AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಸಿಸಿ ಗಾದಿಗೆ ಶುರುವಾಯ್ತು ಮೆಗಾ ಫೈಟ್, ಡಿಕೆಶಿ ಪರ ಅಹ್ಮದ್ ಪಟೇಲ್‌ ಬ್ಯಾಟಿಂಗ್

ಬೆಂಗಳೂರು: ಕಾಂಗ್ರೆಸ್‌ನ ಟ್ರಬಲ್ ಶೂಟರ್​ಗೆ ಜೈಲಿಗೆ ಹೋಗಿ ಬಂದಿದ್ದೇ ಒಂಥರಾ ಬಂಪರ್ ಹೊಡೆದಂತಿದೆ. ಇ.ಡಿ ಅಧಿಕಾರಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್​ ಯನ್ನ ಅರೆಸ್ಟ್ ಮಾಡಿದಾಗ ಕೆಪಿಸಿಸಿಯ ಒಂದಷ್ಟು ಹುದ್ದೆಗಳಿಗೆ ನಾಯಕರ ನೇಮಕವಾಗಿತ್ತು. ಡಿಕೆಶಿ ಜೈಲಿಂದ ಹೊರಬರುವಷ್ಟರಲ್ಲಿ ಹೇಳಿಕೊಳ್ಳೋಕೆ ಒಂದು ಹುದ್ದೆ ಅಥವಾ ಚೇರ್ ಕೂಡ ಖಾಲಿ ಇಲ್ಲ. ಆದ್ರೆ ಶೀಘ್ರದಲ್ಲೇ ಡಿಕೆಶಿ ರಾಜ್ಯ ಕಾಂಗ್ರೆಸ್ ಆಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗ್ತಿವೆ. ಯಾಕಂದ್ರೆ ಡಿಕೆಶಿ ಪರ ಸೋನಿಯಾ ಬಲಗೈ ಬಂಟ ಅಹ್ಮದ್ ಪಟೇಲ್‌ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಿಹಾರ್ […]

ಕೆಪಿಸಿಸಿ ಗಾದಿಗೆ ಶುರುವಾಯ್ತು ಮೆಗಾ ಫೈಟ್, ಡಿಕೆಶಿ ಪರ ಅಹ್ಮದ್ ಪಟೇಲ್‌ ಬ್ಯಾಟಿಂಗ್
ಸಾಧು ಶ್ರೀನಾಥ್​
|

Updated on:Nov 02, 2019 | 4:54 PM

Share

ಬೆಂಗಳೂರು: ಕಾಂಗ್ರೆಸ್‌ನ ಟ್ರಬಲ್ ಶೂಟರ್​ಗೆ ಜೈಲಿಗೆ ಹೋಗಿ ಬಂದಿದ್ದೇ ಒಂಥರಾ ಬಂಪರ್ ಹೊಡೆದಂತಿದೆ. ಇ.ಡಿ ಅಧಿಕಾರಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್​ ಯನ್ನ ಅರೆಸ್ಟ್ ಮಾಡಿದಾಗ ಕೆಪಿಸಿಸಿಯ ಒಂದಷ್ಟು ಹುದ್ದೆಗಳಿಗೆ ನಾಯಕರ ನೇಮಕವಾಗಿತ್ತು. ಡಿಕೆಶಿ ಜೈಲಿಂದ ಹೊರಬರುವಷ್ಟರಲ್ಲಿ ಹೇಳಿಕೊಳ್ಳೋಕೆ ಒಂದು ಹುದ್ದೆ ಅಥವಾ ಚೇರ್ ಕೂಡ ಖಾಲಿ ಇಲ್ಲ. ಆದ್ರೆ ಶೀಘ್ರದಲ್ಲೇ ಡಿಕೆಶಿ ರಾಜ್ಯ ಕಾಂಗ್ರೆಸ್ ಆಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗ್ತಿವೆ. ಯಾಕಂದ್ರೆ ಡಿಕೆಶಿ ಪರ ಸೋನಿಯಾ ಬಲಗೈ ಬಂಟ ಅಹ್ಮದ್ ಪಟೇಲ್‌ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಮಾಸ್ ಎಂಟ್ರಿ ಕೊಟ್ಟಿರೋ ಕನಕಪುರ ಬಂಡೆ ರಿಯಲ್ ಪವರ್ ಗೇಮ್ ಶುರು ಮಾಡಿದ್ದಾರೆ. ಇಡಿ ಬಂಧನದಿಂದ ಬಿಡುಗಡೆಯಾದ ಡಿಕೆಶಿ ಕಣ್ಣು ಬಿದ್ದಿದ್ದು ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ. ಜೈಲಿಂದ ರಿಲೀಸ್ ಆದ ಮೇಲೆ ಪಕ್ಷದಲ್ಲಿ ಆಯಕಟ್ಟಿನ ಜಾಗ ಹುಡುಕ್ತಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಬಯಕೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಅನ್ನೋ ಗುಸುಗುಸು ಆಗಾಗ ಕೇಳಿ ಬರ್ತಿತ್ತು. ಹೀಗೆ ಕೇಳಿಬರ್ತಿದ್ದ ಗಾಸಿಪ್ ಈಗ ನಿಜವಾಗೋ ಸಮಯ ಬಂದಿದೆ.

ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಿದ್ದೇ ಪಕ್ಷಕ್ಕಾಗಿ: ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಿದ್ದೇ ಪಕ್ಷಕ್ಕಾಗಿ ಅಂತಾ ಅಹ್ಮದ್ ಪಟೇಲ್ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಸೋನಿಯಾ ಗಾಂಧಿ ಅತ್ಯಾಪ್ತರಾಗಿರೋ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಡಿಕೆಶಿ ಸಹಕಾರಕ್ಕಾಗಿ ಋಣ ಸಂದಾಯಕ್ಕೆ ಮುಂದಾಗಿದ್ದಾರೆ.

‘ಬಂಡೆ’ ಪರ ಬ್ಯಾಟಿಂಗ್: ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಪರ ಲಾಬಿ ನಡೆಸಿದ ಅಹ್ಮದ್ ಪಟೇಲ್, ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಿದ್ದು ಪಕ್ಷಕ್ಕಾಗಿ. ಪಕ್ಷದ ಸೂಚನೆ ಮೇರೆಗೆ ಗುಜರಾತ್ ಶಾಸಕರನ್ನ ರಕ್ಷಿಸಿದ್ದರು. ತಮ್ಮ ರಾಜ್ಯಸಭಾ ಗೆಲುವಿಗಾಗಿ ಡಿಕೆಶಿ ಜೈಲಿಗೆ ಹೋದ್ರು ಅಂತಾ ಅಹ್ಮದ್ ಪಟೇಲ್ ಕನ್ವಿನ್ಸ್ ಮಾಡಿದ್ದಾರೆ. ಇನ್ನು ಇದೇ ಕಾರಣಕ್ಕಾಗಿ ಡಿಕೆಶಿಯನ್ನು ಟಾರ್ಗೆಟ್ ಮಾಡಲಾಗಿತ್ತು. ಇದಕ್ಕಾಗಿ ಅವ್ರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡ್ಬೇಕು ಅಂತಾ ಸೋನಿಯಾ ಎದುರು ಲಾಬಿ ನಡೆಸಿದ್ದಾರೆನ್ನಲಾಗಿದೆ.

ಕೆಪಿಸಿಸಿ ಗಾದಿಗೆ ಶುರುವಾಯ್ತು ಮೆಗಾ ಫೈಟ್! ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಡಿಕೆಶಿ ಪರ ಲಾಬಿ ನಡೆಸ್ತಿದ್ದಂತೆ ಇತ್ತ ಕೆಪಿಸಿಸಿಯಲ್ಲಿ ಹಲ್ ಚಲ್ ಶುರುವಾಗಿದೆ. ಕಾಂಗ್ರೆಸ್​ನ ಆಂತರಿಕ ವಲಯದಲ್ಲಿ ಗಾಡ್ ಫಾದರ್ ಅಂತಾನೇ ಫೇಮಸ್ ಆಗಿರೋ ಅಹ್ಮದ್ ಪಟೇಲ್ ಕನಕಪುರ ಬಂಡೆಗೆ ಆಸರೆಯಾಗಿ ನಿಂತಿದ್ದಾರೆ. ಈ ಕಾರಣಕ್ಕಾಗಿಯೇ ದೆಹಲಿ ಕಾರಿಡಾರ್ ಗಳಲ್ಲಿ ಮುಂದಿನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅನ್ನೋ ಮಾತುಗಳು ಪ್ರಬಲವಾಗಿ ಕೇಳಿ ಬರ್ತಾ ಇದೆ.

ರಾಜಧಾನಿ ಮೇಲೆ ಹಿಡಿತ ಸಾಧಿಸಲು ‘ಬಂಡೆ’ ಪ್ಲಾನ್! ಅತ್ತ ಕೆಪಿಸಿಸಿ ಅಧ್ಯಕ್ಷ ಪಟ್ಟ ಡಿಕೆಶಿಗೆ ಸಿಗಬೇಕು ಅಂಥಾ ಅಹ್ಮ ದ್ ಪಟೇಲ್ ಲಾಬಿ ನಡೆಸ್ತಿದ್ರೆ, ಇತ್ತ ಡಿಕೆ ಶಿವಕುಮಾರ್ ಬಿಬಿಎಂಪಿ ವ್ಯಾಪ್ತಿಯ ಕಾರ್ಪೊರೇಟರ್​ಗಳ ಜೊತೆ ಸಭೆ ನಡೆಸಿದ್ರು. ಬಿಬಿಎಂಪಿ ಮಾಜಿ ಮೇಯರ್​ಗಳಾದ ಪದ್ಮಾವತಿ, ಗಂಗಾಂಬಿಕೆ ಸೇರಿ 40ಕ್ಕೂ ಹೆಚ್ಚು ಕಾರ್ಪೊರೇಟರ್​ಗಳ ಜೊತೆ ಚರ್ಚೆ ನಡೆಸಿದ ಡಿಕೆಶಿ, ಮುಂದಿನ ದಿನಗಳಲ್ಲಿ ನಮಗೆ ಸಾಕಷ್ಟು ಅವಕಾಶವಿದೆ. ವಾರ್ಡ್​​ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸೋಣ. ನೀವು ಜೊತೆಯಾಗಿ ನಿಂತರೆ ನನಗೂ ಧೈರ್ಯ ಬರಲಿದೆ ಅಂದಿದ್ದಾರೆ ಎನ್ನಲಾಗಿದೆ.

ಆದರೆ ವಿರೋಧಿ ಬಣ ಮಾತ್ರ ಡಿಕೆಶಿ ಕೆಪಿಸಿಸಿ ಗಾದಿಗೇರಿ ಮತ್ತೆ ಅರೆಸ್ಟ್ ಆದರೆ ಏನು ಗತಿ ಅಂತಾ ಚರ್ಚೆ ಮಾಡ್ತಿದೆ. ಒಟ್ನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಡಿಕೆಶಿ ತ್ಯಾಗಕ್ಕೆ ಅಹ್ಮದ್ ಪಟೇಲ್ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಆದ್ರೆ ಹಾಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ರನ್ನು ಕೆಳಗಿಳಿಸಿ ಡಿಕೆ ಶಿವಕುಮಾರ್​ಗೆ ಪಟ್ಟಾಭಿಷೇಕ ಮಾಡೋ ಅಷ್ಟೊಣದು ಸುಲಭನಾ ಅನ್ನೋದು ಸದ್ಯದ ಪ್ರಶ್ನೆ.

Published On - 4:13 pm, Sat, 2 November 19

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು