AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂ ಯುವತಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನ ಕೊಲೆ ಪ್ರಕರಣ; ಒಂದು ವರ್ಷದಿಂದ ತಂಗಿ ಜೊತೆ ಮಾತು ಬಿಟ್ಟಿದ್ದ ಅಣ್ಣ

ಮೇ 25 ರಂದು ವಿಜಯ್ ಕಾಂಬಳೆ ಕೂತಿದ್ದನ್ನು ಆರೋಪಿ ಶಹಾಬುದ್ದೀನ್ ನೋಡಿದ್ದ. ತನ್ನ ಸ್ನೇಹಿತ ನವಾಜ್ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಮುಸ್ಲಿಂ ಯುವತಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನ ಕೊಲೆ ಪ್ರಕರಣ; ಒಂದು ವರ್ಷದಿಂದ ತಂಗಿ ಜೊತೆ ಮಾತು ಬಿಟ್ಟಿದ್ದ ಅಣ್ಣ
ಕೊಲೆಯಾದ ವಿಜಯ್ ಕಾಂಬಳೆ
TV9 Web
| Edited By: |

Updated on:May 28, 2022 | 9:34 AM

Share

ಕಲಬುರಗಿ: ಪ್ರೀತಿ (Love) ವಿಚಾರವಾಗಿ ದಲಿತ ಯುವಕನನ್ನು ಕೊಲೆಗೈದಿರುವ (Murder) ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಶಹಾಬುದ್ದೀನ್ ಅನ್ಯ ಧರ್ಮದ ಯುವಕನನ್ನು ಪ್ರೀತಿಸಿದ್ದಕ್ಕೆ ತನ್ನ ಸಹೋದರಿ ಜೊತೆ ವರ್ಷದಿಂದ ಮಾತು ಬಿಟ್ಟಿದ್ದನಂತೆ. ಜೊತೆಗೆ ಸಹೋದರಿಗೆ ಹಲವು ಬಾರಿ ವಾರ್ನಿಂಗ್ ನೀಡಿದ್ದನಂತೆ. ತನ್ನ ಸಹೋದರಿಯನ್ನು ಪ್ರೀತಿಸುತ್ತಿದ್ದ ವಿಜಯ್ ಕಾಂಬಳೆಗೆ ಕೂಡಾ ಎಚ್ಚರಿಕೆ ನೀಡಿದ್ದ ಎಂದು ತಿಳಿದುಬಂದಿದೆ. ಎಚ್ಚರಿಕೆ ನೀಡಿದ್ದರೂ ಇಬ್ಬರು ನಿರಂತರ ಸಂಪರ್ಕದಲ್ಲಿದ್ದರು. ಪ್ರತಿದಿನ ವಾಟ್ಸಾಪ್ ಚಾಟಿಂಗ್, ಕಾಲ್ ಮಾಡುವುದು ಮಾಡುತ್ತಿದ್ದರು.

ಮೇ 25 ರಂದು ವಿಜಯ್ ಕಾಂಬಳೆ ಕೂತಿದ್ದನ್ನು ಆರೋಪಿ ಶಹಾಬುದ್ದೀನ್ ನೋಡಿದ್ದ. ತನ್ನ ಸ್ನೇಹಿತ ನವಾಜ್ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಂದು ಫಿಲ್ಮ್​ ಚೇಂಬರ್ ಚುನಾವಣೆ; ಸಾ.ರಾ.ಗೋವಿಂದು, ಬಾ.ಮಾ.ಹರೀಶ್ ಮಧ್ಯೆ ಪ್ರಬಲ ಪೈಪೋಟಿ

ಇದನ್ನೂ ಓದಿ
Image
BSF Recruitment 2022: 10ನೇ ತರಗತಿ ಪಾಸಾದವರಿಗೆ BSF ನಲ್ಲಿ ಉದ್ಯೋಗಾವಕಾಶ
Image
Crime News: ಅನ್ಯಕೋಮಿನವರಿಂದ ಯುವಕನ ಮೇಲೆ ಚಾಕು ಇರಿತ, ಗಾಯಾಳು ಆಸ್ಪತ್ರೆಗೆ ದಾಖಲು!
Image
ಇನ್ನು ಈ 16 ಔಷಧಿ ಖರೀದಿಸಲು ಪ್ರಿಸ್ಕ್ರಿಪ್ಷನ್ ಬೇಕಾಗಿಲ್ಲ; ಶೀಘ್ರದಲ್ಲೇ ಪರಿಷ್ಕೃತ ನಿಯಮ ಜಾರಿ
Image
Shruti Haasan: ‘ಮುಂಬೈಯನ್ನೇ ವಿಶ್ವದ ಕೇಂದ್ರ ಸ್ಥಾನ ಎಂದು ಹಲವರು ನಂಬಿದ್ದಾರೆ; ಆದರೆ..’; ಹಿಂದಿ ಚಿತ್ರರಂಗದ ಬಗ್ಗೆ ಶೃತಿ ಹಾಸನ್ ಮಾತು

ಪ್ರಕರಣವೇನು?: ಮೇ 25ರಂದು ಕಲಬುರಗಿಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೇ ನಿಲ್ದಾಣದ ಬಳಿ ಜನ ಎಂದಿನಂತೆ ಓಡಾಡುತ್ತಿದ್ದರು. ಇದೇ ಹೊತ್ತಲ್ಲಿ ರೈಲ್ವೇ ಸ್ಟೇಷನ್‌ನ ಕ್ಯಾಂಟೀನ್‌ನಲ್ಲಿ ಕುಕ್ ಆಗಿದ್ದ ವಿಜಯ್ ಕಾಂಬಳೆ, ಗೆಳೆಯನ ಜೊತೆ ಕೂತಿದ್ದ. ಅಷ್ಟರಲ್ಲಿ ನುಗ್ಗಿದ ಇಬ್ಬರು ಯುವಕರು ಚಾಕುವಿನಿಂದ ವಿಜಯ್ ಎದೆ, ಕತ್ತು ಸೇರಿದಂತೆ ದೇಹದ ತುಂಬೆಲ್ಲಾ ಇರಿದು ಎಸ್ಕೇಪ್ ಆಗಿದ್ದರು.

ವಿಜಯ್​ನನ್ನು ಆಸ್ಪತ್ರೆಗೆ ಸಾಗಿಸಲು ನೋಡಿದರೂ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದ. ವಿಜಯ್ ಕಾಂಬಳೆ, ಮುಸ್ಲಿಂ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಹುಡುಗಿ ಸಹೋದರರು ಅಡ್ಡಿಪಡಿಸಿದ್ದರು. ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರಂತೆ. ಆದರೂ ಲವ್ ಕಹಾನಿ ಮುಂದುರಿದಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ಸಹೋದರ ಮತ್ತು ಆತನ ಗೆಳೆಯ ರಾತ್ರಿ ವಿಜಯ್ ಕಾಂಬಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 am, Sat, 28 May 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್