AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನೌಷಧಿ ಕೇಂದ್ರಕ್ಕೆ ಅನುಮತಿ ಕೊಡದಿರಲು ಸಚಿವ ಶರಣಪ್ರಕಾಶ್ ಪಾಟೀಲ್ ಕೊಟ್ಟ ಕಾರಣವಿದು!

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ಮೆಡಿಕಲ್‌ ಶಾಪ್ ಇರಬಾರದು. ಮೆಡಿಕಲ್ ಶಾಪ್ ಇದ್ರೆ ಬಡವರಿಗೆ ತೊಂದ್ರೆ ಆಗುತ್ತೆ. ಅನಾವಶ್ಯಕ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗುತ್ತೆ. ನಾವೇ ಉಚಿತವಾಗಿ ಔಷಧಿ ಕೊಡುತ್ತೇವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಕೊಡಬೇಕು ಎಂದು ಸಚಿವ ಶರಣಪ್ರಕಾಶ್​​ ಪಾಟೀಲ್ ಅವರು ತಿಳಿಸಿದ್ದಾರೆ.

ಜನೌಷಧಿ ಕೇಂದ್ರಕ್ಕೆ ಅನುಮತಿ ಕೊಡದಿರಲು ಸಚಿವ ಶರಣಪ್ರಕಾಶ್ ಪಾಟೀಲ್ ಕೊಟ್ಟ ಕಾರಣವಿದು!
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Aug 14, 2024 | 12:23 PM

Share

ಕಲಬುರಗಿ, ಆಗಸ್ಟ್​.14: ಬಡಜನರಿಗೆ ಅನುಕೂಲ ಆಗಲಿ ಅಂತ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಕಲಬುರಗಿಯಲ್ಲಿ ಟಿವಿ9ಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ (Sharan Prakash Patil) ತಿಳಿಸಿದ್ದಾರೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಕೊಡಬೇಕು. ಸ್ಟಾಕ್ ಇಲ್ಲದಿದ್ದರೂ ತರಿಸಿಕೊಡಬೇಕು. ಹೀಗಾಗಿ ನಾವು ಜನೌಷಧಿ ಕೇಂದ್ರ ಬೇಡ ಎಂದು ಹೇಳುತ್ತಿದ್ದೇವೆ. ಹಳೇ ಪಿಎಂ ಜನೌಷಧಿ ಕೇಂದ್ರಗಳನ್ನು (PM Jan Aushadhi Centre) ರಿನಿವಲ್ ಮಾಡುವುದಿಲ್ಲ. ಬಿಜೆಪಿಯವರು (BJP) ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಬೇಕು. ಸುಮ್ಮನೇ ಎಲ್ಲದಕ್ಕೂ ಆರೋಪ ಮಾಡಿದ್ರೆ ಹೇಗೆ ಎಂದು ಕಿಡಿಕಾರಿದರು.

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ಮೆಡಿಕಲ್‌ ಶಾಪ್ ಇರಬಾರದು. ಮೆಡಿಕಲ್ ಶಾಪ್ ಇದ್ರೆ ಬಡವರಿಗೆ ತೊಂದ್ರೆ ಆಗುತ್ತೆ. ಅನಾವಶ್ಯಕ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗುತ್ತೆ. ನಾವೇ ಉಚಿತವಾಗಿ ಔಷಧಿ ಕೊಡುತ್ತೇವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಕೊಡಬೇಕು. ಸ್ಟಾಕ್ ಇಲ್ಲ ಅಂದ್ರೂ ತರಿಸಿಕೊಡಬೇಕು. ಹೀಗಾಗಿ ನಾವು ಜನ ಔಷಧಿ ಕೇಂದ್ರ ಬೇಡ ಎನ್ನುತ್ತಿದ್ದೇವೆ. ಸಧ್ಯ ಇರೋ ಮೆಡಿಕಲ್ ಶಾಪ್​ಗಳ ಅವಧಿ ಮುಗಿದ ಮೇಲೆ ರಿನಿವಲ್‌ ಮಾಡೋದಿಲ್ಲ. ಹಳೇ ಪಿಎಂ ಜನ ಔಷಧಿ ಕೇಂದ್ರಗಳನ್ನ ರಿನಿವಲ್ ಮಾಡೋದಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಬೇಕು. ನೆಲದ ಮೇಲೆ ಬಂದು ಬಡವರ ಕಷ್ಟ ನೋಡಿ. ಸುಮ್ಮನೇ ಎಲ್ಲದಕ್ಕೂ ಆರೋಪ ಮಾಡಿದ್ರೆ ಹೇಗೆ? ಎಂದು ಕಲಬುರಗಿಯಲ್ಲಿ ಸಚಿವ ಶರಣಪ್ರಕಾಶ್​​ ಪಾಟೀಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ತಲೆ ಎತ್ತಿದೆಯಾ ಮೆಡಿಕಲ್ ಮಾಫಿಯಾ? ಲೋಕಾಯುಕ್ತ ದಾಳಿ ವೇಳೆ ಬಯಲಾಯಿತು ಕರ್ಮಕಾಂಡ

ನಮ್ಮ ಪಂಚ ಗ್ಯಾರಂಟಿಗಳಲ್ಲಿ ಯಾವುದೇ ಪರಿಷ್ಕರಣೆ ಇಲ್ಲ

ಇನ್ನು ಮತ್ತೊಂದೆಡೆ ಕಲಬುರಗಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಗ್ಯಾರಂಟಿಗಳನ್ನು ಬದಲಾವಣೆ ಮಾಡುವ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಿದ್ದಾರೆ. ನಕಲಿ BPL ಕಾರ್ಡ್ ರದ್ದತಿ ಮಾಡುವ ಬಗ್ಗೆ ಕ್ರಮ ಕೈಗೊಳ್ತೇವೆ ಎಂದರು.

ಇನ್ನು ಇದೇ ವೇಳೆ ಗೌರಿ ಲಂಕೇಶ ಹತ್ಯೆ ಆರೋಪಿಯನ್ನ ಪ್ರತಾಪ್ ಸಿಂಹ ಭೇಟಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಒಬ್ಬ ಜನಪ್ರತಿನಿಧಿಯಾದವರು ಆರೋಪಿ ಜೊತೆ ಫೋಟೋ ತೆಗೆಸಿಕೊಳ್ತಾರೆ. ಅಷ್ಟೇ ಏಕೆ ಅವರೇ ತಮ್ಮ ಸಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡ್ತಾರೆಂದ್ರೆ ಅವರ ಮನಸ್ಥಿತಿ ಹೇಗಿರಬೇಕು ಎಂದು ಪ್ರತಾಪ್ ಸಿಂಹ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಫೋಟೋ ವೈರಲಾಗುವುದು ಬೇರೆ, ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಹೆಮ್ಮೆಪಡುವುದು ಬೇರೆ. ಕಾರಣಗಳು ಏನೇ ಇರಬಹುದು. ಒಬ್ಬ ಚುನಾಯಿತ ಜನಪ್ರತಿನಿಧಿ ಆದವರು, ಸಂಸ್ಕೃತಿಕ ನಗರದ ರಾಯಭಾರಿ ಎಂದುಕೊಂಡು ಓಡಾಡುವವರು ಇವತ್ತು ಆರೋಪಿ ಜೊತೆ ಓಡಾಡ್ತಾರೆ? ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಹಿಂದೆ ಇಂತಹ ಸಂಸ್ಥೆ, ಸಂಘಟನೆ ಮತ್ತು ಇಂತಹ ಆಲೋಚನೆಗಳು ಇವೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು. ಈ ರೀತಿ ಹೆಮ್ಮೆ ಪಟ್ಟುಕೊಳ್ಳಲು ಅವರಿಗೆ ನಾಚಿಕೆ ಬರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:13 pm, Wed, 14 August 24

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್