ಬ್ಲೂಟೂತ್ ಬಳಸಿ FDA ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನ: ಈ ಪ್ರಕರಣದಲ್ಲೂ ಆರ್ಡಿ ಪಾಟೀಲ್ ಪ್ರಮುಖ ಆರೋಪಿ
ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಫ್ಡಿಎ ಪರೀಕ್ಷೆ ನಡೆಸಿತ್ತು. ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಫಡಿಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾದ ಬಾಬು ಚಾಂದ್ ಶೇಖ್, ಸಂತೋಷ ಯಾಳಗಿ, ಆಕಾಶ್ ಬ್ಲೂಟುತ್ ಡಿವೈಸ್ ಬಳಸಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು.
ಕಲಬುರಗಿ ಅ.29: ಎಫ್ಡಿಎ ಹುದ್ದೆಗಳಿಗೆ ನಡೆದ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸಿದ್ದ ಆರೋಪದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಈ ಪ್ರಕರಣದಲ್ಲೂ ಪಿಎಸ್ಐ (PSI) ಅಕ್ರಮದ ಕಿಂಗ್ಪಿನ್ ಆರ್.ಡಿ.ಪಾಟೀಲ್ ಪ್ರಮುಖ ಆರೋಪಿಯಾಗಿದ್ದಾನೆ. ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಫ್ಡಿಎ (FDA) ಪರೀಕ್ಷೆ ನಡೆಸಿತ್ತು.
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಫಡಿಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾದ ಬಾಬು ಚಾಂದ್ ಶೇಖ್, ಸಂತೋಷ ಯಾಳಗಿ, ಆಕಾಶ್ ಬ್ಲೂಟುತ್ ಡಿವೈಸ್ ಬಳಸಿ ನಕಲು ಮಾಡುತ್ತಿದ್ದರು. ಈ ವೇಳೆ ಪರೀಕ್ಷಾ ಕೊಠಡಿ ಮೇಲ್ವಿಚಾರಕ ಇವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ಅಲ್ಲದೆ ಇವರಿಗೆ ಸಹಾಯ ಮಾಡಿದ್ದ ಹಾಗೂ ಬ್ಲೂಟುತ್ ಡಿವೈಸ್ ನೀಡಿದ್ದ ಆರ್.ಡಿ ಪಾಟೀಲ್ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: PSI ಪರೀಕ್ಷೆ ಹಗರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೊಂದು ಹಗರಣ ಬೆಳಕಿಗೆ
ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿ ಈಗಷ್ಟೆ ಹೊರಬಂದರೂ ತನ್ನ ಹಳೆ ಚಾಳಿ ಬಿಡದ ಆರ್ಡಿ ಪಾಟೀಲ್, ಕೆಇಎ ಪರೀಕ್ಷೆಯಲ್ಲೂ ಗೋಲ್ ಮಾಲ್ ಮಾಡಲು ಮುಂದಾಗಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 am, Sun, 29 October 23