ಅತ್ಯುತ್ತಮ‌ ಚುನಾವಣಾ ಪದ್ದತಿ ಅಳವಡಿಕೆ: ಕಲಬುರಗಿ ಡಿಸಿಗೆ ಕೇಂದ್ರ ಚುನಾವಣಾ ಆಯೋಗದಿಂದ ಪ್ರಶಸ್ತಿ ಘೋಷಣೆ

ಭಾರತದ ಚುನಾವಣಾ ಆಯೋಗವು 2024-25ನೇ ಸಾಲಿನ ಅತ್ಯುತ್ತಮ ಚುನಾವಣಾ ಪದ್ಧತಿಗಳಿಗಾಗಿ ಪ್ರಶಸ್ತಿಗಳನ್ನು ಘೋಷಿಸಿದೆ. ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಜನರಲ್ ಕೆಟಗರಿಯಲ್ಲಿ ಪ್ರಶಸ್ತಿ ಪಡೆದ ಏಕೈಕ ಕರ್ನಾಟಕದ ಅಧಿಕಾರಿಯಾಗಿದ್ದಾರೆ. ಜನವರಿ 25ರಂದು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಅತ್ಯುತ್ತಮ‌ ಚುನಾವಣಾ ಪದ್ದತಿ ಅಳವಡಿಕೆ: ಕಲಬುರಗಿ ಡಿಸಿಗೆ ಕೇಂದ್ರ ಚುನಾವಣಾ ಆಯೋಗದಿಂದ ಪ್ರಶಸ್ತಿ ಘೋಷಣೆ
ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on:Jan 22, 2025 | 1:11 PM

ಕಲಬುರಗಿ, ಜನವರಿ 22: ಭಾರತ ಚುನಾವಣಾ ಆಯೋಗವು (Election Commission) 2024-25ನೇ ಸಾಲಿನ ಅತ್ಯುತ್ತಮ ಚುನಾವಣಾ ಪದ್ಧತಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದಿದ್ದಕ್ಕಾಗಿ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಿದ್ದು, ಜನರಲ್ ಕೆಟಗರಿ ವಿಭಾಗದಲ್ಲಿ ಕಲಬುರಗಿ ಜಿಲ್ಲಾಧಿಕಾರಿ (Kalaburagi DC) ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ಘೋಷಿಸಿದೆ.

ಈ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಭಾರತ ಚುನಾವಣಾ ಆಯೋಗವು, ಇದೇ ಜನವರಿ 25 ರಂದು ನವದೆಹಲಿಯ ದೆಹಲಿ ಕಂಟೋನ್ಮೆಂಟ್ ಪ್ರದೇಶದ ಮಾಣಿಕಶಾ ಸೆಂಟರ್​ನಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿ ಪುರಸ್ಕರು ಅಗಮಿಸಲು ಅಧಿಕೃತ ಆಹ್ವಾನ ನೀಡುವಂತೆ ತಿಳಿಸಿದೆ.

ಇದನ್ನೂ ಓದಿ: ಕಲಬುರಗಿಯ ಡಾ. ಸೈಯದ್ ಅನ್ವರ್ ಖುರ್ಷಿದ್​ಗೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ

ಜನರಲ್ ಕೆಟಗರಿಯಲ್ಲಿ 11, ವಿಶೇಷ ಕೆಟಗರಿಯಲ್ಲಿ 3, ಅತ್ಯುತ್ತಮ ನಿರ್ವಹಣೆಗೆ 3 ಮತ್ತು ರಾಜ್ಯದ ಸಿ.ಇ.ಓಗಳಿಗೆ ಹಾಗೂ ಅತ್ಯುತ್ತಮ ಇಲಾಖೆಗಳ ಭಾಗದಲ್ಲಿ ಕೇಂದ್ರದ ಎನ್.ಐ.ಸಿ, ರೈಲ್ವೆ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಗೆ ಚುನಾವಣಾ ಆಯೋಗ ಪ್ರಶಸ್ತಿ ಘೋಷಿಸಿದೆ.

ಇನ್ನು, ಜನರಲ್‌ ಕೆಟಗರಿಯಲ್ಲಿ ಐ.ಎ.ಎಸ್ ಅಧಿಕಾರಿಗಳಾದ 9 ಜನ ಜಿಲ್ಲಾ ಚುನಾವಣಾಧಿಗಳಿಗೆ ಮತ್ತು ಇಬ್ಬರು ಐ.ಪಿ‌.ಎಸ್ ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದ್ದು, ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಏಕೈಕ ಅಧಿಕಾರಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Wed, 22 January 25