ಕುಚಿಕು ಸ್ನೇಹಿತನ ಪತ್ನಿ ಜೊತೆಯೇ ಅಕ್ರಮ ಸಂಬಂಧ! ಪ್ರಾಣ ಸ್ನೇಹಿತನ ಪ್ರಾಣವನ್ನೇ ತೆಗೆದ ಗೆಳೆಯ
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನನ್ನೇ ಸ್ನೇಹಿತ ವೈರ್ನಿಂದ ಕತ್ತು ಬಿಗಿದು ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಕೊಲೆ ಮಾಡಿದ ಗೆಳಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕಲಬುರಗಿ, ಜುಲೈ 09: ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನ ಪ್ರಾಣವನ್ನೇ (kill) ಗೆಳೆಯ ತೆಗೆದಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಮುರಡಿಯಲ್ಲಿ ನಡೆದಿದೆ. ವೈರ್ನಿಂದ ಕತ್ತಿಗೆ ಬಿಗಿದು ಅಂಬರೀಶ್(28) ನನ್ನ ಅಜಯ್ ಹತ್ಯೆಗೈದಿದ್ದಾನೆ. ಕೊಲೆ ಮಾಡಿದ ಅಜಯ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ನಡೆದದ್ದೇನು?
ಅಂಬರೀಶ್ ಹಾಗೂ ಅಜಯ್ ಇಬ್ಬರು ಕುಚಿಕು ಗೆಳೆಯರು. ಆದರೆ ಅಜಯ್ ಪತ್ನಿ ಜೊತೆ ಅಂಬರೀಶ್ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಕೆಲ ದಿನಗಳ ಹಿಂದೆ ಅಜಯ್ ಪತ್ನಿ ಮನೆ ತೊರೆದಿದ್ದಳು. ನನ್ನ ಪತ್ನಿ ನಿನ್ನ ಮಾತು ಕೇಳುತ್ತಾಳೆ. ನನ್ನ ಜೊತೆ ಇರುವುದಕ್ಕೆ ಹೇಳುವಂತೆ ಬಾ ಎಂದು ಅಂಬರೀಶ್ ನನ್ನ ಅಜಯ್ ಬೆಂಗಳೂರಿನಿಂದ ಮುರಡಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾನೆ.
ಇದನ್ನೂ ಓದಿ: ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಆದರೂ ಬುದ್ಧಿ ಕಲಿಯದ ಇಂಜಿನಿಯರ್ ಕಳ್ಳನಾದ!
ಈ ವೇಳೆ ತನ್ನ ಮನೆಯಲ್ಲಿ ವೈರ್ನಿಂದ ಕತ್ತಿಗೆ ಬಿಗಿದು ಅಂಬರೀಶ್ನನ್ನ ಅಜಯ್ ಹತ್ಯೆ ಮಾಡಿದ್ದಾನೆ. ಸ್ನೇಹಿತ ನನ್ನು ಕೊಲೆ ಮಾಡುವುದಷ್ಟೆ ಅಲ್ಲದೆ ಅಜಯ್ ಸ್ವತಃ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ದಾವಣಗೆರೆಯಲ್ಲಿ ಇಬ್ಬರು ಅಂತಾರಾಜ್ಯ ಮಹಿಳಾ ಕಳ್ಳಿಯರ ಬಂಧನ
ದಾವಣಗೆರೆಯಲ್ಲಿ ಇಬ್ಬರು ಅಂತಾರಾಜ್ಯ ಮಹಿಳಾ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ನಗರದ ಕೆಟಿಜೆ ನಗರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದ ನಿವಾಸಿ ಆರ್.ಮಂಜುಳಾ(32), ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಿವಾಸಿ ಪೂರ್ಣಿಮಾ(20) ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಒಟ್ಟು ಮೂವರು ಶಂಕಿತ ಉಗ್ರರ ಬಂಧನ..!
ಸದ್ಯ ಬಂಧಿತರಿಂದ 15 ಲಕ್ಷ ರೂ. ಮೌಲ್ಯದ 155 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿ ಟಿ.ಸುಧಾ ಎಂಬುವರ ಚಿನ್ನಾಭರಣಗಳನ್ನು ಕಳ್ಳಿಯರು ಕದ್ದಿದ್ದರು. ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ, ಬಡಾವಣೆ ಪೊಲೀಸ್ ಠಾಣೆ, ಚಿತ್ರದುರ್ಗ ನಗರದ ಕೋಟೆ ಪೊಲೀಸ್ ಠಾಣೆ, ಹೊಳಲ್ಕೆರೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:42 am, Wed, 9 July 25







