ಸರ್ಕಾರಿ ಹುದ್ದೆ ಆಸೆಗಾಗಿ 80 ಸಾವಿರ ರೂ. ಸಂಬಳದ ನೌಕರಿ ಬಿಟ್ಟು ಬಂದು ಈಗ ಜೈಲು ಸೇರಿದ

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಬತ್ತು ಸಾವಿರ ರೂ. ಸಂಬಳ ಪಡೆಯುತ್ತಿದ್ದ ಯುವಕನೋರ್ವ ರಕಾರಿ ನೌಕರಿ ಬಯಸಿ ಬಂದು ಇದೀಗ ಜೈಲು ಸೇರಿದ್ದಾನೆ. 80 ಸಾವಿರ ರೂ. ಸಂಬಳದ ನೌಕರಿ ಬಿಟ್ಟು ಸರಕಾರಿ ನೌಕರಿ ಪಡೆಯಲು ಅಡ್ಡ ದಾರಿ ಹಿಡಿದ ತಪ್ಪಿಗೆ ಈಗ ಆಕಾಶ ಮಂಠಾಳೆ ಜೈಲು ಸೇರಿದ್ದಾನೆ.

ಸರ್ಕಾರಿ ಹುದ್ದೆ ಆಸೆಗಾಗಿ 80 ಸಾವಿರ ರೂ. ಸಂಬಳದ ನೌಕರಿ ಬಿಟ್ಟು ಬಂದು ಈಗ ಜೈಲು ಸೇರಿದ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 29, 2023 | 3:52 PM

ಕಲಬುರಗಿ (ಅಕ್ಟೋಬರ್ 29): ಕೆಪಿಎಸ್ಸಿಯ (KPSC) ವಿವಿಧ ಇಲಾಖೆಗಳ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬ್ಲೂಟೂತ್ ಬಳಸಿಯೇ ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದವರು ಸಿಕ್ಕಿಬಿದ್ದಿದ್ದಾರೆ. ಮತ್ತೊಂದೆಡೆ ಯುವಕನೋರ್ವ 80 ಸಾವಿರ ರೂಪಾಯಿ ಸಂಬಳ ಬಿಟ್ಟು ಸರ್ಕಾರಿ ನೌಕರಿ ಆಸೆಗೆ ಬಿದ್ದು ಜೈಲು ಸೇರಿದ್ದಾನೆ.

ಆಕಾಶ ಮಂಠಾಳೆ ಕೆಎಇ ನಡೆಸುತ್ತಿರುವ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಅಕ್ರಮದಲ್ಲಿ ಸಿಕ್ಕಿಬಿದ್ದಿದ್ದಾನೆ. ಈತ ಬಿಇ ಮೆಕ್ಯಾನಿಕಲ್ ವ್ಯಾಸಾಂಗ ಮಾಡಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಬತ್ತು ಸಾವಿರ ರೂ. ಸಂಬಳ ಪಡೆಯುತ್ತಿದ್ದ. ಆದರೂ ಸರಕಾರಿ ನೌಕರಿ ಬಯಸಿ ಸ್ಪರ್ದಾತ್ಮಕ ಪರೀಕ್ಷೆ ಬರೆಯಲು ಮುಂದಾಗಿದ್ದು, ಹೇಗಾದ್ರೂ ಮಾಡಿ ನೌಕರಿ ಪಡಿಬೇಕು ಎನ್ನುವ ದುರಾಸೆಯಿಂದ ಆರ್.ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡು ಪರೀಕ್ಷಾ ಅಕ್ರಮಕ್ಕಿಳಿದಿದ್ದ.

ಇದನ್ನೂ ಓದಿ: ಬ್ಲೂಟೂತ್ ಬಳಸಿ FDA ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ: ಈ ಪ್ರಕರಣದಲ್ಲೂ ಆರ್​​ಡಿ ಪಾಟೀಲ್​ ಪ್ರಮುಖ ಆರೋಪಿ

25 ಲಕ್ಷ ರೂ. ಆರ್.ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡು ಈ ಪೈಕಿ 8 ಲಕ್ಷ ರೂ. ಅಡ್ವಾನ್ಸ್ ಸಹ ಕೊಟ್ಟಿದ್ದ ಎನ್ನುವ ಶಂಕೆ ವ್ಯಕ್ತವಾಗಿದೆ. ಆದರೆ ಪರೀಕ್ಷೆ ಕೇಂದ್ರದೊಳಗೆ ಹೋಗುವ ಮುನ್ನವೇ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾನೆ. ಇದರೊಂಇದಗೆ 80 ಸಾವಿರ ರೂ. ಸಂಬಳದ ನೌಕರಿ ಬಿಟ್ಟು ಸರಕಾರಿ ನೌಕರಿ ಪಡೆಯಲು ಅಡ್ಡ ದಾರಿ ಹಿಡಿದ ತಪ್ಪಿಗೆ ಈಗ ಆಕಾಶ ಮಂಠಾಳೆ ಜೈಲು ಸೇರಿದ್ದಾನೆ.

ಅಕ್ರಮದ ಸುಳಿವಿದ್ದರೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು?

ಈ ಹಿಂದೆ ಪಿಎಸೈ ನೇಮಕ ಪರೀಕ್ಷೆಯಲ್ಲಿ ನಡೆದಂತಹ ಅಕ್ರಮದ ಮಾದರಿಯಲ್ಲೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳಿಗೆ ಶನಿವಾರ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ನಡೆಯಬಹುದು. ಇದನ್ನು ತಡೆಗಟ್ಟಿ ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಘದ ಮುಖಂಡ ರವಿಶಂಕರ್ ಮಾಲೀಪಾಟೀಲ್‌ ಅವರು ಕೆಲವು ದಿನಗಳ ಹಿಂದಷ್ಟೇ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಹೀಗಾಗಿ, ಅಕ್ರಮದ ಸುಳಿವಿದ್ದರೂ ಕೂಡ, ಬಿಗಿ ಕ್ರಮ ಕೈಗೊಳ್ಳಬೇಕಿದ್ದ ಪ್ರಾಧಿಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ? ಎಂಬ ಅನುಮಾನ ಕಾಡುತ್ತಿದೆ.

ಈ ಪರೀಕ್ಷೆಗಳಲ್ಲಿ ‘ಬ್ಲೂಟೂತ್‌’ ದುರ್ಬಳಕೆಯಾಗುವ ಸಾಧ್ಯತೆಯಿದೆ. ಜೊತೆಗೆ, ಪಿಎಸೈ ನೇಮಕ ಪರೀಕ್ಷೆಯಲ್ಲಿನ ಅಕ್ರಮ ಮಾದರಿಯಲ್ಲೇ ಉತ್ತರಗಳ ಜಾಗ ಖಾಲಿ ಬಿಟ್ಟು, ನಂತರ ಅದನ್ನು ತುಂಬುವ ಸಂಚು ನಡೆಯುವ ಸಾಧ್ಯತೆಯಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ. ಇದನ್ನು ತಡೆಗಟ್ಟಿ ಎಂದು ರವಿಶಂಕರ್ ಮಾಲೀಪಾಟೀಲ್‌ ಕೆಲವು ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ ಖರ್ಗೆ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು.