ಕಲಬುರಗಿ: 542 ಪಿಎಸ್ಐ (PSI Recruitment) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರುದ್ರಗೌಡ ಪಾಟೀಲ್ ಸೋದರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಬಂಧನ ಮಾಡಿದ್ದು, ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಹೆಸರು ಕೇಳಿ ಬಂದಿತ್ತು. ರುದ್ರಗೌಡ ಪಾಟೀಲ್ನನ್ನು ವಿಚಾರಣೆಗೆ ಮುಂದಾಗಿದ್ದ ಸಿಐಡಿ, ಪೊಲೀಸರ ಕೈಗೆ ರುದ್ರಗೌಡ ಸಿಗದಿದ್ದಕ್ಕೆ ಸೋದರನ ಬಂಧನ ಮಾಡಲಾಗಿದೆ. ಕೊರಳಪಟ್ಟಿ ಹಿಡಿದು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಸಿಐಡಿ ಪೊಲೀಸರ ವಿರುದ್ಧವೇ ಆಕ್ರೋಶ ಹೊರಹಾಕಿರೋ ಮಹಂತೇಶ್ ಪಾಟೀಲ್, ನಿಮ್ಮನ್ನು ನೋಡಿಕೊಳ್ಳೋದಾಗಿ ಅವಾಜ್ ಹಾಕಿದ್ದಾನೆ. 61 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹಕ್ಕೆ ನಾಳೆ ಅಫಜಲಪುರದಲ್ಲಿ ಸಹೋದರರಿಂದ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವಿವಾಹ ಕಾರ್ಯಕ್ರಮಕ್ಕೂ ಮುನ್ನ ಸಹೋದರರಿಗೆ ಶಾಕ್ ನೀಡಲಾಗಿದೆ. ಸಿದ್ಧತೆ ಪರಿಶೀಲಿಸುವಾಗಲೇ ಮಹಾಂತೇಶ್ ಪಾಟೀಲ್ನ್ನು ಸಿಐಡಿ ಪೊಲೀಸರು ಸೆರೆಯಾಗಿದ್ದಾರೆ.
ಈ ಕುರಿತಾಗಿ ಡಿ.ಕೆ. ಶಿವಕುಮಾರ ಪ್ರತಿಕ್ರಿಯೆ ನೀಡಿದ್ದು, ಯಾರೇ ಇರಬಹುದು ಅವರ ವಿತುದ್ಧ ಕ್ರಮಕೈಗೊಳ್ಳಿ. ಹಗರಣವನ್ನ ಬಯಲಿಗೆಳೆದಿದ್ದೆ ಕಾಂಗ್ರೆಸ್. ಪ್ರಿಯಾಂಕ ಖರ್ಗೆ ಅವರು ಮೊದಲು ಹಗರಣ ಕುರಿತು ಮಾತಾಡಿದ್ರು. 52 ಸಾವಿರ ಜನ ಪಿಎಸ್ಐ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಅನ್ಯಾಯವಾಗಲಿದೆ. ಪಿಎಸ್ಐ ಪೊಸ್ಟ್ಗೆ 50 ರಿಂದ 60 ಲಕ್ಷ ಲಂಚ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಲ್ಲಿ ನೋಡಿದ್ರು ಲಂಚ ಲಂಚ ಎಂದು ಹೇಳಿದರು.
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಬಗೆದಷ್ಟು ಪಿಎಸ್ಐ ಪರೀಕ್ಷಾ ಅಕ್ರಮಗಳು ಹೊರಬರುತ್ತಿವೆ. ಸಿಐಡಿ ತನಿಖೆ ವೇಳೆ ಮತ್ತೊಂದು ರೀತಿಯ ಪರೀಕ್ಷಾ ಅಕ್ರಮ ಪತ್ತೆಯಾಗಿದೆ. ಮುನ್ನಾಭಾಯಿ MBBS ಸ್ಟೈಲ್ನಲ್ಲಿ ಹಲವರು ಪರೀಕ್ಷೆ ಬರೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೆಲ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದಾರೆ.
ಏಪ್ರಿಲ್ 21ರಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಗನ್ಮ್ಯಾನ್ ಹಯ್ಯಾಳಿ ದೇಸಾಯಿಯನ್ನು CID ಬಂಧಿಸಿತ್ತು. ಹಯ್ಯಾಳಿ ದೇಸಾಯಿ ಕೂಡ ಮುನ್ನಾಭಾಯಿ MBBS ಸ್ಟೈಲ್ನಲ್ಲಿ ಹೊರಗಿನವರ ನೆರವು ಪಡೆದು ಪರೀಕ್ಷೆ ಬರೆದಿದ್ದರು. ಅಕ್ರಮದಲ್ಲಿ ಕಲಬುರಗಿಯ ಮತ್ತೋರ್ವ ಪ್ರಭಾವಿ ಮುಖಂಡ ಭಾಗಿಯಾಗಿರುವುದು ಪತ್ತೆಯಾಗಿದೆ. ಹಯ್ಯಾಳಿ ದೇಸಾಯಿ ಮಾಹಿತಿ ಮೇರೆಗೆ ಕಿಂಗ್ಪಿನ್ಗಾಗಿ ಹುಡುಕಾಟ ನಡೆಯುತ್ತಿದೆ. ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಶೋಧ ಆರಂಭಿಸಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮವೆಸಗಿರುವ ಕಿಂಗ್ಪಿನ್, ವಾಮಮಾರ್ಗದಲ್ಲಿ ಹಲವರಿಗೆ ಉದ್ಯೋಗ ಕೊಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸ್ಪರ್ಧಿಸಲು ಈ ಕಿಂಗ್ಪಿನ್ ಸಿದ್ಧತೆ ನಡೆಸಿದ್ದಾರೆ. ಸದ್ಯ ಕಿಂಗ್ಪಿನ್ ಬಂಧಿಸಲು ಸಿಐಡಿ ತಂಡ ಮಾಹಿತಿ ಸಂಗ್ರಹಿಸುತ್ತಿದೆ.
ಇದನ್ನೂ ಓದಿ:
ರಾಜಸ್ಥಾನದಲ್ಲಿ 300 ವರ್ಷ ಹಳೆಯ ಶಿವನ ದೇವಸ್ಥಾನ ನೆಲಸಮ; ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
IPL 2022: ಕೊನೆಯ ಎಸೆತದಲ್ಲಿ ಗೆಲುವು! ಧೋನಿಯಿಂದಾಗಿ ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಸಿಎಸ್ಕೆ
Published On - 3:39 pm, Fri, 22 April 22