ಜೂನ್ 1 ರಂದು ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನ ರದ್ದತಿಗೆ ಆಗ್ರಹಿಸಿ ಹೋರಾಟ; ಕೆರಳಿದ ಜನ
Kalyana Karnataka: ಹೈದರಾಬಾದ್ ಕರ್ನಾಟಕ ಪ್ರದೇಶ, ಅರ್ಥಾತ್ ಇಂದಿನ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ 371(ಜೆ) ವಿಶೇಷ ಸ್ಥಾನಮಾನ ನೀಡಲು ಆಗ್ರಹಿಸಿ ಈ ಭಾಗದ ಜನ ಸಾಕಷ್ಟು ಹೋರಾಟ ನಡೆಸಿದ್ದರು. ಹೋರಾಟದ ಫಲವಾಗಿ 371(ಜೆ) ವಿಶೇಷ ಸ್ಥಾನಮಾನ ಕೂಡ ಸಿಕ್ಕು ದಶಕಗಳೇ ಕಳೆದಿವೆ. ಆದರೆ, 317(ಜೆ) ವಿಶೇಷ ಸ್ಥಾನಮಾನ ರದ್ದುಪಡಿಸುವಂತೆ ಬೆಂಗಳೂರಿನ ಕೆಲ ಸಂಘಟನೆಗಳು ಹೋರಾಟ ಹಮ್ಮಿಕೊಂಡಿರುವುದಕ್ಕೆ ಕಲ್ಯಾಣ ಕರ್ನಾಟಕ ಭಾಗದ ಜನರನ್ನ ಕೆರಳಿಸುವಂತೆ ಮಾಡಿದೆ.
ಕಲಬುರಗಿ, ಮೇ.31: ಕಲ್ಯಾಣ ಕರ್ನಾಟಕವು(Kalyana Karnataka) ಆರ್ಥಿಕ, ಶೈಕ್ಷಣಿಕವಾಗಿ, ಉದ್ಯೋಗ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದೆ. ಆದ್ದರಿಂದ ಈ ಭಾಗಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ 371(ಜೆ) ಕಲಂ ಜಾರಿ ಮಾಡಲು ದಶಕಗಳ ಕಾಲ ಹೋರಾಟ ನಡೆಸಲಾಗಿತ್ತು. ಹೋರಾಟದ ಫಲವಾಗಿ ಅಂದಿನ ಯುಪಿಎ(ಕಾಂಗ್ರೆಸ್) ಸರ್ಕಾರ ಈ ಭಾಗಕ್ಕೆ 371(ಜೆ) ಕಲಂ ವಿಶೇಷ ಸ್ಥಾನಮಾನ ನೀಡಿದ ಫಲವಾಗಿ, ಈ ಭಾಗದಲ್ಲಿ ಸಾಕಷ್ಟು ಜನ ಶೈಕ್ಷಣಿಕ ಕ್ಷೇತ್ರದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ಆದರೆ, ಈ ಭಾಗದ ಜನ ರಾಜ್ಯದ ಬಹುಪಾಲು ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಪಡೆಯಿತ್ತಿರುವುದು ಬೆಂಗಳೂರಿ ಕೆಲ ಸಂಘಟನೆಗಳ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಈ ಹಿನ್ನಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದುಪಡಿಸುವಂತೆ ಆಗ್ರಹಿಸಿ ನಾಳೆ(ಜೂ.01) ಹಸಿರು ಪ್ರತಿಷ್ಠಾನ ಸಂಘಟನೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಹಸಿರು ಪ್ರತಿಷ್ಠಾನ ಪ್ರತಿಭಟನೆಗೆ ಕೆರಳಿದ ಕಲ್ಯಾಣ ಕರ್ನಾಟಕ ಭಾಗದ ಜನ
ಇನ್ನು 371(ಜೆ) ರದ್ದುಪಡಿಸುವಂತೆ ನಡೆಸುವ ಪ್ರತಿಭಟನೆಗೆ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಈ ಭಾಗಕ್ಕೆ ಅನ್ಯಾಯವಾದಾಗ ತಿರುಗಿನೋಡದ ದಕ್ಷಿಣ ಕರ್ನಾಟಕ ಭಾಗದ ಜನ, ಇಂದು 371(ಜೆ) ರದ್ದತಿಗೆ ಒತ್ತಾಯಿಸುತ್ತಿರುವುದು ಸರಿಯಲ್ಲವೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಸಂವಿಧಾನದ 371 ಜೆ ವಿಧಿಯಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ
ಜೂನ್ 1 ರಂದೇ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಇದಕ್ಕೆ ವಿರೋಧಿಸಿ ಹೋರಾಟ
ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ 371(ಜೆ) ವಿಶೇಷ ಸ್ಥಾನಮಾನ ರದ್ದತಿಗೆ ಆಗ್ರಹಿಸಿ ಜೂನ್ 1 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ವಿರುದ್ಧ ಕಲಬುರಗಿ ನಗರದಲ್ಲೆ ಜೂನ್ 1 ರಂದೇ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಹಲವು ಸಂಘ-ಸಂಸ್ಥೆಗಳು ಹೋರಾಟ ಹಮ್ಮಿಕೊಂಡಿವೆ. ಸಂವಿಧಾನದ ಪ್ರಕಾರ ಹೋರಾಟ ಮಾಡಿ ಸಂವಿಧಾನದ ಪ್ರಕಾರವೇ 37(ಜೆ) ವಿಶೇಷ ಸ್ಥಾನಮಾನ ಪಡೆಯಲಾಗಿದೆ. ಆದರೆ, ಈ ಭಾಗದ ಜನ ಶೈಕ್ಷಣಿಕ ಕ್ಷೇತ್ರದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ಪಡೆದುಕೊಳ್ಳುತ್ತಿರುವ ಮೀಸಲಾತಿ ಸಹಿಸಿಕೊಳ್ಳೊಕೆ ಆಗದೇ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಹೋರಾಟಕ್ಕೆ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಸಿರು ಪ್ರತಿಷ್ಠಾನ ಸಂಘಟನೆ ಹಮ್ಮಿಕೊಂಡಿರುವ ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಸರ್ಕಾರ ಮತ್ತು ರಾಜ್ಯಪಾಲರು ಕವಡೆಕಾಸಿನ ಕಿಮ್ಮತ್ತು ಕೊಡಬಾರದು. ಈ ಭಾಗದ ಎಲ್ಲಾ ಶಾಸಕರು, ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ 371(ಜೆ) ವಿಶೇಷ ಸ್ಥಾನಮಾನಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕೆಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಎಮ್‌ಎಲ್‌ಸಿ ಶಶೀಲ್ ನಮೋಶಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ