ಬಿಜೆಪಿ ನಾಯಕರಿಗೆ ಅಧಿಕಾರದ ಮದ ಹೆಚ್ಚಾಗಿದೆ, ವೋಟ್ ಹಾಕ್ಬೇಡಿ; ವೈರಲ್ ಆಯ್ತು ಕಲಬುರಗಿಯ ಬಿಜೆಪಿ ಕಾರ್ಯಕರ್ತನ ಹೇಳಿಕೆ
ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪದಾಧಿಕಾರಿಯೂ ಆಗಿರುವ ಅವರ ಹೇಳಿಕೆ ಈಗ ಬಿಜೆಪಿ ಪಕ್ಷದಾದ್ಯಂತ ಎಂತಹ ಪರಿಣಾಮ ಉಂಟುಮಾಡಲಿದೆ ಮತ್ತು ಬಿಜೆಪಿ ನಾಯಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕಲಬುರಗಿ: ಬಿಜೆಪಿ ನಾಯಕರಿಗೆ ಅಧಿಕಾರದ ಮದ ಹೆಚ್ಚಾಗಿದೆ. ಮದ ಹೆಚ್ಚಾದ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗವನ್ನು ಬಿಜೆಪಿ ನಾಯಕರು ಕಡೆಗಣಿಸಿದ್ದಾರೆ. ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸಬೇಕು. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಚಿಂಚನಸೂರ್ ಕರೆ ನೀಡಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಕಲಬುರಗಿ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ. ಬಿಜೆಪಿ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರೋರ್ವರೇ ತಿರುಗಿ ಬಿದ್ದು ಹೇಳಿಕೆ ನೀಡಿದ್ದಾರೆ.
ಮದ ಹೆಚ್ಚಾದ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗವನ್ನು ಬಿಜೆಪಿ ನಾಯಕರು ಕಡೆಗಣಿಸಿದ್ದಾರೆ.ಕೆಲವು ದಿನಗಳ ಹಿಂದೆ ಬೆಂಗಳೂರಿನ ಬಿಜೆಪಿ ಕಚೇರಿಗೆ ಹೋದಾಗ ಅವರು ನನ್ನನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಕಲಬುರಗಿಯಿಂದ ಬಂದ ಕಾರ್ಯಕರ್ತರೆಂದು ಮನವಿ ಮಾಡಿದರೂ ಕೊರೊನಾ ನೆಪವೊಡ್ಡಿ ಒಳಗೆ ಬಿಟ್ಟುಕೊಳ್ಳಲಿಲ್ಲ. ಹೆಚ್ಚಾಗಿದ್ದು ಕೊರೊನಾ ಅಲ್ಲ, ಬಿಜೆಪಿ ನಾಯಕರ ಮದ. ಅವರಿಗೆ ತಕ್ಕ ಪಾಠ ಕಲಿಸಲು ಈಬಾರಿ ನಡೆಯಲಿರುವ ನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ನೋಟಾ ಚಲಾಯಿಸುವಂತೆ ಬಿಜೆಪಿ ಕಾರ್ಯಕರ್ತ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರೂ ಆದ ರಾಘವೇಂದ್ರ ಚಿಂಚನಸೂರ್ ಮನವಿ ಮಾಡಿದ್ದಾರೆ. ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಪದಾಧಿಕಾರಿಯೂ ಆಗಿರುವ ಅವರ ಹೇಳಿಕೆ ಈಗ ಬಿಜೆಪಿ ಪಕ್ಷದಾದ್ಯಂತ ಎಂತಹ ಪರಿಣಾಮ ಉಂಟುಮಾಡಲಿದೆ ಮತ್ತು ಬಿಜೆಪಿ ನಾಯಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಅಷ್ಟೇ ಅಲ್ಲದೇ ಕಲ್ಯಾಣ ಕರ್ನಾಟಕದ ಮುಖ್ಯ ಕೇಂದ್ರ ಕಲಬುರಗಿಯ ಯಾವುದೇ ಶಾಸಕರಿಗೂ ಸಚಿವ ಸ್ಥಾನ ನೀಡಿಲ್ಲ. ಬಜೆಟ್ನಲ್ಲಿಯೂ ಕಡಿಮೆ ಅನುದಾನ ಒದಗಿಸಿದ್ದಾರೆ. ಬಿಜೆಪಿ ನಾಯಕರಿಗೆ ಕಾರ್ಯಕರ್ತರು ‘ಜೀ’ಎಂದು ನಾವು ಹೇಳುವುದು ಅವರಿಗೆ ಮದ ಏರಿಸುತ್ತದೆ. ಅವರನ್ನು ಈ ಪಾಲಿಕೆ ಚುನಾವಣೆಯಲ್ಲಿ ಮತ ಹಾಕದಿರೋಣ. ಈಮೂಲಕ ಬುದ್ಧಿ ಕಲಿಸೋಣ ಎಂದು ಅವರು ಕರೆ ನೀಡಿದ್ದಾರೆ.
ಈಕುರಿತು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ ರಾಘವೇಂದ್ರ ಚಿಂಚನಸೂರ್, ನಮ್ಮ ಭಾಗಕ್ಕೆ ಬಿಜೆಪಿ ನಾಯಕರು ಅನ್ಯಾಯ ಮಾಡುತ್ತಿದ್ದಾರೆ. ಕಾರ್ಯಕರ್ತರ ಶ್ರಮಕ್ಕೆ ಬೆಲೆ ನೀಡುತ್ತಿಲ್ಲ. ಐದು ಶಾಸಕರಿದ್ದರೂ ಯಾರೊಬ್ಬರಿಗೂ ಮಂತ್ರಿ ಸ್ಥಾನ ನೀಡಿಲ್ಲ. ಕೆಕೆಆರ್ಡಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆ ಬುದ್ದಿ ಕಲಿಸಬೇಕಾಗಿದೆ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದೇ ನೋಟಾ ಹಾಕುವಂತೆ ಹೇಳಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:
ಕಲಬುರಗಿ ಯುವಕನ ಅಂಗಾಂಗ ದಾನ; ಜಿರೋ ಟ್ರಾಫಿಕ್ನಲ್ಲಿ ಹೈದರಾಬಾದ್ಗೆ ರವಾನೆ
ಕುಕ್ಕರ್, ಸೀರೆ ಅಲ್ಲ; ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ರಿಯಾಯಿತಿ ಆರೋಗ್ಯ ಕಾರ್ಡ್ನ ಆಮಿಷ!
(Kalaburagi BJP Worker says Donot vote for BJP in the upcoming local body election video viral)
Published On - 5:16 pm, Wed, 1 September 21