ಅನುಮಾನದ ಭೂತ: ಪತ್ನಿಯ ಮುಖವನ್ನು ಚಾಕುವಿನಿಂದ ವಿರೂಪಗೊಳಿಸಿದ ಪತಿ
ಅವನು ಒಂದಲ್ಲಂತ ಮೂರು ಮದುವೆಯಾಗಿದ್ದನಂತೆ, ರಾತ್ರಿ ಆದ್ರೆ ಸಾಕು ಕುಡಿದು ಬಂದು ಹಿಂಸೆ ಕೊಡುತ್ತಿದ್ದನಂತೆ. ಇದರಿಂದ ಇಬ್ಬರು ಪತ್ನಿಯರು ಇವನ ಕಾಟ ತಾಳದೆ ಬಿಟ್ಟು ಹೋಗಿದ್ದಾರೆ. ಇನ್ನೂ ಎಲ್ಲಾ ಕಿರುಕುಳ, ಚಿತ್ರಹಿಂಸೆ ಸಹಿಸಿಕೊಂಡು ಇದ್ದ ಮೂರನೇ ಹೆಂಡ್ತಿ ಮೇಲೆ ಪತಿ ಅನುಮಾನಪಟ್ಟಿದ್ದು, ಆಕೆಯ ಮುಖವನ್ನೇ ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾನೆ.

ಚಿಕ್ಕಬಳ್ಳಾಪುರ, (ಜುಲೈ 07): ಪತ್ನಿ (Wife) ಮೇಲಿನ ಅನುಮಾನದಿಂದ ಪತಿರಾಯನೊಬ್ಬ (Husband) ಆಕೆ ಮುಖವನ್ನು ವಿರೂಪಗೊಳಿಸಿದ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ. ಅಶ್ವತ್ಥನಾರಾಯಣ ಎನ್ನುವಾತ ತನ್ನ ಪತ್ನಿ ಪೂಜಾಳ ನಡತೆ ಮೇಲೆ ಅನುಮಾನ ಪಟ್ಟಿದ್ದು, ಯಾರೂ ನೋಡಬಾರದೆಂದು ಚಾಕುವಿನಿಂದ ಪತ್ನಿ ಮುಖ ಕೊಯ್ದು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾನೆ. ಅಶ್ವತ್ಥನಾರಾಯಣ ಈಗಾಗಲೇ ಎರೆಡು ಮದುವೆಯಾಗಿದ್ದು, ಇದೀಗ ಮೂರನೇ ಹೆಂಡ್ತಿ ಪೂಜಾಳ ಮೇಲೆ ಅನುಮಾನಪಟ್ಟು ಆಕೆಯ ಮುಖವನ್ನು ಚಾಕುವಿನಿಂದ ಕೊಯ್ದು ಅಟ್ಟಹಾಸ ಮೆರೆದಿದ್ದಾನೆ.
ಮೊದಲಿಗೆ ಪೂಜಾಳ ಕತ್ತಿಗೆ ಚಾಕು ಹಿಡಿದಿದ್ದಾನೆ. ಆಕೆ ಜೋರಾಗಿ ಕಿರುಚಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೂ ಬೀಡದ ಪಾಪಿ, ಮನೆಯಲ್ಲಿ ಅಟ್ಟಾಡಿಸಿ ಚಾಕುವಿನಿಂದ ಪೂಜಾಳ ಕೆನ್ನೆ ಕೊಯ್ದಿದ್ದಾನೆ. ಕೊನೆಗೆ ಸ್ಥಳೀಯರ ಸಹಾಯದಿಂದ ಪೂಜಾ ಪ್ರಾಣಪಾಯದಿಂದ ಪಾರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ಗಂಡನ ವಿರುದ್ಧ ಪೊಲಿಸರು ದೂರು ನೀಡಿದ್ದು, ಪೊಲೀಸರು ಆರೋಪಿ ಅಶ್ವತ್ಥನಾರಾಯಣನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಕ್ಲರ್ಕ್ ಅತ್ಯಾಚಾರ: ಪರೀಕ್ಷೆ ಗೈಡ್ ಮಾಡ್ತೇನೆಂದು ಬಲೆಗೆ ಬೀಳಿಸಿಕೊಂಡಿದ್ದ SDA
ಅಸಲಿಗೆ ಆರೋಪಿ ಅಶ್ವತ್ಥನಾರಾಯಣ, ಪೂಜಾಳನ್ನು ಮುದುವೆ ಆಗುವುದಕ್ಕೂ ಮುನ್ನ, ಇಬ್ಬರನ್ನು ಮದುವೆಯಾಗಿದ್ದನಂತೆ. ಒಬ್ಬಾಕೆಗೆ ವಿಚ್ಛೇದನ ಪಡೆದುಕೊಂಡು ಹೋಗಿದ್ದರೆ, ಮತ್ತೋರ್ವಳು ಈತನ ಕಿರುಕುಳ ತಾಳಲಾರದೆ ಮನೆ ಬಿಟ್ಟು ಹೋಗಿದ್ದಾಳೆ. ಇನ್ನೂ ಇರೋ ಪತ್ನಿ ಪೂಜಾ ಹಾಗೂ ಮಕ್ಕಳ ಜೊತೆ ನ್ಯಾಯಯುತವಾಗಿ ಇರದ ಭಂಡ ಅಶ್ವತ್ಥನಾರಾಯಣ ಪ್ರತಿದಿನ ಕುಡಿದು ಬಂದು ಕಿರುಕುಳ ಕೊಡುತ್ತಿದ್ದಾನಂತೆ,.ಇದರಿಂದ ರೋಸಿ ಹೋದ ಪೂಜಾ, ಪತಿ ಅಶ್ವತ್ಥನಾರಾಯಣ ವಿರುದ್ಧ ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ದೂರು ನೀಡಿದ್ದು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.




