ಕಲಬುರಗಿ: ಬೇರೆ ಬೇರೆ ಜಾತಿಯ ಯುವಕ ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಇದು ಯುವತಿ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿತ್ತು. ಮದುವೆಯಾಗಿ ವರ್ಷದ ನಂತರ ಪ್ರೀತಿಸಿ ಮದುವೆಯಾದ ದಂಪತಿಗೆ ಗಂಡು ಮಗಿ ಹುಟ್ಟಿತ್ತು. ನಾಮಕರಣಕ್ಕೆ ತಮ್ಮೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಯುವತಿ ಮನೆಯವರು ಮಾರಕಾಸ್ತ್ರದಿಂದ ಯುವಕನ ಕುಟುಂಬದ ಮೇಲೆ ಅಟ್ಯಾಕ್ ಮಾಡಿದ್ದಾರೆ. ಯುವಕನ ತಂದೆ, ಸಹೋದರ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದ ಕುಟುಂಬವೊಂದು ಮುಂದೇನು ಮಾಡಬೇಕು ಅನ್ನೋದು ಗೊತ್ತಾಗದೇ ಅಕ್ಷರಶ ನಲುಗಿ ಹೋಗಿದೆ. ಹುಟ್ಟಿ ಬೆೆಳೆದ ತಮ್ಮೂರಿಗೆ ಹೋಗಲಿಕ್ಕೆನೆ ಭಯಪಟ್ಟು, ಆಸ್ಪತ್ರೆಯಲ್ಲಿಯೇ ಕುಟುಂಬದವರು ಕಾಲ ಕಳೆಯುವಂತಾಗಿದೆ. ಏಕೆಂದರೆ ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಈ ಊರಿಗೆ ಬರುತ್ತಿದ್ದಂತೆ ಯುವತಿ ಮನೆಯವರು ಯುವಕನ ಮನೆಯವರ ಮೇಳೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಯುವಕನ ತಂದೆ ಹಾಗೂ ಸಹೋದರ ಆಸ್ಪತ್ರೆಯ ಬೆಡ್ ಮೇಲೆ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದಡೆ ಉಕ್ಕಿ ಬರುವ ಕಣ್ಣೀರನ್ನು ತಡೆಯಲಿಕ್ಕಾಗಾದೆ, ಕೈ ಮುಗಿದು ದಯವಿಟ್ಟು ನಮ್ಮನ್ನು ಬಾಳಲು ಬಿಡಿ ಅಂತ ಯುವಕನ ವೃದ್ದೆ ತಾಯಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದಡೆ ಇಪ್ಪತ್ತೈದು ದಿನದ ಮಗುವಿನ ಜೊತೆೆ ಆಸ್ಪತ್ರೆಗೆ ಅಲಿಯಬೇಕಾದ ಸ್ಥಿತಿಯಲ್ಲಿ ಯುವತಿ ಇದ್ದಾಳೆ. ಮಗಳ ಬಾಳನ್ನೂ ಲೆಕ್ಕಿಸದೆ ಯುವತಿ ಪೋಷಕರು ಯುವಕನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಇದನ್ನೂ ಓದಿ: ಊಟ ಸರಿಯಿಲ್ಲ ಎಂದಿದಕ್ಕೆ ಹೋಟೆಲ್‌ನಲ್ಲಿ ಗ್ರಾಹಕನ ಮೇಲೆ ಹಲ್ಲೆ ನಡೆಸಿದ ಹೋಟೆಲ್ ಮಂದಿ
ಗ್ರಾಮದ ಮಾಲಗತ್ತಿ ಕುಟುಂಬದ ನಾಲ್ವರ ದೌರ್ಜನ್ಯದಿಂದ ಕುಟುಂಬ ನಲುಗಿ ಹೋಗಿದೆಯಂತೆ. ಜೂನ್ 2 ರಂದು ಸಂಜೆ, ತಮ್ಮ ಮನೆಯಲ್ಲಿ ಇದ್ದಾಗ, ಅದೇ ಗ್ರಾಮದ ದ್ಯಾವಪ್ಪ ಮಾಲಗತ್ತಿ, ಮತ್ತು ಆತನ ಮಕ್ಕಳು ಇದ್ದಕ್ಕಿಂದ್ದಂತೆ ಮನೆಗೆ ನುಗ್ಗಿ, ಕೊಡಲಿ ಸೇರಿದಂತೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ ಅಂತ ದಶರಥ ಕುಟುಂಬವರು ಆರೋಪಿಸುತ್ತಿದ್ದಾರೆ. ಘಟನೆಯಲ್ಲಿ ದಶರಥ ಪೂಜಾರಿ ಮತ್ತು ಆತನ ಪುತ್ರ ತಿಪ್ಪಣ್ಣ ಅನ್ನೋರಿಗೆ ಗಂಭೀರವಾದ ಗಾಯಗಳಾಗಿದ್ದರೆ, ದಶರಥನ ಪುತ್ರರಾದ ಸೂರ್ಯಕಾಂತ್, ಸೊಸೆ ಸಂಗೀತಾ ಮತ್ತು ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ದಶರಥ ಮತ್ತು ಆತನ ಪುತ್ರ ತಿಪ್ಪಣ್ಣನನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಕೂಡಾ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಇನ್ನು ಇವರ ಇಂತಹದೊಂದು ಸ್ಥಿತಿಗೆ ಕಾರಣವಾಗಿದ್ದು ಪ್ರೇಮ ವಿವಾಹ ಅನ್ನೋದೆ ನೋವಿನ ಸಂಗತಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಭೀಕರ ಹಲ್ಲೆಗೆ ಕಾರಣವಾಯ್ತು ಪ್ರೇಮ ವಿವಾಹ
ಚಾಮನೂರು ಗ್ರಾಮದ ಸೂರ್ಯಕಾಂತ್ ಮತ್ತು ಅದೇ ಗ್ರಾಮದ ಸಂಗೀತಾ ಅನ್ನೋ ಯುವತಿ ಪ್ರೀತಿಸುತ್ತಿದ್ದರಂತೆ. ಆದ್ರೆ ಇಬ್ಬರ ಜಾತಿಗಳು ಮಾತ್ರ ಬೇರೆ ಬೇರೆಯಾಗಿದೆ. ಇಬ್ಬರ ಪ್ರೀತಿಯ ವಿಚಾರ, ಯುವತಿ ಸಂಗೀತಾ ಮನೆಯಲ್ಲಿ ಗೊತ್ತಾಗಿದ್ದರಿಂತ, ಸಂಗೀತಾ ಹೆತ್ತವರು ಮತ್ತು ಸಹೋದರರು ಸಂಗೀತಾಳಿಗೆ ಪ್ರೀತಿ ಗೊಡವಗೆ ಹೋಗದಂತೆ ವಾರ್ನಿಂಗ್ ಮಾಡಿದ್ದರಂತೆ. ಆದ್ರೆ ಹೆತ್ತವರ ಮಾತಿಗೆ ಕಿವಿಗೊಡದ ಸಂಗೀತಾ, ವರ್ಷದ ಹಿಂದೆ ಸೂರ್ಯಕಾಂತ್ ಜೊತೆ ಓಡಿ ಹೋಗಿ ಮದುವೆಯಾಗಿದ್ದಾರೆ. ನಂತರ ಸೂರ್ಯಕಾಂತ್ ಮತ್ತು ಸಂಗೀತಾ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಇತ್ತ ಸಂಗೀತಾ, ಸೂರ್ಯಕಾಂತ್ ಜೊತೆ ಮದುವೆಯಾಗಿದ್ದರಿಂದ, ಸಂಗೀತಾ ಕುಟುಂಬದವರು, ಸೂರ್ಯಕಾಂತ್ ಕುಟುಂಬದವರಿಗೆ ಪ್ರತಿನಿತ್ಯ ಕಿರುಕುಳ ಕೊಡಲು ಪ್ರಾರಂಭಿಸಿದ್ದರಂತೆ. ಈ ಬಗ್ಗೆ ಅನೇಕ ರಾಜಿ ಪಂಚಾಯತ್ ಗಳು ನಡೆದಿವೆ. ಸೂರ್ಯಕಾಂತ್ ಕುಟುಂಬವರೇ, ಸಂಗೀತಾ ಕುಟುಂಬದವರಿಗೆ ದಂಡದ ರೂಪದಲ್ಲಿ ಒಂದು ಲಕ್ಷ ಹಣ, ಎರಡು ತೊಲೆ ಬಂಗಾರ, ಗ್ರಾಮದಲ್ಲಿ ಇದ್ದ ಒಂದು ಸೈಟ್ ನ್ನು ನೀಡಿದ್ದಾರಂತೆ. ಆದ್ರು ಕೂಡಾ ಸಂಗೀತಾ ಹೆತ್ತವರು ಸೂರ್ಯಕಾಂತ್ ಹೆತ್ತವರಿಗೆ ಕಿರುಕುಳ ನಿಲ್ಲಿಸಿರಲಿಲ್ಲವಂತೆ. ಇದನ್ನೂ ಓದಿ: ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಬಿಜೆಪಿಯಿಂದ ನೂಪುರ್ ಶರ್ಮಾ, ನವೀನ್ ಜಿಂದಾಲ್ ಅಮಾನತು
ಇನ್ನು ಕಳೆದ ಕೆಲ ದಿನಗಳ ಹಿಂದೆ ದಂಪತಿಗೆ ಗಂಡು ಮಗು ಹುಟ್ಟಿದ್ದು, ಮಗುವಿಗೆ ತಮ್ಮೂರಿನಲ್ಲಿಯೇ ನಾಮಕರಣ ಮಾಡಬೇಕು ಅಂತ ಜೂನ್ 1 ರಂದು ತಮ್ಮೂರಿಗೆ ಬಂದಿದ್ದರಂತೆ. ಜೂನ್ 1 ರಂದು ನಾಮಕರಣ ಕಾರ್ಯ ಮುಗಿಸಿಕೊಂಡು, ಜೂನ್ 2 ರಂದು ಮರಳಿ ಬೆಂಗಳೂರಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲಿ ದೀಡಿರನೆ ಮನೆಗೆ ನುಗ್ಗಿ, ಸಂಗೀತಾ ಹೆತ್ತವರು ಮತ್ತು ಸಹೋದರರು ತಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಅಂತ ಸೂರ್ಯಕಾಂತ್ ಕುಟುಂಬದವರು ಆರೋಪಿಸುತ್ತಿದ್ದಾರೆ.
ಸಂಗೀತಾ ಹೆತ್ತವರ ವಿರುದ್ದ ಸೂರ್ಯಕಾಂತ್ ಕುಟುಂಬದವರು ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ತ ಸಂಗೀತಾ ಹೆತ್ತವರು ಕೂಡಾ ಸೂರ್ಯಕಾಂತ್ ಕುಟುಂಬದವರ ಮೇಲೆ ದೂರು ನೀಡಿದ್ದಾರೆ.
ವರದಿ: ಸಂಜಯ್, ಟಿವಿ9 ಕನ್ನಡ ಕಲಬುರಗಿ