ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಬಿಯರ್ ಬಾಟಲ್​ಗಳಿಂದ ಹಲ್ಲೆ

| Updated By: ಆಯೇಷಾ ಬಾನು

Updated on: Nov 19, 2023 | 8:54 AM

ಚಿತ್ತಾಪೂರ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ಚಿತ್ತಾಪೂರದಿಂದ ಕಲಬುರಗಿಗೆ ಬರುತ್ತಿರುವಾಗ ಶಹಾಬಾದ ಬಳಿ ಅಪರಿಚಿತರು ಮಣಿಕಂಠ ಅವರ ವಾಹನ ತಡೆದು ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಣಿಕಂಠ ಅವರಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸಲಾಗುತ್ತಿದೆ.

ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಬಿಯರ್ ಬಾಟಲ್​ಗಳಿಂದ ಹಲ್ಲೆ
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಬಿಯರ್ ಬಾಟಲ್​ಗಳಿಂದ ಹಲ್ಲೆ
Follow us on

ಕಲಬುರಗಿ, ನ.19: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಚಿತ್ತಾಪೂರ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ (Manikanta Rathod) ಅವರು ಚಿತ್ತಾಪೂರದಿಂದ (Chittapur) ಕಲಬುರಗಿಗೆ ಬರುತ್ತಿರುವಾಗ ಶಹಾಬಾದ ಬಳಿ ಅಪರಿಚಿತರು ಮಣಿಕಂಠ ಅವರ ವಾಹನ ತಡೆದು ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ಅಪರಿಚಿತರಿಂದ ನಡೆದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಮಣಿಕಂಠ ಅವರಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸಲಾಗುತ್ತಿದೆ.

ವಾಷಿಂಗ್ ಮೆಷಿನ್ ಇನ್ಸ್ಟಾಲ್ ಮಾಡಿಲ್ಲ ಎಂದು ಯುವಕನ ಮೇಲೆ ಹಲ್ಲೆ

ಇನ್ನು ಮತ್ತೊಂದೆಡೆ ವಾಷಿಂಗ್ ಮೆಷಿನ್ ಇನ್ಸ್ಟಾಲ್ ಮಾಡಿಲ್ಲ ಎಂದು ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇಬ್ಬರು ಸೇರಿಕೊಂಡು ಯುವಕನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಎಲ್​ಜಿ ಶೋರೂಂನಲ್ಲಿ ಧರ್ಮರಾಜು ಎಂಬುವವರು ವಾಷಿಂಗ್ ಮೆಷಿನ್ ಖರೀದಿ ಮಾಡಿದ್ದರು. ಅದರ ಇನ್ಸ್ಟಾಲೇಷನ್ ಜವಾಬ್ದಾರಿಯನ್ನು ಮಂಜುನಾಥ್ ಗೆ ವಹಿಸಲಾಗಿತ್ತು. ಆದರೆ ಧರ್ಮರಾಜು ಅವರ ಮನೆಯಲ್ಲಿ ವಾಷಿಂಗ್ ಮೆಷಿನ್ ಇನ್ಸ್ಟಾಲ್ ಮಾಡಲು ಸೂಕ್ತ ಸ್ಥಳವಿರಲಿಲ್ಲ. ಹೀಗಾಗಿ ಗ್ರಾಹಕರಿಗೆ ವಿಚಾರ ತಿಳಿಸಿ ವಾಪಾಸ್ ಬಂದಿದ್ದ. ನಂತರ ಧನರಾಜ್ ಪತ್ನಿ ಕರೆ ಮಾಡಿ ಇನ್ಸ್ಟಾಲೇಷನ್ ಮಾಡುವಂತೆ ಕೇಳಿದ್ದಾರೆ. ಈ ವೇಳೆ ಕಷ್ಟಮರ್ ಕೇರ್​ಗೆ ಕರೆ ಮಾಡಿ ರಿಜಿಸ್ಟರ್ ಮಾಡಿಸಬೇಕು ಎಂದು ಮಂಜುನಾಥ್ ತಿಳಿಸಿದ್ದಾರೆ. ಈ ವಿಚಾರ ತಿಳಿದು ಶೋರೂಂಗೆ ಬಂದಿದ್ದ ಧನರಾಜ್ ಹಾಗೂ ಅವರ ಸ್ನೇಹಿತ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿದೆ.

ಇದನ್ನೂ ಓದಿ: ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್: ಕೊಲೆ ಕಾರಣ ರಿವಿಲ್

ಅಕ್ಟೀವಾಗೆ ಕಾರು ಡಿಕ್ಕಿ, ಶಿಕ್ಷಕಿಗೆ ಗಂಭೀರ ಗಾಯ

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಜಿಂದಾಲ್ ಸಿಟಿಯಿಂದ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬರುವಾಗ ಅಕ್ಟೀವಾಗೆ ಕಾರು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಅಕ್ಟೀವಾದಲ್ಲಿದ್ದ ಶಿಕ್ಷಕಿ ಕಾಲಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಹಿಂಬದಿ ಕೂತಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶಿಕ್ಷಕಿ ನಾಗವೇಣಿ ಅರಾಧ್ಯಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸರ್ವೀಸ್ ರಸ್ತೆಯಲ್ಲಿ ಸ್ಪೀಡ್ ಹಂಫ್ ಹಾಕಲು ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:49 am, Sun, 19 November 23