪಾ ಮೇಲೆ ಬೇರೆ ತಂಡ ದಾಳಿ ಮಾಡಲಾಗಿದೆ. ಆದ್ರೆ, ಸ್ಪಾಗಳ ಮೇಲೆ ದಾಳಿ ಇದೇ ಮೊದಲಲ್ಲ. ಪೊಲೀಸರ ದಾಳಿ ವೇಳೆ ದಾಖಲೆ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅಲ್ಲದೆ, ಪೇದೆ ಪ್ರಶಾಂತ್ ಮೇಲೆ ಆರೋಪ ಬಂದ ತಕ್ಷಣ ಮಾಡಿದ ತಪ್ಪಿಗೆ ಅಮಾನತು ಮಾಡಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಪ್ರತಿಕ್ರಿಯಿಸಿದ್ದಾರೆ.

ಪರವಾನಗಿ ಇದ್ದರೂ ಕಿರುಕುಳ:
ಮಾಮೂಲಿ ಕೊಡದಿದ್ದಕ್ಕೆ ವೇಶ್ಯಾವಾಟಿಕೆ ಅಡ್ಡೆ ಆರೋಪದಡಿ ಸ್ಪಾ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಪಾರ್ಲರ್​ ನಡೆಸಲು ಅಧಿಕೃತ ಪರವಾನಗಿ ಇದ್ದರೂ ಕಿರುಕುಳ ನೀಡಿ ಹಣ ವಸೂಲಿ ಮಾಡಿದ್ದಾರೆ. ಪಾರ್ಲರ್​ ಮಾಲೀಕನಿಂದ ಫೋನ್​ ಪೇ ಮೂಲಕ ಹಣ ಪಡೆದಿರುವ ಸಂಬಂಧ ದಾಖಲೆಗಳು ಲಭ್ಯವಾಗಿವೆ. ಮಾಮೂಲಿಗಾಗಿ ಪಾರ್ಲರ್ ಮಾಲೀಕರು ಹಾಗೂ ಸಿಬ್ಬಂದಿಗೆ ಪ್ರತಿನಿತ್ಯವೂ ಟಾರ್ಚರ್ ನೀಡುತ್ತಿದ್ದರು ಎನ್ನಲಾಗಿದೆ. ಇನ್ನು ತಿಂಗಳ ಮಾಮೂಲಿಯಲ್ಲಿ ಹಿರಿಯ ಅಧಿಕಾರಿಗಳಿಗೂ ಪಾಲಿರುತ್ತೆ ಎಂಬ ಆರೋಪ ಕೇಳಿಬಂದಿತ್ತು.

Published On - 12:57 pm, Sat, 2 November 19