ಯುದ್ಧ ನಿಲ್ಲಿಸಿ, ಶಾಂತಿ ನೆಲಸಲಿ: ಕಲಬುರಗಿಯಲ್ಲಿ ಪ್ಯಾಲೆಸ್ಟೈನ್ ಪರವಾಗಿ ವಿವಿಧ ಸಂಘಟನೆಗಳಿಂದ ಧರಣಿ

| Updated By: ವಿವೇಕ ಬಿರಾದಾರ

Updated on: Nov 13, 2023 | 12:52 PM

ಗಾಜಾ ಮತ್ತು ಪ್ಯಾಲೆಸ್ಟೈನ್​ನಲ್ಲಿ ನರಮೇಧ ನಡೆಯುತ್ತಿದೆ. ಮಕ್ಕಳು, ಅಮಾಯಕರು ಇಸ್ರೇಲ್​ ದಾಳಿಗೆ ಬಲಿಯಾಗುತ್ತಿದ್ದಾರೆ‌. ಯುದ್ಧದಿಂದ ಪ್ಯಾಲೆಸ್ಟೈನ್​ನಲ್ಲಿ ನರಮೇಧ ನಡೆಯುತ್ತಿದ್ದು, ಯುದ್ಧ ನಿಲ್ಲಿಸಿ ಶಾಂತಿ ನೆಲೆಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಯುದ್ಧ ನಿಲ್ಲಿಸಿ, ಶಾಂತಿ ನೆಲಸಲಿ: ಕಲಬುರಗಿಯಲ್ಲಿ ಪ್ಯಾಲೆಸ್ಟೈನ್ ಪರವಾಗಿ ವಿವಿಧ ಸಂಘಟನೆಗಳಿಂದ ಧರಣಿ
ಪ್ಯಾಲೆಸ್ಟೈನ್​​ ಪರವಾಗಿ ಘೋಷಣೆ
Follow us on

ಕಲಬುರಗಿ ನ.13: ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​ನ ಹಮಾಸ್ (Israel-Hamas War) ​ಉಗ್ರರ ನಡುವೆ ಯುದ್ಧ ನಡೆದಿದೆ. ಪ್ಯಾಲೆಸ್ಟೈನ್​​ನಲ್ಲಿ ನಡೆಯುತ್ತಿರುವ ನರಮೇಧ ನಿಲ್ಲಿಸುವಂತೆ ಕಲಬುರಗಿ (Kalaburgi) ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದವು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇಸ್ರೇಲ್‌- ಗಾಜಾ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ಸಾಮಾನ್ಯ ಪ್ರಜೆಗಳು ಸಾವಿಗೀಡಾಗುತ್ತಿದ್ದಾರೆ. ಇದು ಯುದ್ಧ ರೀತಿ ಕಂಡು ಬರುತ್ತಿಲ್ಲ.

ಗಾಜಾ ಮತ್ತು ಪ್ಯಾಲೆಸ್ಟೈನ್​ನಲ್ಲಿ ನರಮೇಧ ನಡೆಯುತ್ತಿದೆ. ಮಕ್ಕಳು, ಅಮಾಯಕರು ಇಸ್ರೇಲ್​ ದಾಳಿಗೆ ಬಲಿಯಾಗುತ್ತಿದ್ದಾರೆ‌. ಯುದ್ಧದಿಂದ ಪ್ಯಾಲೆಸ್ಟೈನ್​ನಲ್ಲಿ ನರಮೇಧ ನಡೆಯುತ್ತಿದ್ದು, ಯುದ್ಧ ನಿಲ್ಲಿಸಿ ಶಾಂತಿ ನೆಲೆಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಪ್ಯಾಲೆಸ್ಟೈನ್ ಪರ ಘೋಷಣೆ

ವಿಜಯಪುರದ ಜುಮ್ಮಾ ಮಸೀದಿ ರಸ್ತೆಯಲ್ಲಿ ನವೆಂಬರ್​ 6ರಂದು ಎಸ್​ಡಿಪಿಐ ಕಾರ್ಯಕರ್ತರು ಪ್ಯಾಲೆಸ್ಟೈನ್ ಪರವಾಗಿ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದ್ದರು. ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪ್ಯಾಲೆಸ್ಟೈನ್ ಪರ ಭಿತ್ತಿಪತ್ರ ಪ್ರದರ್ಶನ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಅಪ್ರಾಪ್ತ ಮಕ್ಕಳು ಸಹಿತ ಭಾಗಿಯಾಗಿದ್ದರು. ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲ ವಿರುದ್ಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Israel-Hamas War: ಮದುವೆ, ಮನರಂಜನೆ ರದ್ದು ಮಾಡಿ ಪ್ಯಾಲೆಸ್ಟೈನ್​ಗೆ ಹಣ ನೀಡುವಂತೆ ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಕರೆ

ಪ್ಯಾಲೆಸ್ಟೈನ್ ​ ಬೆಂಬಲಿಸಿ ವಿಡಿಯೋ ಹಂಚಿಕೊಂಡಿದ್ದ ಮುಸ್ಲಿಂ ಯುವಕ

ಪ್ಯಾಲೆಸ್ತೀನ್​ ಬೆಂಬಲಿಸಿ ವಿಡಿಯೋ ಹಂಚಿಕೊಂಡಿದ್ದ ಹೊಸಪೇಟೆಯ ಆಲಂ ಬಾಷಾ ವಿರುದ್ಧ ಸುಮುಟೋ ಪ್ರಕರಣ ದಾಖಲು ಮಾಡಲಾಗಿತ್ತು. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ PSI ಮುನಿರತ್ನ ನೀಡಿದ ದೂರಿನ ಆಧಾರದ ಮೇಲೆ CRPC 108-151 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಯುವಕನನ್ಮು ಪೊಲೀಸರು ವಶಕ್ಕೆ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ