ಕೆಂಡದಂತ ಬಿಸಿಲು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಡವರ ಫ್ರಿಡ್ಜ್​ಗೆ ಫುಲ್ ಡಿಮ್ಯಾಂಡ್

ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗ ಬಿಸಿಲುನಾಡು ಅಂತಲೇ ಪ್ರಸಿದ್ದವಾಗಿರೋ ಪ್ರದೇಶ. ಬೇಸಿಗೆಯ ಸಮಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕೆಂಡದಂತ ಬಿಸಿಲಿರುತ್ತದೆ. ಮೇ 15ರವರೆಗೆ ಕೆಲ ದಿನಗಳಿಂದ ಅಲ್ಲಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಕಡಿಮೆಯಿತ್ತು. ಆದ್ರೆ ಕಳೆದ 4-5 ದಿನಗಳಿಂದ ಖಡಕ್ ಬಿಸಿಲು ಪ್ರಾರಂಭವಾಗಿದೆ. ಕಲಬುರಗಿಯಲ್ಲಿ 44 ಡಿಗ್ರಿಯಿಂದ 45 ಡಿಗ್ರಿವರಗೆ ಬಿಸಿಲು ದಾಖಲಾಗುತ್ತಿದೆ. ಅದರಲ್ಲೂ ಮೇ ತಿಂಗಳ ಅಂತ್ಯ ಮತ್ತು ಜೂನ್ ತಿಂಗಳ ಮೊದಲವಾರದಲ್ಲಿ ಕೆಂಡದಂತ ಬಿಸಿಲು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, […]

ಕೆಂಡದಂತ ಬಿಸಿಲು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಡವರ ಫ್ರಿಡ್ಜ್​ಗೆ ಫುಲ್ ಡಿಮ್ಯಾಂಡ್
Follow us
ಸಾಧು ಶ್ರೀನಾಥ್​
| Updated By:

Updated on:May 25, 2020 | 1:49 PM

ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗ ಬಿಸಿಲುನಾಡು ಅಂತಲೇ ಪ್ರಸಿದ್ದವಾಗಿರೋ ಪ್ರದೇಶ. ಬೇಸಿಗೆಯ ಸಮಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕೆಂಡದಂತ ಬಿಸಿಲಿರುತ್ತದೆ. ಮೇ 15ರವರೆಗೆ ಕೆಲ ದಿನಗಳಿಂದ ಅಲ್ಲಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಕಡಿಮೆಯಿತ್ತು. ಆದ್ರೆ ಕಳೆದ 4-5 ದಿನಗಳಿಂದ ಖಡಕ್ ಬಿಸಿಲು ಪ್ರಾರಂಭವಾಗಿದೆ. ಕಲಬುರಗಿಯಲ್ಲಿ 44 ಡಿಗ್ರಿಯಿಂದ 45 ಡಿಗ್ರಿವರಗೆ ಬಿಸಿಲು ದಾಖಲಾಗುತ್ತಿದೆ.

ಅದರಲ್ಲೂ ಮೇ ತಿಂಗಳ ಅಂತ್ಯ ಮತ್ತು ಜೂನ್ ತಿಂಗಳ ಮೊದಲವಾರದಲ್ಲಿ ಕೆಂಡದಂತ ಬಿಸಿಲು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಇರುತ್ತದೆ. ಹೀಗಾಗಿ ರಣ ಬಿಸಿಲಿಗೆ ಬಿಸಿಲನಾಡಿನ ಜನರು ಹೈರಾಣಾಗುತ್ತಾರೆ. ಇಂತಹ ಬಿಸಿಲಿನ ನಡುವೆ ಇದೀಗ ಮತ್ತೆ ಬಡವರ ಫ್ರಿಡ್ಜ್​ಗೆ ಎನಿಸಿಕೊಂಡಿರೋ ಮಣ್ಣಿನ ಮಡಕೆಗಳಿಗೆ ಫುಲ್ ಡಿಮ್ಯಾಂಡ್ ಪ್ರಾರಂಭವಾಗಿದೆ.

ಬಡವರ ಫ್ರಿಡ್ಜ್ ಈ ಮಣ್ಣಿನ ಮಡಕೆ: ಹೌದು ಬಿರು ಬೇಸಿಗೆಯ ಕಾಲದಲ್ಲಿ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚಾಗಿರುತ್ತದೆ. ಅದರಂತೆ ಈ ಬಾರಿ ಕೂಡಾ ಜಿಲ್ಲೆಯಲ್ಲಿ ಮಣ್ಣಿನ ಮಡಕೆಗಳಿಗೆ ಫುಲ್ ಡಿಮ್ಯಾಂಡ್ ಪ್ರಾರಂಭವಾಗಿದೆ. ಮಣ್ಣಿನ ಮಡಕೆಯಲ್ಲಿ ನೀರು ಹಾಕಿಟ್ಟರೆ, ತಂಪಾಗಿರುತ್ತದೆ. ಇದು ನೈಸರ್ಗಿಕವಾಗಿ ನೀರನ್ನು ತಂಪಾಗಿಡುವದರಿಂದ ಫ್ರಿಡ್ಜ್​ಗಿಂತ ಆರೋಗ್ಯಕ್ಕೂ ಕೂಡಾ ಚೆನ್ನಾಗಿರುತ್ತದೆ. ಹೀಗಾಗಿ ಫ್ರಿಡ್ಜ್​ನಲ್ಲಿದ್ದ ಕೋಲ್ಡ್ ನೀರು ಕುಡಿಯುವುದರಿಂದ ದೇಹಕ್ಕೆ ಅನೇಕ ಅಪಾಯಗಳಾಗುವ ಸಾಧ್ಯತೆ ಇರುತ್ತದೆ.

ಆದ್ರೆ ಬಡವರ ಫ್ರಿಡ್ಜ್ ಮಡಕೆಯಲ್ಲಿನ ತಣ್ಣನೆಯ ನೀರನ್ನು ಸೇವಿಸುವುದರಿಂದ ಯಾವುದೇ ಸಮಸ್ಯೆ ಇರೋದಿಲ್ಲ. ಹೀಗಾಗಿ ಬಹುತೇಕರು ಫ್ರಿಡ್ಜ್​ನಲ್ಲಿ ನೀರನ್ನು ಇಟ್ಟು, ಕುಡಿಯುವ ಬದಲು ಮಣ್ಣಿನ ಮಡಕೆಗಳನ್ನು ಹೆಚ್ಚಾಗಿ ಬಳಸ್ತಾರೆ. ಮನೆಯಲ್ಲಿ ಫ್ರಿಡ್ಜ್​ ಇದ್ದವರು, ಇರದವರು ಕೂಡಾ ಬೇಸಿಗೆಯ ಸಂದರ್ಭದಲ್ಲಿ ಮಣ್ಣಿನ ಮಡಕೆಗಳನ್ನು ಖರೀದಿಸಿ, ಮನೆಗೆ ತಗೆದುಕೊಂಡು ಹೋಗ್ತಾರೆ. ಮಣ್ಣಿನ ಮಡಕೆಗಳಲ್ಲಿ ನೀರನ್ನು ತುಂಬಿಟ್ಟು, ಅದೇ ನೀರನ್ನು ಹೆಚ್ಚಾಗಿ ಬಳಸ್ತಾರೆ. ಈ ಮೊದಲು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಮಣ್ಣಿನ ಮಡಕೆಗಳನ್ನು ಬಳಸ್ತಾಯಿದ್ದರು. ಇದೀಗ ನಗದ ಜನರು ಕೂಡಾ ಬೇಸಿಗೆಯಲ್ಲಿ ಹೆಚ್ಚಾಗಿ ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದಾರೆ.

ಮಣ್ಣಿನಿಂದ ತಯಾರಿಸಿದ ವಸ್ತುಗಳಿಗೆ ಹೆಚ್ಚಿದ ಬೇಡಿಕೆ: ಈ ಹಿಂದೆ ಹೆಚ್ಚಾಗಿ ಮಡಕೆಗಳನ್ನು ಕುಂಬಾರರು ಹೆಚ್ಚಾಗಿ ಮಾಡ್ತಾಯಿದ್ದರು. ಇದೀಗ ಅಲ್ಲಿ ಕೂಡಾ ಅನೇಕ ಬದಲಾವಣೆಗಳಾಗಿದ್ದು, ಜನರ ಅಗತ್ಯಕ್ಕೆ ತಂಕ್ಕಂತೆ ಬಾಟಲ್ ರೀತಿಯ ಪ್ಲಾಸ್ಕ್ ಗಾತ್ರದಲ್ಲಿ ಪುಟ್ಟದಾದ ಮತ್ತು ಸುಲಭವಾಗಿ ಕಾರ್ ಸೇರಿದಂತೆ ಅನೇಕ ವಾಹನಗಳಲ್ಲಿ ಇಡಬಹುದಾದ ಪುಟ್ಟ ಮಡಿಕೆಗಳು, ಟ್ಯಾಪ್ ಇರುವ ಮಡಿಕೆಗಳನ್ನು ಕೂಡಾ ಕುಂಬಾರರು ಸಿದ್ಧ ಮಾಡುತ್ತಿದ್ದಾರೆ. ಜನರಿಗೆ ಸುಲಭವಾಗಿ ನೀರು ತೆಗೆದುಕೊಂಡು ಕುಡಿಯಲು ಬೇಕಾದಂತೆ, ಮಡಿಕೆ ತಯಾರಿಕೆಯಲ್ಲಿ ಕೂಡಾ ಅನೇಕ ಬದಲಾವಣೆಗಳಾಗಿವೆ. ಇನ್ನು ಬೇಸಿಗೆ ಸಂದರ್ಭದಲ್ಲಿ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್ ಬರುತ್ತದೆ.

ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಮಡಿಕೆಗಳನ್ನು ಯಾರು ಖರೀದಿಸುವುದಿಲ್ಲ. ಆದ್ರೆ ಬೇಸಿಗೆ ಸಮಯದಲ್ಲಿ ಮಾತ್ರ ಹೆಚ್ಚಿನ ಜನರು ಮಡಿಕೆಗಳನ್ನು ಖರೀದಿಸುವುದರಿಂದ ಕುಂಬಾರರಿಗೆ ಹೆಚ್ಚಿನ ವ್ಯಾಪಾರ ಕೂಡಾ ಆಗ್ತಿದೆ. ಲಾಕ್​ಡೌನ್ ಸಂಕಷ್ಟದಲ್ಲಿ ಕೂಡಾ ಕುಂಬಾರರು ಮಣ್ಣಿನ ಮಡಿಕೆಗಳನ್ನು ಸಿದ್ಧಮಾಡಿ ಮಾರಾಟ ಮಾಡ್ತಿದ್ದಾರೆ.

ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನದ ಮುಂಬಾಗ ಸೇರಿದಂತೆ ಅನೇಕ ಕಡೆ ಮಣ್ಣಿನ ಮಡಕೆ ಸೇರಿದಂತೆ ಮಣ್ಣಿನಿಂದ ಮಾಡಿರುವ ಅನೇಕ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಬೀಡು ಬಿಟ್ಟಿದ್ದಾರೆ. ಪ್ರತಿನಿತ್ಯ ಇದೀಗ ಮೂರರಿಂದ ನಾಲ್ಕು ಸಾವಿರ ರೂಪಾಯಿ ವ್ಯಾಪಾರವನ್ನು ಮಾಡ್ತಿದ್ದಾರೆ. ನಗರದ ಜನರು ಕೂಡಾ ಹೆಚ್ಚಾಗಿ ಮಣ್ಣಿನ ಪ್ಲಾಸ್ಕ್, ಮಡಕೆಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಹೀಗಾಗಿ ವ್ಯಾಪಾರ ಕೂಡಾ ಇದೀಗ ಚೆನ್ನಾಗಿ ಆಗುತ್ತಿದೆ ಅಂತ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಕುಂಬಾರರು.

Published On - 1:47 pm, Mon, 25 May 20

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ