ಕಲಬುರಗಿ: ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ; 10 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 21, 2024 | 4:59 PM

ಕಲಬುರಗಿ (Kalaburagi)ಯ ಸಪ್ತಗಿರಿ ಆರೆಂಜ್ ಹೋಟೆಲ್​​​ನಲ್ಲಿ ಇಂದು(ಶುಕ್ರವಾರ) ಬೆಳಗ್ಗೆ 6 ಗಂಟೆಯ ಸುಮಾರಿಗೆ ಸಿಲಿಂಡರ್​ ಸ್ಫೋಟ (Cylinder Blast) ಗೊಂಡು ಹಲವರಿಗೆ ಗಾಯವಾದ ಘಟನೆ ನಡೆದಿದೆ. ಕೂಡಲೇ ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿ: ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ; 10 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಕಲಬುರಗಿಯ ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ
Follow us on

ಕಲಬುರಗಿ, ಜೂ.21: ಹೋಟೆಲ್​ನಲ್ಲಿ ಸಿಲಿಂಡರ್​ ಸ್ಫೋಟ(Cylinder Blast)ಗೊಂಡು ಹಲವರಿಗೆ ಗಾಯವಾದ ಘಟನೆ ಕಲಬುರಗಿ (Kalaburagi)ಯ ಸಪ್ತಗಿರಿ ಆರೆಂಜ್ ಹೋಟೆಲ್​​​ನಲ್ಲಿ ಇಂದು(ಶುಕ್ರವಾರ) ಬೆಳಗ್ಗೆ 6 ಗಂಟೆಯ ಸುಮಾರಿಗೆ ನಡೆದಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ‌, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಗಾಯಾಳುಗಳನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಂದು ಬೆಳಗ್ಗೆ 6 ಗಂಟೆಗೆ ಎಂದಿನಂತೆ ಅಡುಗೆ ಸಿಬ್ಬಂದಿಗಳು ಬೆಳಗಿನ ಉಪಹಾರ ಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಒಂದು ಸಿಲಿಂಡರ್​ನಲ್ಲಿ ಲಿಕೇಜ್ ಕಂಡು ಬಂದ ತಕ್ಷಣ ಎಲ್ಲಾ ಸಿಬ್ಬಂದಿಗಳು ಹೊರಗೆ ಓಡಿ ಬಂದಿದ್ದಾರೆ. ಹತ್ತು ನಿಮಿಷದ ಬಳಿಕ ಸಿಬ್ಬಂದಿಗಳೆಲ್ಲ ಮತ್ತೆ ಕಿಚನ್ ರೂಂಗೆ ದೌಡಾಯಿಸಿದ್ದಾರೆ. ಈ ವೇಳೆ ಲಿಕ್ ಆಗುತ್ತಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದೆ. ಈ ವೇಳೆ ಹತ್ತು ಜನ ಗಾಯಗೊಂಡಿದ್ದರೆ, ನಾಲ್ವರು ಅಡುಗೆ ಸಿಬ್ಬಂದಿಗಳ ಸ್ಥಿತಿ ಚಿಂತಾಜನಕವಾಗಿದೆ‌.

ಗಾಯಾಳುಗಳು ಹೆಸರು ಇಂತಿದೆ

  1. ಸತ್ಯವಾನ್ ಶರ್ಮ ಹರಿಯಾಣ (55)
  2. ರಾಕೇಶ್ ಯುಪಿ ಮೂಲದವರ (45)
  3. ಮಹೇಶ್ ಕುದುಮುಡು (40)
  4. ವಿಠ್ಠಲ್ ಕೊಡಲ್ (42)
  5. ಗೂರುಮೂರ್ತಿ
  6. ಅಪ್ಪರಾಯ್
  7. ಮಲ್ಲಿನಾಥ್
  8. ಮಹೇಶ್
  9. ಲಕ್ಷ್ಮಣ್
  10. ರಾಕೇಶ್

ಇದನ್ನೂ ಓದಿ:ಉತ್ತರ ಕನ್ನಡ: ನೌಕಾನಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್​ ಸ್ಫೋಟ

ಇನ್ನು ಘಟನೆಯಲ್ಲಿ ಗಂಭೀರ ಗಾಯಗೊಂಡ ಏಳು ಜನರ ಫೈಕಿ ಬೆಂಗಳೂರಿನ ವಿಕ್ಟೋರಿಯಾಕ್ಕೆ ಇಬ್ಬರು ಮತ್ತು ಮಹಾರಾಷ್ಟ್ರದ ಮಿರಜ್ ಖಾಸಗಿ ಆಸ್ಪತ್ರೆಗೆ ಐದು ಜನ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮತ್ತು ಮಿರಜ್‌ಗೆ ಶಿಫ್ಟ್ ಮಾಡಲಾಗಿದೆ. ಇನ್ನುಳಿದಂತೆ ಸಣ್ಣಪುಟ್ಟ ಗಾಯಾಳುಗಳನ್ನ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Fri, 21 June 24