ಕಲಬುರಗಿ, ಆ.13: ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಬಾಲಕರು ನದಿ ಪಾಲಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ(Afzalpur) ತಾಲ್ಲೂಕಿನ ಗಾಣಗಾಪುರದಲ್ಲಿ ನಡೆದಿದೆ. ಗಾಣಗಾಪುರದ ಸಂಗಮದ ಅಷ್ಟ ತೀರ್ಥದಲ್ಲಿ ಸ್ನಾನ ಮಾಡುವಾಗ ಈ ದುರ್ಘಟನೆ ನಡೆದಿದ್ದು, ಪ್ರಕಾಶ್ (15) ಮತ್ತು ಸೋನು (16) ಎಂಬ ಬಾಲಕರು ಕೊನೆಯುಸಿರೆಳೆದಿದ್ದಾರೆ. ಸೋನು ಎನ್ನುವ ಬಾಲಕ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಪ್ರಕಾಶ್ ಆತನನ್ನ ಕಾಪಾಡಲು ಮುಂದಾಗಿದ್ದ. ಈ ವೇಳೆ ಇವನು ನದಿಯಲ್ಲಿ ಬಿದ್ದು ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಎಸ್ಡಿಆರ್ಎಫ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಉತ್ತನಹಳ್ಳಿಯಲ್ಲಿ ನಡೆದಿದ್ದು, ಮೃತ ಮಹಿಳೆ ವಿಜಯನಗರ ಜಿಲ್ಲೆಯ ಕೂಡ್ಲಿಗೆ ಮೂಲದ ದುರ್ಗಮ್ಮ ಎಂದು ಗುರುತಿಸಲಾಗಿದೆ. ಇನ್ನು ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯನ್ನ ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಎರಡು ವರ್ಷಗಳಿಂದೆ ಪ್ರೀತಿಸಿ, ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು. ನಂತರ ಎರಡು ಕುಟುಂಬಗಳು ಇದನ್ನು ಒಪ್ಪಿಕೊಂಡು ಒಂದಾಗಿದ್ದರು. ಮದುವೆ ನಂತರ ಕೂಡ್ಲಗಿಯಿಂದ ಬೆಂಗಳೂರಿಗೆ ಬಂದಿದ್ದ ದಂಪತಿ, ಚಿಕ್ಕಜಾಲದ ಉತ್ತನಹಳ್ಳಿ ಬಳಿ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದರು.
ಇದನ್ನೂ ಓದಿ:ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಜನರು ನೀರುಪಾಲು, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜಲಸಮಾಧಿ
ಆದ್ರೆ, ಪದೇ ಪದೇ ಪತ್ನಿ ಮೇಲೆ ಅನುಮಾನದಿಂದ ಹೊಡೆದು ಕಿರುಕುಳ ನೀಡುತ್ತಿದ್ದನಂತೆ. ಕಳೆದ ಒಂದು ತಿಂಗಳ ಹಿಂದೆಯೂ ಗಲಾಟೆ ಮಾಡಿಕೊಂಡು ಮೃತ ಮಹಿಳೆ ದುರ್ಗಮ್ಮ ಊರಿಗೆ ಹೋಗಿದ್ದಳು. ಬಳಿಕ 15 ದಿನಗಳ ಹಿಂದೆ ಪತ್ನಿಯ ಮನವೊಲಿಸಿ ಗಂಡ ಮಾರುತಿ ಬೆಂಗಳೂರಿಗೆ ಕರೆತಂದಿದ್ದ. ಆದರೆ ಬಂದ 15 ದಿನದಲ್ಲೆ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದು ಗಂಡನಿಂದಲೆ ಕೊಲೆ ಆರೋಪ ಕೇಳಿಬಂದಿದೆ. ಅಮ್ಮನನ್ನ ಕಳೆದುಕೊಂಡು 6 ತಿಂಗಳ ಮಗುವಿನ ಆಕ್ರಂಧನ ಮುಗಿಲುಮುಟ್ಟಿದೆ. ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲ ಇಲ್ಲಿ ಕ್ಲಿಕ್ ಮಾಡಿ