ಆರ್​ಡಿ ಪಾಟೀಲ್​ನ ಮತ್ತೊಂದು ಕರ್ಮಕಾಂಡ ಬಯಲು: 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗಲು ಪ್ಲ್ಯಾನ್​​

ಕೆಇಎ, ಎಫ್‌ಡಿಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಆರ್‌ಡಿ ಪಾಟೀಲ್​ ಎಸಗಿರುವ ಅಕ್ರಮಗಳು ಬಗೆದಷ್ಟು ಬಯಲಾಗುತ್ತಲೇ ಇದೆ. ಇದೀಗ ಆರ್ ಡಿ ಪಾಟೀಲ್ ಅಕ್ರಮದ ಮತ್ತೊಂದು ಕರ್ಮಕಾಂಡ ಬಟಾ ಬಯಲಾಗಿದೆ. 545 ಪಿಎಸ್ಐ ನೇಮಕಾತಿ ಬಳಿಕ 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗುವುದಕ್ಕೆ ಪ್ಲ್ಯಾನ್ ಮಾಡಲಾಗಿತ್ತು.

ಆರ್​ಡಿ ಪಾಟೀಲ್​ನ ಮತ್ತೊಂದು ಕರ್ಮಕಾಂಡ ಬಯಲು: 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗಲು ಪ್ಲ್ಯಾನ್​​
ಆರ್​ಡಿ ಪಾಟೀಲ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2023 | 5:24 PM

ಕಲಬುರಗಿ, ನವೆಂಬರ್​​​​​​ 13: ಕೆಇಎ, ಎಫ್‌ಡಿಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil)​ ಎಸಗಿರುವ ಅಕ್ರಮಗಳು ಬಗೆದಷ್ಟು ಬಯಲಾಗುತ್ತಲೇ ಇದೆ. ಅಕ್ರಮಗಳ ರೂವಾರಿ ಆಗಿರುವ ಆರ್​.ಡಿ ಪಾಟೀಲ್ ಇತ್ತೀಚೆಗೆ ದಾಖಲೆಗಳಿದ್ದರೆ ಕೊಡಿ ಎಂದು ಮಾಧ್ಯಮಗಳ ಮುಂದೆ ದರ್ಪ ತೋರಿಸಿದ್ದ. ಇದೀಗ ಆರ್ ಡಿ ಪಾಟೀಲ್ ಅಕ್ರಮದ ಮತ್ತೊಂದು ಬಿಗ್ ಎಕ್ಸಕ್ಲೂಸಿವ್​ ಹೊರಬಿದಿದ್ದು, ಮತ್ತೊಂದು ಕರ್ಮಕಾಂಡ ಬಟಾ ಬಯಲಾಗಿದೆ.

545 ಪಿಎಸ್ಐ ನೇಮಕಾತಿ ಬಳಿಕ 402 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮವೆಸಗುವುದಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್​ಐ ಹುದ್ದೆಗಳ ನೇಮಕಾತಿ, 402 ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಆರ್​ಡಿ ಪಾಟೀಲ್​​ ಅಕೌಂಟ್​ಗೆ ಕೋಟ್ಯಾಂತರ  ಹಣ ಹರಿದು ಬಂದಿತ್ತು.

ಒಂದೊಂದು ಕೋಟಿ ರೂ. ಲೆಕ್ಕಾಚಾರದಲ್ಲಿ ಡೀಲ್ ಫಿಕ್ಸ್ ಮಾಡಿ ಮುಂಗಡ ಹಣ ಪಡೆದಿದ್ದ. ಫೆಬ್ರವರಿ 15 ರಂದು ಆರ್​ಡಿ ಪಾಟೀಲ್​ ಅಕೌಂಟ್​ಗೆ 20 ಲಕ್ಷ ರೂ. ಜಮಾ ಆಗಿದೆ. ಕಲಬುರಗಿ ನಗರದ ಆಕ್ಸಿಸ್ ಬ್ಯಾಂಕ್ ಅಕೌಂಟ್​ಗೆ ಅಭ್ಯರ್ಥಿ ಹಣ ಹಾಕಿದ್ದಾರೆ. ಆದರೆ 545 ಪಿಎಸ್​ಐ ನೇಮಕಾತಿ ಅಕ್ರಮ ಬಯಲಾಗಿದ್ದರಿಂದ 402 ಪಿಎಸ್​ಐ ನೇಮಕಾತಿ ತಡೆ ಹಿಡಿಯಲಾಗಿತ್ತು.

ಇದನ್ನೂ ಓದಿ: KEA ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪ್ಲ್ಯಾನ್ ಎ ವಿಫಲವಾದರೆ ಪ್ಲ್ಯಾನ್ ಬಿ ರೆಡಿ ಮಾಡಿಟ್ಟುಕೊಂಡಿದ್ದ ಆರ್‌ಡಿ ಪಾಟೀಲ್

KEA ನಡೆಸಿದ್ದ FDA ಪರೀಕ್ಷೆಯಲ್ಲೂ ಅಕ್ರಮ ನಡೆದಿತ್ತು. ಈ ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಬಂಧನವಾಗಿತ್ತು. ನಿನ್ನೆ ಕಲಬುರಗಿಯ 2ನೇ JMFC ಕೋರ್ಟ್ ಮುಂದೆ ಆರೋಪಿಗಳಾದ ರುದ್ರಗೌಡ ಪಾಟೀಲ್, ಸಂತೋಷ್, ಸಲೀಂ ಹಾಜರು ಪಡಿಸಲಾಗಿತ್ತು. ಈ ವೇಳೆ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶೆ ಸ್ಮಿತಾ ನಾಗಲಾಪುರ, ಕಸ್ಟಡಿಗೆ ನೀಡದೆ 4 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಮೆಡಿಕಲ್ ಚೆಕಪ್ ಬಳಿಕ ಸ್ಥಳ ಮಹಜರಿಗೆ ಆರ್​ಡಿ ಪಾಟೀಲ್​​ನನ್ನು ಪೊಲೀಸರು ಕರೆ ತಂದಿದ್ದರು. ಈ ವೇಳೆ ವೇಳೆ ಮಾಧ್ಯಮದ ವಿರುದ್ಧವೇ ರುದ್ರಗೌಡ ಪಾಲೀಟ್ ದರ್ಪ ಮೆರೆದಿದ್ದ.

ಇದನ್ನೂ ಓದಿ: FDA ಪರೀಕ್ಷೆಯಲ್ಲಿ ಅಕ್ರಮ ಕೇಸ್; ಪೊಲೀಸರು ಕರೆದೊಯ್ಯುವ ವೇಳೆ ಮಾಧ್ಯಮಗಳ ಮೇಲೆ ಪಾಟೀಲ್ ದರ್ಪ

ಅಕ್ಟೋಬರ್ 28 ರಂದು ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ನಡೆದಿದ್ದ ಕೆಇಎ ಪರೀಕ್ಷೆಯಲ್ಲಿ, ಕಲಬುರಗಿ ಹಾಗೂ ಯಾದಗಿರಿಯಲ್ಲಿ ಅಕ್ರಮ ನಡೆದಿತ್ತು. ಈ ಅಕ್ರಮದ ಆರೋಪಿ ಆರ್‌.ಡಿ ಪಾಟೀಲ್​ನನ್ನು ಮೊನ್ನೆಯಷ್ಟೇ ಅರೆಸ್ಟ್ ಆಗಿದ್ದ. ಅಷ್ಟೇ ಅಲ್ಲದೇ ಪೊಲೀಸರ ಕಾರ್ಯಾಚರಣೆಯ ದಿಕ್ಕು ತಪ್ಪಿಸಲು ಆರ್‌ಡಿ ಪಾಟೀಲ್ ತನ್ನ ಮೊಬೈಲ್‌ನ್ನ ಸಹಚರನಿಗೆ ನೀಡಿ, ಆತನಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಾಡಲು ಹೇಳಿದ್ದಾನೆ. ಆರ್‌ಡಿ ಪಾಟೀಲ್ ಮೊಬೈಲ್‌ ನೆಟ್‌ವರ್ಕ್‌ ಬೆನ್ನತ್ತಿದ ಪೊಲೀಸರು ಬರೋಬ್ಬರಿ 800 ಕಿಲೋ ಮೀಟರ್‌ ಓಡಾಡಿದ್ದಾರೆ.

ಅಪಾರ್ಟ್‌ಮೆಂಟ್‌ನಿಂದ ಜಿಗಿದು ಹೋಗಿದ್ದ ಪಾಟೀಲ್‌, ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಶಿವಕುಮಾರ್‌ ಎಂಬಾತನ ಆಶ್ರಯದಲ್ಲಿದ್ದ. ಗುಡಿಸಿಲಿನಲ್ಲೇ ಆಶ್ರಯ ಪಡೆದಿದ್ದ. ಅಲ್ಲಿಂದ ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿದ್ದ. ಸೊಲ್ಲಾಪುರದಲ್ಲಿ ಚಿಕ್ಕ ಮನೆಯಲ್ಲಿದ್ದ ಪಾಟೀಲ್‌ನನ್ನ ಪೊಲೀಸರು ಅರೆಸ್ಟ್‌ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:15 pm, Mon, 13 November 23

ತಾಜಾ ಸುದ್ದಿ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ