ಕಲಬುರಗಿ: ಪ್ರೀತಿ (Love) ವಿಚಾರವಾಗಿ ದಲಿತ ಯುವಕನನ್ನು ಕೊಲೆಗೈದಿರುವ (Murder) ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಶಹಾಬುದ್ದೀನ್ ಅನ್ಯ ಧರ್ಮದ ಯುವಕನನ್ನು ಪ್ರೀತಿಸಿದ್ದಕ್ಕೆ ತನ್ನ ಸಹೋದರಿ ಜೊತೆ ವರ್ಷದಿಂದ ಮಾತು ಬಿಟ್ಟಿದ್ದನಂತೆ. ಜೊತೆಗೆ ಸಹೋದರಿಗೆ ಹಲವು ಬಾರಿ ವಾರ್ನಿಂಗ್ ನೀಡಿದ್ದನಂತೆ. ತನ್ನ ಸಹೋದರಿಯನ್ನು ಪ್ರೀತಿಸುತ್ತಿದ್ದ ವಿಜಯ್ ಕಾಂಬಳೆಗೆ ಕೂಡಾ ಎಚ್ಚರಿಕೆ ನೀಡಿದ್ದ ಎಂದು ತಿಳಿದುಬಂದಿದೆ. ಎಚ್ಚರಿಕೆ ನೀಡಿದ್ದರೂ ಇಬ್ಬರು ನಿರಂತರ ಸಂಪರ್ಕದಲ್ಲಿದ್ದರು. ಪ್ರತಿದಿನ ವಾಟ್ಸಾಪ್ ಚಾಟಿಂಗ್, ಕಾಲ್ ಮಾಡುವುದು ಮಾಡುತ್ತಿದ್ದರು.
ಮೇ 25 ರಂದು ವಿಜಯ್ ಕಾಂಬಳೆ ಕೂತಿದ್ದನ್ನು ಆರೋಪಿ ಶಹಾಬುದ್ದೀನ್ ನೋಡಿದ್ದ. ತನ್ನ ಸ್ನೇಹಿತ ನವಾಜ್ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇಂದು ಫಿಲ್ಮ್ ಚೇಂಬರ್ ಚುನಾವಣೆ; ಸಾ.ರಾ.ಗೋವಿಂದು, ಬಾ.ಮಾ.ಹರೀಶ್ ಮಧ್ಯೆ ಪ್ರಬಲ ಪೈಪೋಟಿ
ಪ್ರಕರಣವೇನು?:
ಮೇ 25ರಂದು ಕಲಬುರಗಿಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೇ ನಿಲ್ದಾಣದ ಬಳಿ ಜನ ಎಂದಿನಂತೆ ಓಡಾಡುತ್ತಿದ್ದರು. ಇದೇ ಹೊತ್ತಲ್ಲಿ ರೈಲ್ವೇ ಸ್ಟೇಷನ್‌ನ ಕ್ಯಾಂಟೀನ್‌ನಲ್ಲಿ ಕುಕ್ ಆಗಿದ್ದ ವಿಜಯ್ ಕಾಂಬಳೆ, ಗೆಳೆಯನ ಜೊತೆ ಕೂತಿದ್ದ. ಅಷ್ಟರಲ್ಲಿ ನುಗ್ಗಿದ ಇಬ್ಬರು ಯುವಕರು ಚಾಕುವಿನಿಂದ ವಿಜಯ್ ಎದೆ, ಕತ್ತು ಸೇರಿದಂತೆ ದೇಹದ ತುಂಬೆಲ್ಲಾ ಇರಿದು ಎಸ್ಕೇಪ್ ಆಗಿದ್ದರು.
ವಿಜಯ್ನನ್ನು ಆಸ್ಪತ್ರೆಗೆ ಸಾಗಿಸಲು ನೋಡಿದರೂ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದ. ವಿಜಯ್ ಕಾಂಬಳೆ, ಮುಸ್ಲಿಂ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಹುಡುಗಿ ಸಹೋದರರು ಅಡ್ಡಿಪಡಿಸಿದ್ದರು. ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರಂತೆ. ಆದರೂ ಲವ್ ಕಹಾನಿ ಮುಂದುರಿದಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ಸಹೋದರ ಮತ್ತು ಆತನ ಗೆಳೆಯ ರಾತ್ರಿ ವಿಜಯ್ ಕಾಂಬಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Sat, 28 May 22