AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shruti Haasan: ‘ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ಹಲವರು ನಂಬಿದ್ದಾರೆ; ಆದರೆ..’; ಹಿಂದಿ ಚಿತ್ರರಂಗದ ಬಗ್ಗೆ ಶೃತಿ ಹಾಸನ್ ಮಾತು

Mumbai | Bollywood: ಹಲವು ಜನರು ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ನಂಬಿದ್ದಾರೆ. ಅವರ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ ಹಲವರಿಗೆ ಮುಂಬೈ ಕೇಂದ್ರಸ್ಥಾನವಾಗಿರುವುದಿಲ್ಲ ಎಂದು ಹೇಳಿದ್ದಾರೆ ಶೃತಿ ಹಾಸನ್.

Shruti Haasan: ‘ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ಹಲವರು ನಂಬಿದ್ದಾರೆ; ಆದರೆ..’; ಹಿಂದಿ ಚಿತ್ರರಂಗದ ಬಗ್ಗೆ ಶೃತಿ ಹಾಸನ್ ಮಾತು
Shruti Haasan
TV9 Web
| Edited By: |

Updated on:May 28, 2022 | 9:11 AM

Share

ಬಹುಭಾಷಾ ನಟಿ ಶೃತಿ ಹಾಸನ್ (Shruti Haasan)​ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 2009ರಲ್ಲಿ. ಹಿಂದಿಯ ‘ಲಕ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ನಂತರ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಕಮಲ್ ಹಾಸನ್ (Kamal Haasan) ಹಾಗೂ ಸಾರಿಕಾ (Sarika) ದಂಪತಿಯ ಪುತ್ರಿಯಾಗಿರುವ ಶೃತಿ, ಪೋಷಕರು 2004ರಲ್ಲಿ ವಿಚ್ಛೇದನದ ನಿರ್ಧಾರ ತೆಗೆದುಕೊಂಡ ನಂತರ ಮುಂಬೈಗೆ ತೆರಳಿದರು. ಅಲ್ಲಿಯೇ ವಾಸಿಸುತ್ತಿದ್ದ ಕಾರಣದಿಂದ ಅವರಿಗೆ ತಮಿಳಿಗಿಂತ ಬಾಲಿವುಡ್ ಪ್ರವೇಶದ ಅವಕಾಶ ಒಲಿಯಿತು. ಅಷ್ಟು ದೀರ್ಘ ಕಾಲದಿಂದ ಮುಂಬೈನಲ್ಲಿದ್ದು, ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರೂ ಕೂಡ ಅಲ್ಲಿನ ಚಿತ್ರರಂಗ ತಮ್ಮನ್ನು ‘ದಕ್ಷಿಣ ಭಾರತೀಯಳು’ ಎಂದು ಪ್ರತ್ಯೇಕವಾಗಿ ಗುರುತಿಸುವುದರ ಬಗ್ಗೆ ಇತ್ತೀಚೆಗೆ ನಟಿ ಅಸಮಾಧಾನ ಹೊರಹಾಕಿದ್ದಾರೆ.

ಬಾಂಬೆ ಟೈಮ್ಸ್​​ನೊಂದಿಗೆ ಶೃತಿ ಮಾತನಾಡಿದ್ದಾರೆ. ‘‘ಹಲವು ಜನರು ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ನಂಬಿದ್ದಾರೆ. ಅವರ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಆದರೆ ಹಲವರಿಗೆ ಮುಂಬೈ ಕೇಂದ್ರಸ್ಥಾನವಾಗಿರುವುದಿಲ್ಲ. ನಾವು ಎಲ್ಲಿ ಹೆಚ್ಚಿನ ಸಮಯ ಕೆಲಸ ಮಾಡುತ್ತೇವೋ ಅದಕ್ಕೆ ಬೇರೆಯವರಲ್ಲಿ ಕ್ಷಮೆ ಕೇಳಬೇಕಾಗಿಲ್ಲ’’ ಎಂದಿದ್ದಾರೆ ನಟಿ.

ಮುಂದುವರೆದು ಮಾತನಾಡಿರುವ ಅವರು, ‘‘ನಟಿಯಾಗಬೇಕು ಎಂದರೆ ವರ್ಷಕ್ಕೆ ಒಂದು ಹಿಂದಿ ಚಿತ್ರ ಮಾಡಲೇಬೇಕು ಎಂದು ಜನರು ಹೇಳುವ ರೇಸ್​ನಲ್ಲಿ ಮೊದಲು ನಾನೂ ಇದ್ದೆ. ಪೋಷಕರು ಬೇರೆಯಾದ ನಂತರ ತಾಯಿಯೊಂದಿಗೆ ಇಲ್ಲಿಯೇ ಇದ್ದೇನೆ. ಹಿಂದಿಯಲ್ಲೇ ಮಾತನಾಡುತ್ತೇವೆ. ಮುಂಬೈ ನನ್ನ ಊರಾಗಿದೆ. ಆದರೆ ಹಿಂದಿ ಚಿತ್ರರಂಗದ ಕೆಲವರು ‘ನೀವು ದಕ್ಷಿಣ ಭಾರತದವರು’ ಎಂದು ಹೇಗೆ ಹೇಳಲು ಸಾಧ್ಯ?’’ ಎಂದು ಪ್ರಶ್ನಿಸಿದ್ದಾರೆ ಶೃತಿ.

ಇದನ್ನೂ ಓದಿ
Image
ಇಂದು ಫಿಲ್ಮ್​ ಚೇಂಬರ್ ಚುನಾವಣೆ; ಸಾ.ರಾ.ಗೋವಿಂದು, ಬಾ.ಮಾ.ಹರೀಶ್ ಮಧ್ಯೆ ಪ್ರಬಲ ಪೈಪೋಟಿ
Image
‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​
Image
‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ
Image
Hrithik Roshan: ಹೊಸ ಗೆಳತಿ ಸಿಕ್ಕಿದ್ಮೇಲೆ ಗಡ್ಡಕ್ಕೆ ಬೈ ಬೈ ಹೇಳಲು ಪ್ಲಾನ್ ಮಾಡಿದ್ರಾ ಹೃತಿಕ್? ಇಲ್ಲಿದೆ ಅಸಲಿ ಸಮಾಚಾರ

ಶೃತಿ ತಮ್ಮ ಮದುವೆಯ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯಾವುದೇ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದಿರುವ ಅವರು, ಮದುವೆಯ ಬಗ್ಗೆ ತುಸು ನರ್ವಸ್​ ಆಗಿದ್ದೇನೆ ಎಂದಿದ್ದಾರೆ. ಹೀಗಾಗಿಯೇ ತಕ್ಷಣ ವಿವಾಹದ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದಾರೆ ನಟಿ. ಸದ್ಯ ಶೃತಿ ಕಲಾವಿದ ಶಂತನು ಹಜಾರಿಕಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ.

ಚಿತ್ರಗಳ ವಿಚಾರಕ್ಕೆ ಬಂದರೆ ಶೃತಿ ಹಾಸನ್ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಲಾರ್’ಗೆ ಅವರು ನಾಯಕಿ. ‘ಎನ್​ಬಿಕೆ 107’, ‘ಮೆಗಾ 154’ ಮೊದಲಾದ ಚಿತ್ರಗಳು ನಟಿಯ ಬತ್ತಳಿಕೆಯಲ್ಲಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:28 am, Sat, 28 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್