ಕಲಬುರಗಿ, ಫೆಬ್ರವರಿ 29: ಜೀವಂತ ಇರುವ ಪತಿ ಮೃತಪಟ್ಟಿರುವುದಾಗಿ ಸುಳ್ಳು ಮರಣ ಪ್ರಮಾಣ ಪತ್ರ ಸಲ್ಲಿಸಿ 2019ರ ಜುಲೈನಿಂದ 2022ರ ಜನವರಿ ವರೆಗೆ ಪಿಂಚಣಿ (widow pension) ಪಡೆದಿದ್ದಾಳೆ ಎಂದು ಆರೋಪಿಸಿ ಪತ್ನಿಯ ವಿರುದ್ಧ ಸ್ವತಃ ಪತಿಯೇ (husband) ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ (Kalaburagi) ದೂರು ದಾಖಲಿಸಿದ್ದಾರೆ. ನಂದಿ ಕಾಲೊನಿಯ ನಿವಾಸಿ, ನಿವೃತ್ತ ನೌಕರ ರುಕ್ಮಣ್ಣ ಮಡಿವಾಳ ಅವರು ತಮ್ಮ ಪತ್ನಿ ಬೀದರ್ ಜಿಲ್ಲೆಯ ಖೇಣಿ ರಂಜೋಳ ಗ್ರಾಮದಲ್ಲಿದ್ದ ಶಕುಂತಲಾ ವಿರುದ್ಧ ಈ ದೂರು ನೀಡಿದ್ದಾರೆ.
1980 ರುಕ್ಮಣ್ಣ ಮತ್ತು ಶಕುಂತಲಾ ಅವರ ಮದುವೆಯಾಗಿದ್ದು ಮೂವರು ಪುತ್ರರಿದ್ದಾರೆ. ಶಕುಂತಲಾ ಅವರು 1991ರಲ್ಲಿ ಪತಿಯನ್ನು ರಂಜೋಳ ಗ್ರಾಮದ ತವರು ಮನೆಗೆ ಹೋದರು. ಅದಾದಮೇಲೆ ರುಕ್ಮಣ್ಣ ತನ್ನ ಪತ್ನಿಯ ಜೊತೆ ಯಾವುದೇ ಸಂಪರ್ಕ ಇರಿಸಿಕೊಂಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Also Read: ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟ ಜಾಂಬವಂತ! ಬೆಚ್ಚಿಬಿದ್ದ ಜನ, ಓರ್ವನ ಮೇಲೆ ದಾಳಿ, ಕೊನೆಗೂ ಬಲೆಗೆ ಬಿದ್ದ ಕಿಲಾಡಿ ಕರಡಿ
ಆದರೆ 2022ರಲ್ಲಿ ಜೀವನಾಂಶ ಭತ್ಯೆ ನೀಡುವಂತೆ ಶಕುಂತಲಾ ಅವರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆಗೆ ಹಾಜರಾದಾಗ ಪತಿ ಮೃತಪಟ್ಟಿದ್ದಾರೆ ಎಂದು ಬೀದರ್ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಿಂದ ಸುಳ್ಳು ಮರಣ ಪ್ರಮಾಣ ಪತ್ರ ಪಡೆದಿದ್ದರು. 2019ರಿಂದ 2022ರವರೆಗೆ ವಿಧವಾ ವೇತನ ಪಡೆದಿದ್ದು, 2022ರಲ್ಲಿ ಅದನ್ನು ವಯೋವೃದ್ಧರ ಪಿಂಚಣಿ ಎಂದು ಬದಲಾಯಿಸಿಕೊಂಡಿದ್ದಾಳೆ ಎಂದು ಆರೋಪಿಸಿ ರುಕ್ಮಣ್ಣ ಅವರು ಜೆಂಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Thu, 29 February 24