AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಕಾರಿ ಜಮೀನನ್ನು ಖಾಸಗಿಗೆ ಪರಭಾರೆ ಮಾಡಿದ್ದ ಸಹಕಾರಿ ಸಂಸ್ಥೆ! ಗನ್ ಇಟ್ಟು ಬೆದರಿಕೆ! ಆದರೂ ಸ್ವಾಧೀನಪಡಿಸಿಕೊಂಡ ಜಿಲ್ಲಾಡಳಿತ

kalaburagi dc: ಸೀಜ್ ಮಾಡಲು ಹೋದ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಗನ್ ಇಟ್ಟುಕೊಂಡು ಬಂದಿದ್ದ ಮಾಲೀಕರ ಬಳಿಯಿದ್ದ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸರಕಾರಿ ಜಮೀನನ್ನು ಖಾಸಗಿಗೆ ಪರಭಾರೆ ಮಾಡಿದ್ದ ಸಹಕಾರಿ ಸಂಸ್ಥೆ! ಗನ್ ಇಟ್ಟು ಬೆದರಿಕೆ! ಆದರೂ ಸ್ವಾಧೀನಪಡಿಸಿಕೊಂಡ ಜಿಲ್ಲಾಡಳಿತ
ಸರಕಾರಿ ಜಮೀನನ್ನು ಖಾಸಗಿಗೆ ಪರಭಾರೆ ಮಾಡಿದ್ದ ಸಹಕಾರಿ ಸಂಸ್ಥೆ! ಗನ್ ಇಟ್ಟು ಬೆದರಿಕೆ! ಆದರೂ ಸ್ವಾಧೀನಪಡಿಸಿಕೊಂಡ ಜಿಲ್ಲಾಡಳಿತ
TV9 Web
| Updated By: ಸಾಧು ಶ್ರೀನಾಥ್​|

Updated on: Oct 04, 2022 | 5:14 PM

Share

ಕಲಬುರಗಿ: ಕಲಬುರಗಿಯಲ್ಲಿ ಗುತ್ತಿಗೆ ನಿಯಮ ಉಲ್ಲಂಘಿಸಿ, 4 ಎಕರೆ ಸರ್ಕಾರಿ ಗಾಯರಾಣ ಭೂಮಿಯನ್ನು ಮತ್ತೊಬ್ಬರಿಗೆ ಪರಭಾರೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಸಂಸ್ಥೆಯಿಂದ ಪರಭಾರೆಯಾಗಿದೆ. ಸರ್ಕಾರಿ ಭೂಮಿಯನ್ನು ಗುತ್ತಿಗೆ ಪಡೆದಿದ್ದ ಎರಡೂ ಸಂಸ್ಥೆಗಳು ನಿಯಮ ಉಲ್ಲಂಘಿಸಿ, ಶಾಮರಾವ್ ಎಂಬುವರಿಗೆ ಭೂಮಿ ಗುತ್ತಿಗೆ ನೀಡಿದ್ದವು. ಪರಭಾರೆ ಆಗಿದ್ದ 4 ಎಕರೆ ಜಮೀನಿನಲ್ಲಿ ಕಲ್ಯಾಣ ಮಂಟಪ ನಿರ್ಮಾಣವಾಗಿದ್ದು, ಸದರಿ ಜೈ ಭವಾನಿ ಕಲ್ಯಾಣ ಮಂಟಪವನ್ನು ಅಧಿಕಾರಿಗಳು ಇದೀಗ ಸೀಜ್ ಮಾಡಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಆದೇಶದ ಮೇರೆಗೆ ಕಲ್ಯಾಣ ಮಂಟಪವನ್ನು ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಂಡಿದೆ.

ಗಮನಾರ್ಹವೆಂದರೆ ಸೀಜ್ ಮಾಡಲು ಹೋದ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಗನ್ ಇಟ್ಟುಕೊಂಡು ಬಂದಿದ್ದ ಮಾಲೀಕರ ಬಳಿಯಿದ್ದ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.