Kalaburagi News: 30 ಲಕ್ಷದ ಲಕ್ಕಿಡಿಪ್ ಆಸೆಗೆ 12.67 ಲಕ್ಷ ರೂ. ಕಳೆದುಕೊಂಡ ಖಾಸಗಿ ಶಾಲಾ ಶಿಕ್ಷಕಿ

ಲಕ್ಕಿಡಿಪ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆಯಾಗಿದೆ, ಹಣ ಹಾಕಿ ಅನೇಕ ವಂಚಕರು ಹಣ ಕೇಳಿ ಮೋಸ ಮಾಡುತ್ತಿದ್ದು, ಈ ಬಗ್ಗೆ ಮೋಸ ಹೋಗಬಾರದು ಅಂತ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Kalaburagi News: 30 ಲಕ್ಷದ ಲಕ್ಕಿಡಿಪ್ ಆಸೆಗೆ 12.67 ಲಕ್ಷ ರೂ. ಕಳೆದುಕೊಂಡ ಖಾಸಗಿ ಶಾಲಾ ಶಿಕ್ಷಕಿ
ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: Ganapathi Sharma

Updated on:Jul 13, 2023 | 4:12 PM

ಕಲಬುರಗಿ: ಮೋಸ ಹೋಗೋರು ಇರೋವರಗೆ ಮೋಸ ಮಾಡೋರು ಇದ್ದೇ ಇರುತ್ತಾರೆ. ಅದರಲ್ಲೂ ಇತ್ತೀಚೆಗೆ ನಿಮ್ಮ ಮೊಬೈಲ್ ನಂಬರ್ ಲಕ್ಕಿಡಿಪ್ ನಲ್ಲಿ ಆಯ್ಕೆಯಾಗಿದೆ. ನಿಮಗೆ ಇಷ್ಟು ಬಹುಮಾನ ಬಂದಿದೆ ಅಂತ ಬಣ್ಣದ ಮಾತುಗಳನ್ನು ಹೇಳುವುದು, ಕೌನ್ ಬನೇಗಾ ಕರೋಡ್​​ಪತಿಯಿಂದ ಕರೆ ಮಾಡುತ್ತಿದ್ದೇವೆ ಎನ್ನೋದು, ನಿಮ್ಮ ನಂಬರ್ ಲಕ್ಕಿಡಿಪ್ ನಲ್ಲಿ ಸೆಲೆಕ್ಟ್ ಆಗಿದೆ ಅಂತ ಹೇಳಿ ಅನೇಕರು ಅನೇಕ ರೀತಿಯಿಂದ ಬಣ್ಣದ ಮಾತುಗಳನ್ನು ಹೇಳಿ ಯಾಮಾರಿಸುವುದು (Financial Fraud) ನಡೆಯುತ್ತಿದೆ. ನಂತರ ಬಹುಮಾನ ಮೊತ್ತವನ್ನು ಪಡೆಯಲು ನೀವು ಇಂತಿಷ್ಟು ಹಣ ನೀಡಬೇಕು ಅಂತ ಹೇಳಿ, ಅನೇಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುವ ದೊಡ್ಡ ಜಾಲವೇ ದೇಶದಲ್ಲಿದೆ. ಇಂತಹದೇ ವಂಚನೆಯ ಜಾಲಕ್ಕೆ ಸಿಲುಕಿ ಕಲಬುರಗಿ ನಗರದ (Kalaburagi) ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಬರೋಬ್ಬರಿ 12.67 ಲಕ್ಷ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಡೆದಿದ್ದೇನು?

ಕಲಬುರಗಿ ನಗರದ ವಿದ್ಯಾನಗರದ ನಿವಾಸಿಯಾಗಿರುವ ಮೂವತ್ತೊಂದು ವರ್ಷದ ಮೇಘನಾ ಎಂಬವರು, ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 2022ರ ಜೂನ್ 1 ರಂದು, 9661066782 ನಂಬರ್ ನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಆಕಾಶ್ ವರ್ಮಾ ಅಂತ ತನ್ನನ್ನು ಪರಿಚಯ ಮಾಡಿಕೊಂಡಿದ್ದಾನೆ. ಹಿಂದಿ ಭಾಷೆಯಲ್ಲಿ ಮೇಘನಾ ಅವರಿಗೆ ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗಿದೆ. ಬಹುಮಾನ ಮೊತ್ತ 30 ಲಕ್ಷವಿದ್ದು, ನೀವು ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಿಂದ ನಿಮಗೆ ಹಣ ಬರುತ್ತೆ ಅಂತ ಹೇಳಿದ್ದಾನೆ. ಆಗ ಮೇಘನಾ ಅವರು ವಿಚಾರ ಮಾಡಿ ಹೇಳ್ತೇನೆ ಅಂತ ಹೇಳಿ ಸುಮ್ಮನಾಗಿದ್ದಾರೆ. ಆದ್ರೆ ಆಕಾಶ ಶರ್ಮಾ ಪ್ರತಿನಿತ್ಯ ಕರೆ ಮಾಡಿ, ನಿಮ್ಮ ಬಹುಮಾನ ಮೊತ್ತವನ್ನು ಸ್ವೀಕರಿಸಿ ಅಂತ ದುಂಬಾಲು ಬಿದ್ದಿದ್ದಾನೆ. ಆಗ ಶಿಕ್ಷಕಿ ಮೇಘನಾ ಅವರು ಆಯ್ತು ಅಂತ ಹೇಳಿದ್ದಾರೆ. ಆಗ ವಂಚಕ ತನ್ನ ಅಸಲಿ ಆಟವನ್ನು ಆರಂಭಿಸಿದ್ದಾನೆ.

ನೀವು ನಿಮ್ಮ ಬಹುಮಾನ ಮೊತ್ತವನ್ನು ಪಡೆಯಬೇಕಾದರೆ ಮೊದಲು 8,200 ರೂಪಾಯಿ ಹಣವನ್ನು 41059099915, ಎಸ್​​ಬಿಐ ಬ್ಯಾಂಕ್ ಖಾತೆಗೆ ಜಮೆ ಮಾಡಿ, ನಿಮ್ಮ ಬಹುಮಾನ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ ಅಂತ ಹೇಳಿದ್ದಾನೆ. ಮೇಘನಾ ಅವರು ಜಮೆ ಮಾಡಿದ್ದಾರೆ. ವಂಚಕ ಮತ್ತೆ ಹತ್ತಾರು ಕಾರಣ ಹೇಳಿ ತನ್ನ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದಾನೆ. ವಂಚನಕ ಮಾತನ್ನು ನಂಬಿದ್ದ ಶಿಕ್ಷಕಿ ಮೇಘನಾ ಅವರು 2022ರ ಜೂನ್ 4 ರಿಂದ 2023 ರ ಜನವರಿ 12 ರವರೆಗೆ ಬರೋಬ್ಬರಿ 12,67,700 ರೂಪಾಯಿ ಹಣವನ್ನು ವಂಚಕನ ಖಾತೆಗೆ ಜಮೆ ಮಾಡಿದ್ದಾರೆ.

ಇದನ್ನೂ ಓದಿ: Kalaburagi News: ಕಲಬುರಗಿ ಜಿಲ್ಲೆಗೆ ಮುನಿದ ವರುಣ; ಬರಗಾಲ ಘೋಷಣೆಗೆ ರೈತರ ಆಗ್ರಹ

ಇಷ್ಟೊಂದು ಹಣ ಹಾಕಿದರು ಕೂಡಾ ವಂಚಕ ಬಹುಮಾನ ಮೊತ್ತವನ್ನು ಹಾಕದೇ, ಪ್ರತಿನಿತ್ಯ ಹಣವನ್ನು ಶಿಕ್ಷಕಿ ಮೇಘನಾ ಅವರಿಂದ ಪಡೆದಿದ್ದಾನೆ. ನಂತರ ಬಹುಮಾನ ಮೊತ್ತವನ್ನು ನನ್ನ ಅಕೌಂಟ್ ಗೆ ಜಮೆ ಮಾಡಿ ಅಂತ ದುಂಬಾಲು ಬಿದ್ದಾಗ, ಪೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದಾನೆ. ಈ ಬಗ್ಗೆ ವಂಚನೆಗೊಳಗಾದ ಖಾಸಗಿ ಶಾಲಾ ಶಿಕ್ಷಕಿ, ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ರಾಕೇಶ್ ವರ್ಮಾ ವಿರುದ್ದ ಸಿಇಎನ್ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಲಕ್ಕಿಡಿಪ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆಯಾಗಿದೆ, ಹಣ ಹಾಕಿ ಅನೇಕ ವಂಚಕರು ಹಣ ಕೇಳಿ ಮೋಸ ಮಾಡುತ್ತಿದ್ದು, ಈ ಬಗ್ಗೆ ಮೋಸ ಹೋಗಬಾರದು ಅಂತ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Thu, 13 July 23

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು