ಊಟ ಸರಿಯಿಲ್ಲ ಎಂದಿದಕ್ಕೆ ಹೋಟೆಲ್‌ನಲ್ಲಿ ಗ್ರಾಹಕನ ಮೇಲೆ ಹಲ್ಲೆ ನಡೆಸಿದ ಹೋಟೆಲ್ ಮಂದಿ

ಊಟ ರುಚಿಯಿಲ್ಲ, ಸರಿಯಾಗಿ ಅಡುಗೆ ಮಾಡುವುದಕ್ಕೆ ಬರಲ್ಲ ಎಂದು ಗ್ರಾಹಕ ಶಿರವಾಡದ ಸುಭಾಷ್ ಜಗಳವಾಡಿದ್ದರು. ಹೀಗಾಗಿ ಹೋಟೆಲ್‌ನ ಐದಾರು ಜನ ಸೇರಿ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಊಟ ಸರಿಯಿಲ್ಲ ಎಂದಿದಕ್ಕೆ ಹೋಟೆಲ್‌ನಲ್ಲಿ ಗ್ರಾಹಕನ ಮೇಲೆ ಹಲ್ಲೆ ನಡೆಸಿದ ಹೋಟೆಲ್ ಮಂದಿ
ಊಟ ಸರಿಯಿಲ್ಲ ಎಂದಿದಕ್ಕೆ ಹೋಟೆಲ್‌ನಲ್ಲಿ ಗ್ರಾಹಕನ ಮೇಲೆ ಹಲ್ಲೆ ನಡೆಸಿದ ಹೋಟೆಲ್ ಮಂದಿ
Follow us
TV9 Web
| Updated By: ಆಯೇಷಾ ಬಾನು

Updated on:Jun 05, 2022 | 5:35 PM

ಕಾರವಾರ: ಕ್ಷುಲ್ಲಕ ಕಾರಣಕ್ಕೆ ಹೋಟೆಲೊಂದರಲ್ಲಿ ಗ್ರಾಹಕನ ಮೇಲೆ ತೀವ್ರ ಹಲ್ಲೆ ಮಾಡಿದ ಘಟನೆ ಕಾರವಾರ ನಗರದ ಬಸ್ ಸ್ಟಾಪ್ ಹತ್ತಿರವಿರುವ ಸೀವ್ಯೂ ಹೋಟೆಲ್‌ನಲ್ಲಿ ತಡ ರಾತ್ರಿ ನಡೆದಿದೆ. ಶಿರವಾಡದ ಸುಭಾಷ ವಡ್ಡರ ಎಂಬ ಗ್ರಾಹಕನ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಹೋಟೆಲ್‌ನಲ್ಲಿ ಗ್ರಾಹಕ ಊಟವನ್ನ ಆಡ್೯ರ್ ಮಾಡಿದ್ದ. ಊಟದ ರುಚಿ ನೋಡುತ್ತಿದ್ದಂತೆ ಎಂತ ಅಡುಗೆ ಮಾಡಿದ್ದಿರಾ? ದುಡ್ಡ ಕೊಟ್ಟು ತಿನ್ನುತ್ತೆವಲ್ಲ.‌ ನೀವೆನು ಸುಮ್ಮನೆ ಬಿಟ್ಟಿ ಕೊಡುತ್ತಿರಾ.. ಸರಿಯಾಗಿ ಅಡುಗೆ ಮಾಡುವುದಕ್ಕೆ ಬರಲ್ಲ ಎಂದ ಸರ್ವರ್‌ ತಂದು ಕೊಟ್ಟ ಊಟದ ತಟ್ಟೆಯನ್ನ ಎಸೆದಿದ್ದಾನೆ ಎಂಬ ಆರೋಪ ವಿದೆ.

ತಟ್ಟೆ ಎಸೆಯುತ್ತಿದ್ದಂತೆ ಹೋಟೆಲ್ ‌ನಲ್ಲಿದ್ದ ಸಿಬ್ಬಂದಿ ಬಂದು ಗ್ರಾಹಕನ್ನ ವಿಚಾರಣೆ ಮಾಡಿದ್ದಾರೆ. ಆಗ ಗ್ರಾಹಕ ಇರುವ ವಿಚಾರ ಹೇಳಿದ್ದಾನೆ. ಸರಿಯಾಗಿ ದುಡ್ಡ ತೆಗೆದುಕೊಳ್ಳುತ್ತಿರಾ. ರುಚಿಯಾಗಿ ಅಡುಗೆ ಮಾಡೋಕೆ ಬರಲ್ವಾ. ಊಟ ಕೆಟ್ಟು ಹೋಗಿದೆ ಎಂದು ತಿಳಿಸಿದ್ದಾನೆ. ಆಗ ಸಿಬ್ಬಂದಿ ನಿಂಗೆ ಊಟ ಸರಿ ಇಲ್ಲ ಅಂದ್ರೆ ಏಳಬೇಕು ಅದನ್ನ ಬಿಟ್ಟು ಪ್ಲೇಟ್ ಯಾಕೆ ಎಸೆದೆ ಅಂತಾ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ತಾರಕಕ್ಕೆ ಏರಿ ಸುಮಾರು ನಾಲ್ಕರಿಂದ ಐದು ಜನ ಸೇರಿ ಗ್ರಾಹಕ ಸುಭಾಷ್‌ಗೆ ಚನ್ನಾಗಿ ಒದೆ ಕೊಟ್ಟಿದ್ದಾರೆ. ಒದೆ ತಿಂದ ಗ್ರಾಹಕ ತೀವ್ರ ಅಸ್ವಸ್ಥನಾಗಿ ಬಿದ್ದ ಬಳಿಕ ಆತನನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸುಭಾಷ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಬಿಜೆಪಿಯಿಂದ ನೂಪುರ್ ಶರ್ಮಾ, ನವೀನ್ ಜಿಂದಾಲ್ ಅಮಾನತು

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೋಟೆಲ್ ನಲ್ಲಿ ಆದ ಘಟನೆ ತಿಳಿದು ಕಾರವಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವ ಸ್ಥಿತಿ ತಿಳಿದುಕೊಂಡು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅದೇನೇ ಇರಲಿ ಕ್ಷುಲ್ಲಕ ಕಾರಣಕ್ಕೆ ಒಂಟಿ ವ್ಯಕ್ತಿ ಮೇಲೆ ಈ ರೀತಿ ನಾಲ್ಕೈದು ಜನರಿಂದ ಹಲ್ಲೆಯಾಗಿದ್ದು ಮಾತ್ರ ಸರಿ ಅಲ್ಲ. ಅದೇನೆ ಇದ್ದರು ಮಾತಾಡಿ ಬಗೆ ಹರಿಸಿಕೊಳ್ಳಬೇಕಿತ್ತು. ಒದೆ ಕೊಡುವಾಗ ಏನಾದ್ರು ಹೆಚ್ಚು ಕಮ್ಮಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದರೆ ಹೊಣೆ ಯಾರು? ಹೋಟೆಲ್ ಸಿಬ್ಬಂದಿ ಮಾಡಿದ್ದು ತಪ್ಪು ಅಂತಾ ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

Published On - 5:10 pm, Sun, 5 June 22

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ