ಕಲಬುರಗಿ: ಮೂವತ್ತು ಸಾವಿರ ಲಂಚ (Bribery) ಪಡೆಯುವಾಗ ಕಲಬುರಗಿ ನಗರದ ಬ್ರಹ್ಮಪುರ ಠಾಣೆ ಕಾನ್ಸ್ಟೇಬಲ್ ರೆಡ್ ಹ್ಯಾಂಡ್ (Red Hand) ಆಗಿ ಸಿಕ್ಕಿಬಿದ್ದಿದ್ದಾರೆ. ಭೀಮು ನಾಯ್ಕ್ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಕಾನ್ಸ್ಟೇಬಲ್. ಅಬ್ದುಲ್ ಮುಸ್ತಫಾ ಅನ್ನೋರ ವಿರುದ್ಧ ಸೈಟ್ ವಿಚಾರವಾಗಿ ಕೆಲವರು ದೂರು ನೀಡಿದ್ದರು. ಅಬ್ದುಲ್ ಮುಸ್ತಫಾ ಈ ವೇಳೆ ಠಾಣೆಗೆ ಕರೆಯಿಸಿ ಹಣ ನೀಡುವುದಾಗಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಅಬ್ದುಲ್ ಮುಸ್ತಾಫಾ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಎಸಿಬಿ ಅಧಿಕಾರಿಗಳು ಹಣ ಪಡೆಯುವಾಗ ರೆಂಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಭೀಮು ನಾಯ್ಕ್ ಅಬ್ದುಲ್ ಮುಸ್ತಾಫಾ ಅವರಿಗೆ ಒಂದು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ನಿನ್ನೆ ರಾತ್ರಿ ಕಲಬುರಗಿ ನಗರದ ರೈಲ್ವೆ ನಿಲ್ದಾಣದ ಹೋಟೆಲ್ ಬಳಿ ಮೂವತ್ತು ಸಾವಿರ ಪಡೆಯುತ್ತಿದ್ದಂತೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಕಾನ್ಸ್ಟೇಬಲ್ ಭೀಮು ನಾಯ್ಕ್ನನ್ನು ಬಂಧಿಸಿದ್ದಾರೆ.
ಮಾದಕ ವಸ್ತು ಮನೆಯಲ್ಲಿಟ್ಟಿದ್ದ ಆರೋಪಿ ಬಂಧನ: ಬೆಂಗಳೂರು: ಕೆಜಿಗಟ್ಟಲೆ ಮಾದಕ ವಸ್ತುಗಳನ್ನ ಮನೆಯಲ್ಲಿಟ್ಟಿದ್ದ ಆರೋಪಿಗಳನ್ನ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆಫ್ರಿಕಾ ಮೂಲದ ಜಾನ್ ಅಬ್ರಹಾಂ ಬಂಧಿತ ಆರೋಪಿ. ಬಂಧಿತನಿಂದ 1.4 ಕೆಜಿ MDMA, 6 ಕೆಜಿ ಗಾಂಜಾ, ಏಳು ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Amarnath Yatra 2022 Registration: ಜೂನ್ 30 ರಂದು ಅಮರನಾಥ ಯಾತ್ರೆ ಆರಂಭ; ಟಿಕೆಟ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಅಪ್ರಾಪ್ತ ಬಾಲಕರು ಪೊಲೀಸರ ವಶಕ್ಕೆ: ಬೈಕ್ ಕಳ್ಳತನ ಮಾಡುತ್ತಿದ್ದ ಅಪ್ರಾಪ್ತ ಬಾಲಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತರು ಮಾಗಡಿ ರಸ್ತೆ, ವಿಜಯನಗರ, ಸಿಟಿ ಮಾರ್ಕೆಟ್, ಅಶೋಕನಗರ, ಸಿ.ಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದರು. ಬಾಲಕರಿಂದ 5 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಸದ್ಯ ಈ ಪ್ರಕರಣ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ