AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ತಲೆ ಎತ್ತಿದೆಯಾ ಮೆಡಿಕಲ್ ಮಾಫಿಯಾ? ಲೋಕಾಯುಕ್ತ ದಾಳಿ ವೇಳೆ ಬಯಲಾಯಿತು ಕರ್ಮಕಾಂಡ

ಲೋಕಾಯುಕ್ತ ಅಧಿಕಾರಿಗಳು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಔಷಧ ಉಗ್ರಾಣದ ಮೇಲೆ ನಡೆಸಿದ ದಾಳಿಯಿಂದ ಅಕ್ರಮವೊಂದು ಬಯಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಔಷಧಗಳು ದಾಳಿ ವೇಳೆ ಪತ್ತೆಯಾಗಿದ್ದು, ಮಂಡ್ಯದಲ್ಲಿ ಮತ್ತೆ ಮೆಡಿಕಲ್ ಮಾಫಿಯಾ ತಲೆ ಎತ್ತಿದೆಯಾ ಎಂಬ ಬಲವಾದ ಅನುಮಾನ ಹುಟ್ಟುಹಾಕಿದೆ.

ಮಂಡ್ಯದಲ್ಲಿ ತಲೆ ಎತ್ತಿದೆಯಾ ಮೆಡಿಕಲ್ ಮಾಫಿಯಾ? ಲೋಕಾಯುಕ್ತ ದಾಳಿ ವೇಳೆ ಬಯಲಾಯಿತು ಕರ್ಮಕಾಂಡ
ಮಂಡ್ಯದ ಮಿಮ್ಸ್ ಆಸ್ಪತ್ರೆ
ಪ್ರಶಾಂತ್​ ಬಿ.
| Edited By: |

Updated on: Aug 14, 2024 | 11:52 AM

Share

ಮಂಡ್ಯ, ಆಗಸ್ಟ್ 14: ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ ತಲೆ ಎತ್ತಿದೆಯಾ ಎಂಬ ಅನುಮಾನ ಈಗ ಬಲವಾಗಿದೆ. ಮೆಡಿಕಲ್ ಮಾಫಿಯಾದ ಹಿಂದೆ ಸರ್ಕಾರಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಮುಖ್ಯ ಕಾರಣ, ಮಂಡ್ಯದ ಮಿಮ್ಸ್ ಆಸ್ಪತ್ರೆಯ ಔಷಧಿ ಮುಖ್ಯ ಉಗ್ರಾಣದ ಮೇಲೆ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಕಂಡುಬಂದಿರುವ ಅಂಶಗಳು. ಲೋಕಾಯುಕ್ತ ದಾಳಿ ವೇಳೆ ಅವಧಿ ಮುಗಿದ ಲಕ್ಷಾಂತರ ರೂ. ಮೌಲ್ಯದ ಔಷಧಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಡ್ಯ ಎಸ್​​ಪಿ ಸುರೇಶ್ ಬಾಬು ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರಾಣದಲ್ಲಿ ಎಕ್ಸ್​​ಪೈರಿ ಆಗಿರವ ಡ್ರಗ್ಸ್ ಶೇಖರಣೆ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಲೋಕಯುಕ್ತ ನ್ಯಾಯಧೀಶರಿಗೆ ಕೇಶವಮೂರ್ತಿ ಎಂಬುವವರು ಕಳೆದ ತಿಂಗಳು ದೂರು ನೀಡಿದ್ದರು. ಈ ಹಿನ್ನೆಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ 40 ಲಕ್ಷ ರೂ. ಮೌಲದ್ಯ ರೆಮ್ಡಿಸಿವರ್ ಡ್ರಗ್ ಪತ್ತೆಯಾಗಿದೆ. ಇಷ್ಟೇ ಅಲ್ಲದೆ, ಲಕ್ಷಾಂತರ ರೂ. ಮೌಲ್ಯದ ಖಾಸಗಿ ಕಂಪನಿಗಳ ಔಷಧಿಗಳು ಕೂಡ ಪತ್ತೆಯಾಗಿವೆ. ಅವಧಿ ಮೀರಿದ ಔಷಧಗಳನ್ನು ಖಾಸಗಿ ಕಂಪನಿಗೆ ವಾಪಾಸ್ ಕಳುಹಿಸದೇ ನಿರ್ಲಕ್ಷ್ಯ ವಹಿಸುವುರುದು ಕಂಡುಬಂದಿದೆ.

ನಿಯಮಗಳಲ್ಲೇನಿದೆ?

ನಿಯಮಗಳ ಪ್ರಕಾರ, ಯಾವುದೇ ಔಷಧವನ್ನು ಅವಧಿ ಮುಗಿಯುವ ಮೂರು ತಿಂಗಳ ಒಳಗೆ ಕಂಪನಿಗೆ ವಾಪಾಸ್ ಕಳುಹಿಸಿ ಬದಲಿ ಔಷಧ ಪಡೆಯಬೇಕು. ನಿಯಮ ಹೀಗಿದ್ದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

ಇದನ್ನೂ ಓದಿ: ಮಂಡ್ಯ: ರೈತರಿಗೆ ಒಂದು ಮಾತು ಕೊಟ್ಟ ಹೆಚ್​ಡಿ ಕುಮಾರಸ್ವಾಮಿ; ಏನದು?

ಮಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಅಧಿಕಾರಿಗಳು ಕೂಡ ಮೆಡಿಕಲ್ ಮಾಫಿಯಾದ ಪ್ರಭಾವಕ್ಕೆ ಒಳಗಾದರೇ ಎಂಬ ಶಂಕೆ ವ್ಯಕ್ತವಾಗಿದೆ.

ಇದೇ ಮೊದಲಲ್ಲ

ಈ ಹಿಂದೆ 2016-17 ರಲ್ಲೂ ಕೂಡ ಮಿಮ್ಸ್​​​ನಲ್ಲಿ 5 ಲಕ್ಷ ರೂ. ಮೌಲ್ಯದ ಡ್ರಗ್ಸ್ ಶೇಖರಣೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕೂಡ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ಮತ್ತೊಮ್ಮ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಔಷಧಗಳು ಪತ್ತೆಯಾಗಿವೆ. ಈ ಬಗ್ಗೆ ಇದೀಗ ಲೋಕಾಯುಕ್ತ ಅಧಿಕಾರಿಗಳು ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ