ಕಲಬುರಗಿ, ಡಿಸೆಂಬರ್ 28: ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ (Bhagyavanti Devi) ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿ ಎಣಿಕೆ ಮಾಡುವ ವೇಳೆ ವಿಚಿತ್ರ ಹರಕೆಯ ನೋಟ್ ಪತ್ತೆಯಾಗಿದೆ. ಅತ್ತೆ ಸಾಯಬೇಕೆಂದು ಬರೆದಿರುವ 20 ರೂ. ಮುಖಬೆಲೆಯ ನೋಟ್ ಪತ್ತೆಯಾಗಿದೆ. “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು” ಅಂತ 20 ರೂ. ಮುಖಬೆಲೆಯ ನೋಟ್ ಮೇಲೆ ಬರೆದು ಹುಂಡಿಯಲ್ಲಿ ಹಾಕಲಾಗಿದೆ.
ಹುಂಡಿ ಎಣಿಕೆ ಕಾರ್ಯ ವೇಳೆ ನೋಟ್ ಪತ್ತೆಯಾಗಿದೆ. ನೋಟ್ನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅತ್ತೆ ಸಾಯಲೆಂದು ಸೊಸೆ ಈ ರೀತಿಯಾಗಿ ಬರೆದು ಹಾಕಿದ್ದಾಳೆ ಎಂದು ಊಹಿಸಲಾಗಿದೆ. ಹುಂಡಿಯಲ್ಲಿ 60 ಲಕ್ಷ ನಗದು, ಒಂದು ಕೆಜಿ ಬೆಳ್ಳಿ, 200 ಗ್ರಾಂ ಚಿನ್ನಾಭರಣ ಹುಂಡಿಯಲ್ಲಿ ಹಾಕಲಾಗಿತ್ತು.
ಬೆಂಗಳೂರಿನ ಬನಶಂಕರಿ ದೇವಸ್ಥಾನ ಪ್ರಸಿದ್ದವಾದ ದೇವಸ್ಥಾನಗಳಲ್ಲೊಂದು. ಶಕ್ತಿ ದೇವತೆ ಆದ ಬನಶಂಕರಿ ದೇವಿಯ ಆರ್ಶಿವಾದ ಪಡೆಯಲು ಲಕ್ಷಾಂತರ ಜನ ಆಗಮಿಸುತ್ತಾರೆ. ಇದೇ ವರ್ಷ ಮೇ 24 ರಂದು ಬನಶಂಕರಿ ಹುಂಡಿ ಎಣಿಕೆ ಕಾರ್ಯ ನಡೆದಿತ್ತು.
ಹುಂಡಿ ಎಣಿಯಲ್ಲಿ ಹಲವು ಹರಕೆ ಪತ್ರಗಳು ಪತ್ತೆಯಾಗಿದ್ದವು. ಆಸ್ತಿ ನನಗೇ ದಕ್ಕುವಂತೆ ಮಾಡು, ಸೋಸೆ ನಮ್ಮ ಕುಟುಂಬದ ಜೊತೆ ಚೆನ್ನಾಗಿ ಹೊಂದುಕೊಳ್ಳುವಂತೆ ಮಾಡು, ಹೀಗೆ ಹಲವು ಹರಕೆ ಪತ್ರಗಳು ಸಿಕ್ಕಿದ್ದವು.
ಇದನ್ನೂ ಓದಿ: ಮಂಗಳೂರು: ಅಪಘಾತದ ಸ್ಥಳದಿಂದ 2 ದಿನ ಕದಲದೆ ಅಚ್ಚರಿ ಮೂಡಿಸಿದ ಹರಕೆ ಕೋಳಿ
“ನನ್ನ ತಾಯಿ ಕಡೆಯಿಂದ ಬರುವ ಆಸ್ತಿ ನನಗೆ ಬರುವ ಹಾಗೆ ಮಾಡು, ಯಾವುದೇ ಅಡ್ಡಿ ಇಲ್ಲದೆ ನನಗೆ ಸಿಗುವ ತರಹ ಮಾಡು ಎಂದು ಹಾಳೆಯಲ್ಲಿ ಬರೆದು ಹುಂಡಿಗೆ ಹಾಕಲಾಗಿತ್ತು. ಮತ್ತೊಬ್ಬರು “ಓಂ ಶ್ರೀ ಬನಶಂಕರಿಯೇ ನಮಃ ಎಂದು ಬರೆದು ಮುಮದುವರೆಸಿ, ಅಮ್ಮ ನಿನ್ನಲ್ಲಿ ನನ್ನ ಕೋರಿಕೆ ಇದೆ. ನನ್ನ ಮಗನ ಮದುವೆ ನಿಶ್ಚಯವಾಗಿದೆ. ಈಗಾಗಲೇ ನಿಶ್ಚಿತಾರ್ಥ್ ಕೂಡ ಆಗಿದ್ದು, ಮದುವೆ ಕೆಲಸಗಳು ಮುಂದುವರೆದಿದೆ. ಅದರಂತೆ ನನ್ನ ಮಗನ ಮದುವೆ ಆಗುವ ಹುಡುಗಿ, ನನ್ನ ಮಗ, ಕುಟುಂಬದ ಜೊತೆ ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡು ಎಂದು ಬೇಡಿಕೊಂಡಿದ್ದರು.”
ಮತ್ತೊಬ್ಬರು, “ಹೇಮನಿಗೆ ಒಳ್ಳೆ ಕಡೆಯ ಸಂಬಂಧ ಒದಗಿಬಂದು ಸಂತೋಷದಿಂದ ಒಪ್ಪಿ ಮದುವೆ ಆಗುವ ಹಾಗೆ ದಾರಿ ತೋರಿಸವ್ವ. ಜೊತೆಗೆ ಅಮ್ಮನ ಮನೆ ಸಮಸ್ಯೆ ಸರಿಹೋಗಿ ದುಡ್ಡು ಬರುವ ಹಾಗೆ ಮಾಡವ್ವ” ಎಂದು ವಿಧವಿಧವಾದ ಬೇಡಿಕೆಯನ್ನು ದೇವಿ ಮುಂದೆ ಇಟ್ಟಿದ್ದರು.
ಮೇ ತಿಂಗಳಲ್ಲಿ ಬನಶಂಕರಿ ದೇವಿಯ ಹುಂಡಿಯಲ್ಲಿ ಬರೊಬ್ಬರಿ 44 ಲಕ್ಷದ 4 ಸಾವಿರದ 840 ರೂ. ಹಣ ಸಂಗ್ರಹವಾಗಿತ್ತು. 96 ಗ್ರಾಂ 100 ಮಿಲಿ ಚಿನ್ನ, 573 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಅಲ್ಲದೇ ಅಮೆರಿಕದ 5 ನೋಟು, ವಿಯೆಟ್ನಂನ 16 ನೋಟು, ಮಲೇಶಿಯಾದ 14 ನೋಟು, ಬೂತಾನ್ನ 2 ನೋಟು, ನೇಪಾಳದ 3 ನೊಟು, ತೈಲ್ಯಾಂಡ್ನ 3 ನೋಟುಗಳು ಹುಂಡಿಯಲ್ಲಿದ್ದವು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ