ಮುಸ್ಲಿಂ ಯುವತಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನ ಕೊಲೆ; ಯುವತಿ ಸಹೋದರ ಸೇರಿ ಇಬ್ಬರು ಅರೆಸ್ಟ್
ವಿಜಯ್ ಕಾಂಬಳೇ ಎಂಬ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಹಿನ್ನೆಲೆ ತನ್ನ ಸಹೋದರಿಯನ್ನು ಪ್ರೀತಿಸುತ್ತಿದ್ದಿದ್ದಕ್ಕೆ ಯುವತಿ ಸಹೋದರ ಕೊಲೆ ಮಾಡಿದ್ದ. ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಲಬುರಗಿ: ಪ್ರೀತಿ ವಿಚಾರವಾಗಿ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ದಿನದ ಹಿಂದೆ ವಿಜಯ್ ಕಾಂಬಳೆ ಅನ್ನೋ ಯುವಕನ ಕೊಲೆಯಾಗಿತ್ತು. ವಿಜಯ್ ಕಾಂಬಳೇ ಎಂಬ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಹಿನ್ನೆಲೆ ತನ್ನ ಸಹೋದರಿಯನ್ನು ಪ್ರೀತಿಸುತ್ತಿದ್ದಿದ್ದಕ್ಕೆ ಯುವತಿ ಸಹೋದರ ಕೊಲೆ ಮಾಡಿದ್ದ. ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ರಾತ್ರಿ ಯುವತಿ ಸಹೋದರ ಶಹಾಬುದ್ದೀನ್ ಮತ್ತು ಇನ್ನೋರ್ವ ಯುವಕನನ್ನು ವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಯಾದ ದಲಿತ ಯುವಕನ ಮನೆಗೆ ಭೇಟಿ ನೀಡಲಿರುವ ಸಿದ್ದಲಿಂಗ ಸ್ವಾಮೀಜಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದ್ದ ಪ್ರೀತಿ ವಿಚಾರಕ್ಕೆ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ವಿಜಯ್ ಕಾಂಬಳೆ ಮನೆಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಭೇಟಿ ನೀಡಲಿದ್ದಾರೆ. ಇಂದು ಮುಂಜಾನೆ ಹತ್ತು ಗಂಟೆ ಸುಮಾರಿಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ವೇಶ್ಯಾವಾಟಿಕೆಯೂ ಒಂದು ವೃತ್ತಿ, ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಅನ್ಯಧರ್ಮೀಯ ಯುವತಿ ಜತೆ ಪ್ರೀತಿ.. ಅಣ್ಣಂದಿರ ಆಕ್ರೋಶ ಮೇ 25ರ ರಾತ್ರಿ 8 ಗಂಟೆ ಸಮಯ.. ಕಲಬುರಗಿಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೇ ನಿಲ್ದಾಣದ ಬಳಿ ಜನ ಎಂದಿನಂತೆ ಓಡಾಡ್ತಿದ್ರು. ಇದೇ ಹೊತ್ತಲ್ಲಿ ರೈಲ್ವೇ ಸ್ಟೇಷನ್‌ನ ಕ್ಯಾಂಟೀನ್‌ನಲ್ಲಿ ಕುಕ್ ಆಗಿದ್ದ ವಿಜಯ್ ಕಾಂಬಳೆ, ಗೆಳೆಯನ ಜೊತೆ ಕೂತಿದ್ದ. ಅಷ್ಟರಲ್ಲಿ ನುಗ್ಗಿದ ಇಬ್ಬರು ಯುವಕರು ಚಾಕುವಿನಿಂದ ವಿಜಯ್ ಎದೆ, ಕತ್ತು ಸೇರಿದಂತೆ ದೇಹದ ತುಂಬೆಲ್ಲಾ ಇರಿದು ಎಸ್ಕೇಪ್ ಆಗಿದ್ದರು. ವಿಜಯ್ನನ್ನ ಆಸ್ಪತ್ರೆಗೆ ಸಾಗಿಸಲು ನೋಡಿದ್ರಾದ್ರೂ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಅಂದಹಾಗೆ ವಿಜಯ್ ಕಾಂಬಳೆ, ಮುಸ್ಲಿಂ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದನಂತೆ. ಇವರಿಬ್ಬರ ಪ್ರೀತಿಗೆ ಹುಡುಗಿ ಸಹೋದರರು ಅಡ್ಡಿಪಡಿಸಿದ್ದರಂತೆ. ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರಂತೆ. ಆದ್ರೂ ಲವ್ ಕಹಾನಿ ಮುಂದುರಿದಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ಸಹೋದರ ಮತ್ತು ಆತನ ಗೆಳೆಯ ರಾತ್ರಿ ವಿಜಯ್ ಕಾಂಬಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.
Published On - 10:02 am, Fri, 27 May 22