ನಡತೆ ಸರಿಯಿಲ್ಲವೆಂದು ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದ ಭೂಪ
ಕೊಡಗು: ನಡತೆ ಸರಿಯಿಲ್ಲವೆಂದು ಅನುಮಾನಿಸಿ ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ. ಪತ್ನಿ ಜುಬೈದಾ(25) ಕೊಲೆಯಾದ ಮಹಿಳೆ. 7 ವರ್ಷಗಳ ಹಿಂದೆ ಜುಬೈದಾ, ಷರೀಫ್ ವಿವಾಹವಾಗಿದ್ದರು. ಶರೀಫ್ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ, ಇತ್ತೀಚೆಗೆ ಪತ್ನಿಯ ನಡತೆ ಸರಿಯಿಲ್ಲ ಎಂದು ಪದೇ ಪದೆ ಜಗಳವಾಡುತ್ತಿದ್ದ. ತಡರಾತ್ರಿ ಜಗಳ ತಾರಕಕ್ಕೇರಿ ಪತ್ನಿಗೆ 30ಕ್ಕೂ ಅಧಿಕ ಕಡೆ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. ಮಡಿಕೇರಿ ನಗರ ಪೊಲೀಸ್ […]
ಕೊಡಗು: ನಡತೆ ಸರಿಯಿಲ್ಲವೆಂದು ಅನುಮಾನಿಸಿ ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ.
ಪತ್ನಿ ಜುಬೈದಾ(25) ಕೊಲೆಯಾದ ಮಹಿಳೆ. 7 ವರ್ಷಗಳ ಹಿಂದೆ ಜುಬೈದಾ, ಷರೀಫ್ ವಿವಾಹವಾಗಿದ್ದರು. ಶರೀಫ್ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ, ಇತ್ತೀಚೆಗೆ ಪತ್ನಿಯ ನಡತೆ ಸರಿಯಿಲ್ಲ ಎಂದು ಪದೇ ಪದೆ ಜಗಳವಾಡುತ್ತಿದ್ದ. ತಡರಾತ್ರಿ ಜಗಳ ತಾರಕಕ್ಕೇರಿ ಪತ್ನಿಗೆ 30ಕ್ಕೂ ಅಧಿಕ ಕಡೆ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ.
ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶರೀಫ್ನನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Published On - 11:54 am, Sun, 3 November 19