AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿವೃದ್ಧಿ ಕೆಲಸ‌ ಮಾಡಿ, ಇಲ್ಲ ಅಂದ್ರೆ ಮನೆಗೆ ಕಳಿಸಲಾಗುತ್ತೆ -ಸಚಿವರು, ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್

ಮಲ್ಲಿಕಾರ್ಜುನ ಖರ್ಗೆ​ ಅವರು ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರಿಗೆ ವಾರ್ನ್​​ ಮಾಡಿದ್ದಾರೆ. ಕೆಲಸ‌ ಮಾಡದಿದ್ರೆ ಸಚಿವಗಿರಿಗೆ ಕುತ್ತು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಖರ್ಗೆ ಪರೋಕ್ಷವಾಗಿ ಸುಳಿವು ಕೊಟ್ಟರು.ಕೆಕೆಆರ್​ಡಿ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು. ನೀವು ಇದರ ಬಗ್ಗೆ ಗಮನ ಕೊಡಬೇಕು ಎಂದಿದ್ದಾರೆ.

ಅಭಿವೃದ್ಧಿ ಕೆಲಸ‌ ಮಾಡಿ, ಇಲ್ಲ ಅಂದ್ರೆ ಮನೆಗೆ ಕಳಿಸಲಾಗುತ್ತೆ -ಸಚಿವರು, ಶಾಸಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್
ಮಲ್ಲಿಕಾರ್ಜುನ್​ ಖರ್ಗೆ
ಸಂಜಯ್ಯಾ ಚಿಕ್ಕಮಠ
| Updated By: ಆಯೇಷಾ ಬಾನು|

Updated on: Jan 28, 2024 | 8:33 AM

Share

ಕಲಬುರಗಿ, ಜ.28: ಅಭಿವೃದ್ಧಿ ಕೆಲಸ‌ ಮಾಡಬೇಕು. ಕೆಲಸ ಮಾಡಲಿಲ್ಲ ಅಂದ್ರೆ ಮನೆಗೆ ಕಳಿಸಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು ತಯಾರಿ ಶುರುವಾಗಿದೆ. ಈ ನಿಟ್ಟಿನಲ್ಲಿ ಸಚಿವರು, ಶಾಸಕರಿಗೆ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ​​ಕೆಕೆಆರ್​ಡಿ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು. ನೀವು ಇದರ ಬಗ್ಗೆ ಗಮನ ಕೊಡಬೇಕು ಸೂಚಿಸಿದ್ದಾರೆ.

ನಿನ್ನೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ​ ಅವರು ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರಿಗೆ ವಾರ್ನ್​​ ಮಾಡಿದ್ದಾರೆ. ತಾಲೂಕಿಗೊಂದು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ಎಂದು ಸಚಿವ ಶರಣಪ್ರಕಾಶ್ ಪಾಟೀಲ್​ಗೆ ಖರ್ಗೆ ಪಾಠ ಮಾಡಿದರು. ಕೆಲಸ ಮಾಡಲಿಲ್ಲ ಅಂದ್ರೆ ಮನೆಗೆ ಕಳಿಸಲಾಗುತ್ತದೆ. ಮನೆಗೆ ಹೋಗಬೇಕಾಗುತ್ತೆ ನೋಡು ಎಂದು ಎಚ್ಚರಿಕೆ ನೀಡಿದರು. ಕೆಕೆಆರ್​ಡಿ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು. ನೀವು ಇದರ ಬಗ್ಗೆ ಗಮನ ಕೊಡಬೇಕು. ಕೆಲಸ‌ ಮಾಡದಿದ್ರೆ ಸಚಿವಗಿರಿಗೆ ಕುತ್ತು ಎಂದು ಎಚ್ಚರಿಸಿದರು.

ಕೆಕೆಆರ್ ಡಿ ಅನುದಾನದಲ್ಲಿ ಹಣ ಇರುತ್ತದೆ. ನೀವು ಇದರ ಬಗ್ಗೆ ಗಮನ ಕೊಡಬೇಕು. ಇಲ್ಲಾಂದ್ರೆ ನಾವು ಒತ್ತಾಯ ಮಾಡಬೇಕಾಗುತ್ತದೆ. ಹೇ ಮಾಡಪ್ಪ ನೀ ಮಾಡು ಅಂತ ಹೇಳಬೇಕಾಗುತ್ತೆ. ಕೆಲಸ ಮಾಡಲಿಲ್ಲ ಅಂದ್ರೆ ಮನೆಗೆ ಹೋಗ್ತಿಯಾ ನೋಡು ಎನ್ನಬೇಕಾಗುತ್ತೆ. ಕೆಲಸ‌ ಮಾಡದಿದ್ರೆ ಸಚಿವಗಿರಿಗೆ ಕುತ್ತು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಖರ್ಗೆ ಪರೋಕ್ಷವಾಗಿ ಸುಳಿವು ಕೊಟ್ಟರು.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಿದ್ದ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಪ್ರಭು ಚನ್ನಬಸವಶ್ರೀ ಕಿಡಿ

ಪಕ್ಷಕ್ಕೆ ಯಾರನ್ನೇ ಕರೆತರುವಾಗ ಯೋಚಿಸಿ

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷಕ್ಕೆ ಯಾರನ್ನೇ ಕರೆತರುವಾಗ ಅವರ ಪೂರ್ವಾಪರ ವಿಚಾರಿಸಿ ಅವರು ನಮ್ಮ ಪಕ್ಷಕ್ಕೆ ಯೋಗ್ಯರೇ ಎಂಬುದನ್ನು ಯೋಚಿಸಿ ಕರೆತರಬೇಕು ಎಂದು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ತಿಳಿ ಹೇಳಿದರು. ಹೀಗೆ ಬಂದ್ರು ಹಾಗೆ ಹೋದ್ರು ಅಂತಾಗಬಾರದು. ಯಾರನ್ನೇ ಪಕ್ಷಕ್ಕೆ ಕರೆತರುವಾಗ ಯೋಚಿಸಿ, ಯೋಗ್ಯವಾದವರನ್ನು ಕರೆತರಬೇಕು ಎಂದಿದ್ದರು.

ಮಾರುಕಟ್ಟೆಯಲ್ಲಿ ಯಾವೊಂದು ಸಣ್ಣ ವಸ್ತು ಖರೀದಿಸುವಾಗಲೂ ಅದರ ಗುಣಮಟ್ಟ ಎಂತಹದ್ದು ಎನ್ನುವುದು ಸೇರಿದಂತೆ ಅಳೆದು-ತೂಗಿ ಖರೀದಿಸುತ್ತೇವೆ. ಅದೇ ರೀತಿ, ಪಕ್ಷಕ್ಕೆ ಯಾರನ್ನಾದರೂ ಕರೆತರುವಾಗ, ಅವರ ಹಿನ್ನೆಲೆ, ನಂಬಿರುವ ಸಿದ್ಧಾಂತಗಳನ್ನು ನೋಡಿಕೊಂಡು ಕರೆತರಬೇಕು. ಸುಮ್ನೆ ಹಾಗೆ ಬಂದ್ರು, ಹೀಗೆ ಹೋದ್ರು ಅಂತ ಆಗಬಾರದು ಎಂದು ಜಗದೀಶ ಶೆಟ್ಟರ್ ಹೆಸರು ಪ್ರಸ್ತಾಪಿಸದೆ ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಎಚ್ಚರಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ