ನಿರಂತರ ಮಳೆಯಿಂದ ಕಲಬುರಗಿ ರೈತರು ಕಂಗಾಲು; ಜಮೀನಿನಲ್ಲಿ ಕೊಳೆಯುತ್ತಿರುವ ತೊಗರಿ ಬೆಳೆ

ನಿರಂತರ ಮಳೆಯಿಂದ ಕಲಬುರಗಿ ರೈತರು ಕಂಗಾಲು; ಜಮೀನಿನಲ್ಲಿ ಕೊಳೆಯುತ್ತಿರುವ ತೊಗರಿ ಬೆಳೆ
ತೊಗರಿ ಬೆಳೆದ ಜಮೀನಿನಲ್ಲಿ ನೀರು ನಿಂತಿದೆ

ತೊಗರಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಾರಿ ಮಳೆ ಸುರಿಯುತ್ತಿದೆ. ಈ ಪರಿಣಾಮ ಕೃಷಿ ಜಮೀನಿನಲ್ಲಿ ನೀರು ನಿಂತಿದೆ. ಹೀಗಾಗಿ ತೊಗರಿ ಬೆಳೆ ಕೊಳೆಯುತ್ತಿದೆ.

TV9kannada Web Team

| Edited By: sandhya thejappa

Oct 03, 2021 | 11:51 AM

ಕಲಬುರಗಿ: ರಾಜ್ಯದ ತೊಗರಿ ಕಣಜ ಅಂತ ಕಲಬುರಗಿ ಜಿಲ್ಲೆ ಖ್ಯಾತಿ ಪಡೆದಿದೆ. ಆದರೆ ಜಿಲ್ಲೆಯ ತೊಗರಿ ಬೆಳೆಗಾರರು ಈ ಬಾರಿ ಪ್ರವಾಹ, ನಿರಂತರ ಮಳೆಯಿಂದ ಕಂಗಾಲಾಗಿ ಹೋಗಿದ್ದಾರೆ. ನಿರಂತರ ಮಳೆಯಿಂದ ತೊಗರಿ ಬೇಳೆ ಹಳದಿ ಬಣ್ಣಕ್ಕೆ ತಿರಗುತ್ತಿದ್ದು, ಬೇರುಗಳು ಕೊಳೆಯುತ್ತಿವೆ. ಹೀಗಾಗಿ ಈ ಬಾರಿ ಗಣನೀಯವಾಗಿ ತೊಗರಿ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಬೆಳೆಯುವ ತೊಗರಿ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೆ ಹೋಗುತ್ತದೆ. ಜಿಲ್ಲೆಯಲ್ಲಿ ಬೆಳೆಯುವ ತೊಗರಿಯಲ್ಲಿ ಪ್ರೋಟಿನ್ ಹೆಚ್ಚಾಗಿರುವುದರಿಂದ ಈ ಭಾಗದ ತೊಗರಿಗೆ ಪುಲ್ ಡಿಮ್ಯಾಂಡ್ ಕೂಡಾ ಇದೆ. ಜಿಲ್ಲೆಯಲ್ಲಿರುವ ಕೃಷಿ ವಿಸ್ತೀರ್ಣದ ಪೈಕಿ ಶೇಕಡಾ ತೊಂಬತ್ತರಷ್ಟು ತೊಗರಿಯನ್ನು ಬೆಳೆಯುತ್ತಿದ್ದಾರೆ. ಏಳು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ತೊಗರಿ ಬೆಳೆಯಲಾಗಿದೆ. ಮುಂಗಾರು ಮಳೆ ಚೆನ್ನಾಗಿ ಬಿದ್ದಿದ್ದರಿಂದ ತೊಗರಿ ಬೆಳೆ ಚೆನ್ನಾಗಿ ಕೂಡಾ ಬಂದಿತ್ತು. ಬೆಳೆಗಾರರ ಮಂದಹಾಸವನ್ನು ಹೆಚ್ಚಿಸಿತ್ತು. ಆದರೆ ಬೆಳೆಗಾರರು ಇದೀಗ ಆತಂಕಕ್ಕೊಳಗಾಗಿದ್ದಾರೆ.

ತೊಗರಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದ್ದು ನಿರಂತರವಾಗಿ ಸುರಿಯುತ್ತಿರುವ ಮಳೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಾರಿ ಮಳೆ ಸುರಿಯುತ್ತಿದೆ. ಈ ಪರಿಣಾಮ ಕೃಷಿ ಜಮೀನಿನಲ್ಲಿ ನೀರು ನಿಂತಿದೆ. ಹೀಗಾಗಿ ತೊಗರಿ ಬೆಳೆ ಕೊಳೆಯುತ್ತಿದೆ. ಬೇರುಗಳು ಕೊಳೆಯುತ್ತಿದ್ದರೆ, ಮತ್ತೊಂದಡೆ ತೊಗರಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳವರಗೆ ಜಿಲ್ಲೆಯಲ್ಲಿ 582 ಮಿಲಿ ಮೀಟರ್ ಮಳೆಯಾಗಬೇಕು. ಆದರೆ 698 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲೂ ಜಿಲ್ಲೆಯ ಕಾಳಗಿ, ಚಿತ್ತಾಪುರ, ಚಿಂಚೋಳಿ, ಸೇರಿದಂತೆ ಕೆಲ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ರೈತರನ್ನು ಕಂಗಾಲು ಮಾಡಿದೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ತೊಗರಿ ಬೆಳೆದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ ಏಳು ಸಾವಿರ ರೂಪಾಯಿ ಬೆಲೆಯಿದೆ. ಇನ್ನೊಂದು ತಿಂಗಳಾದರೆ ತೊಗರಿಯಲ್ಲಿ ಕಾಯಿಗಳು ಆಗುತ್ತಿದ್ದವು. ಆದರೆ ನಿರಂತರ ಮಳೆಯಿಂದ ತೊಗರಿ ಗಿಡಗಳಲ್ಲಿ ಹೂಗಳು ಕೂಡಾ ಕಾಣುತ್ತಿಲ್ಲಾ.

ಇದನ್ನೂ ಓದಿ

ಕಸದ ತೊಟ್ಟಿಯಿಂದ ಮೊಸಳೆ ಹಿಡಿದ ಮಾಜಿ ಯೋಧ; ವಿಡಿಯೋ ವೈರಲ್

Shocking News: ರೋಗಿಯ ಹೊಟ್ಟೆಯಿಂದ 1 ಕೆಜಿಗಿಂತ ಹೆಚ್ಚು ಉಗುರು ಮತ್ತು ಕಬ್ಬಿಣದ ತುಂಡುಗಳನ್ನು ಹೊರತೆಗೆದ ವೈದ್ಯರು!

Follow us on

Related Stories

Most Read Stories

Click on your DTH Provider to Add TV9 Kannada